Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.11.2023 (Kids Special)
Share:

By Village Missionary Movement

Sunday, 19-Nov-2023

ಧೈನಂದಿನ ಧ್ಯಾನ(Kannada) – 19.11.2023 (Kids Special)

 

ಅಂತರಿಕ್ಷ ನೌಕೆ ಹೊರಟಿತು

 

"ನಿನ್ನ ದೇವರ ಬರುವಿಕೆಗೆ ನಿನ್ನನ್ನು ಸಿದ್ಧಮಾಡಿಕೋ" - ಆಮೋಸ 4:12

 

ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ವಿಹಾರಕ್ಕೆ ಹೋಗುವುದು ಎಲ್ಲರಿಗೂ ಇಷ್ಟ, ಹೌದಲ್ವಾ ಪುಟಾಣಿಗಳೇ? ನೀವು ಸಹ ರೈಲು, ಬಸ್ ಅಥವಾ ಕಾರಿನಲ್ಲಿ ಹೋಗುವುದನ್ನು enjoy ಮಾಡಿರ್ತೀರ ಅಲ್ವಾ? ನೀವು ಹೋಗದ ಸ್ಥಳಕ್ಕೆ ರೋಜರ್ ಹೋಗಿಬಂದೆ ಅಂತಾ ಹೇಳ್ತಿದಾನೆ, ಏನು ಅಂತಾ ಕೇಳೋಣ್ವಾ?

 

ತನ್ನ ಹಳ್ಳಿಯಿಂದ 20 ಕಿಮೀ ದೂರದ ಸ್ಥಳದಲ್ಲಿ ರಾತ್ರಿ ವೇಳೆಯಲ್ಲಿ ಅಂತರಿಕ್ಷ ನೌಕೆ ಹೊರಡಲಿದೆ ಎಂಬ ಸುದ್ದಿ ಕೇಳಿ ರೋಜರ್ ತುಂಬಾ ಸಂತೋಷಪಟ್ಟನು. ಏನು ಪುಟಾಣಿಗಳೇ ಚಂದ್ರಯಾನ 3 ಚಂದ್ರನ ಬಳಿಗೆ ಹೋಗಿ ಫೋಟೋ ಹಿಡಿದು ತೋರಿಸಿದ್ದನ್ನು ಇಡೀ ಜಗತ್ತು ನೋಡಿ ಆಶ್ಚರ್ಯಪಡಲಿಲ್ಲವೇ? ಅದೇ ರೀತಿ ಈ ರೋಜರ್ ಗೂ ಕೂಡ ಅಂತರಿಕ್ಷ ನೌಕೆ ಹೋಗುವುದನ್ನು ನೋಡಬೇಕೆನಿಸಿತು. ರೋಜರ್ ಮತ್ತು ಅವನ ತಂದೆ ಇಬ್ಬರೂ ಅಂತರಿಕ್ಷ ನೌಕೆಯು ಹೊರಡುವುದು ಚೆನ್ನಾಗಿ ಕಾಣಿಸುವ ಒಂದು ಸ್ಥಳಕ್ಕೆ ಬಂದು ನಿಂತುಕೊಂಡರು. 

 

ಅಂತರಿಕ್ಷ ನೌಕೆ ಎಷ್ಟು ದೂರ ಹೋಗಲಿದೆ ಎಂದು ಯೋಚಿಸುತ್ತಿರುವಾಗಲೇ ಹಳದಿ ಬೆಳಕು ಕಾಣಿಸಿತು. ಬೆಳಕು ಆಕಾಶದಾದ್ಯಂತ ಹರಡಿತು. ಹಯ್ಯ ದೊಡ್ಡ ಬೆಂಕಿಯ ಉಂಡೆಯಂತೆ ಹೋಗುತ್ತಿದೆ ಎಂದು ಕೂಗುತ್ತಾ ಮೇಲಕ್ಕೆ ಜಿಗಿದನು. ಅದು ಮೇಲೆ ಬಿಳಿ ಮತ್ತು ಸಣ್ಣ ಕೆಂಪು ಚುಕ್ಕೆಯಾಗುವವರೆಗೂ ಅವರು ನೋಡುತ್ತಾ ನಿಂತರು. ರೋಜರ್‌ನ ಸಂತೋಷಕ್ಕೆ ಪಕ್ಕದಲ್ಲಿದ್ದವರು ಮುಗುಳ್ನಕ್ಕರು. ರೋಜರ್ ನ ಭುಜದ ಮೇಲೆ ಕೈಯಿಟ್ಟು ತಮ್ಮಾ ಈಗ ಆಕಾಶನೌಕೆ ಹೋದ ಆಕಾಶ ನೋಡಿ ನಮಗೆ ಖುಷಿ ಆಯ್ತು ಅಲ್ವಾ! ಇದಕ್ಕಿಂತ ಒಂದು ದೊಡ್ಡ ಸಂತೋಷದ ಸಂಗತಿಯು ಸಂಭವಿಸಲಿದೆ. ಅದು ನಾವು ಯೇಸುವನ್ನು ಭೇಟಿಯಾಗುವ ಸಮಯ. ನಾವು ಅದಕ್ಕೆ ಸಿದ್ಧರಾಗಿರಬೇಕು. ಅದಕ್ಕೆ ಏನು ಮಾಡಬೇಕು ಎಂದು ಕೇಳುವಂತಿತ್ತು ರೋಜರ್ ನ ನೋಟ. ಇದೇ ಉತ್ತಮ ಅವಕಾಶ ಎಂದು ರೋಜರ್ ಪರಲೋಕ ಹೋಗುವ ದಾರಿಯನ್ನು ತಿಳಿದುಕೊಳ್ಳಬೇಕೆ ಎಂದು ತಂದೆ ಮಾತು ಮುಂದುವರಿಸಿದರು. ನಾವು ಯೇಸುವನ್ನು ನಮ್ಮ ಹೃದಯದಲ್ಲಿ ಸ್ವೀಕರಿಸಿದಾಗ ಮತ್ತು ಆತನ ಮಕ್ಕಳಂತೆ ಬದುಕಿದಾಗ ಮಾತ್ರ ನಾವು ಆತನ ಬರುವಿಕೆಯಲ್ಲಿ ಹೋಗಬಹುದು. ತನ್ನ ಪ್ರೀತಿಪಾತ್ರರು ಮಾತ್ರ ಮೇಘಗಳಲ್ಲಿ ಯೇಸುವಿನೊಂದಿಗೆ ಹಾರಿಹೋಗಬಹುದು ಎಂದು ತಂದೆ ಹೇಳಿದಾಗ, ಅಂತರಿಕ್ಷ ನೌಕೆಯನ್ನು ನೋಡಲು ಹೋದ ರೋಜರ್

ಯೇಸುವಿನ ಬರುವಿಕೆಯ ಬಗ್ಗೆ ತಿಳಿದುಕೊಂಡಿದ್ದು ಎಷ್ಟು ಮುಖ್ಯ ಎಂದು ಅರಿತುಕೊಂಡನು.

 

ಏನು ಪುಟಾಣಿಗಳೇ, ಮೇಘಗಳಲ್ಲಿ ಬರುವ ಯೇಸುವನ್ನು ಭೇಟಿ ಮಾಡಲು ನೀವು ಸಿದ್ಧರಿದ್ದೀರಾ? ನೀವು ನಿಮ್ಮ ಪಾಪವನ್ನು ಯೇಸಪ್ಪನ ಬಳಿ ಹೇಳಿ ಆತನ ರಕ್ತದಿಂದ ತೊಳೆಯಲ್ಪಟ್ಟು ಪ್ರತಿದಿನ ಯೇಸುವಿಗೆ ಇಷ್ಟವಾದದ್ದನ್ನು ಮಾಡಿದರೆ, ನೀವು ಖಂಡಿತವಾಗಿಯೂ ಯೇಸುವಿನೊಂದಿಗೆ ಹಾರಿಹೋಗುವಿರಿ. Bye!

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al