Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.11.2023
Share:

By Village Missionary Movement

Thursday, 16-Nov-2023

ಧೈನಂದಿನ ಧ್ಯಾನ(Kannada) – 16.11.2023

 

ಯೇಸು ಯಾವಾಗಲೂ ನಮ್ಮೊಂದಿಗಿದ್ದಾರೆ 

 

"...ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು…" - ಯೆರೆಮಿಾಯ 1:8

 

ವಿದೇಶಿಯರಾದ ವಿಲಿಯಂ ಎಂಬವರು ತಮ್ಮ ಪತ್ನಿ ಮೇರಿ ಟ್ಯಾನರ್ ಅವರೊಂದಿಗೆ ರೈಲು ಮಾರ್ಗವನ್ನು ದಾಟುತ್ತಿದ್ದರು. ಹಠಾತ್ತನೆ ದೂರದಲ್ಲಿ ರೈಲು ಬರುತ್ತಿರುವುದನ್ನು ಕಂಡ ಇಬ್ಬರೂ ಬೇಗನೇ ಹಳಿ ದಾಟಲು ಯತ್ನಿಸಿದರು. ಆದರೆ ಅನಿರೀಕ್ಷಿತವಾಗಿ ಮೇರಿ ಟ್ಯಾನರ್ ಅವರ ಒಂದು ಕಾಲು ರೈಲು ಹಳಿಗಳ ನಡುವೆ ಸಿಲುಕಿತು. ಅವರು ಆತಂಕದಿಂದ ಕಾಲನ್ನು ಎಳೆಯಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪತಿಯೂ ಪತ್ನಿಯನ್ನು ರಕ್ಷಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ರೈಲು ಹತ್ತಿರ ಬಂದು ಬಿಟ್ಟಿತು. ಮೇರಿ ಟ್ಯಾನರ್ ತನ್ನ ಪತಿಗೆ "ನೀವು ದೂರ ಹೋಗಿಬಿಡಿ!" ಎಂದು ಕಿರುಚಿದರು. ಆದರೆ ವಿಲಿಯಂ ಹೇಳಿದ್ದೇನು ಗೊತ್ತಾ? "ನಾನು ನಿನ್ನೊಂದಿಗೇನೆ ಇರುತ್ತೇನೆ." ಅದು ಅವರ ಕೊನೆಯ ಮಾತು! ಈ ದೃಶ್ಯ ನೋಡಿದವರು ಮತ್ತು ಈ ಸುದ್ದಿ ಕೇಳಿದವರು ಆ ಪತಿಯ ಪ್ರೀತಿಯನ್ನು ನೆನೆದು ಕರಗಿ ಹೋಗಿದ್ದರು. ಇದಕ್ಕಿಂತ ಮಿಲಿಯನ್ ಪಟ್ಟು ಹೆಚ್ಚು ನಮ್ಮ ಪರಮ ಮದಲಿಂಗನಾದ ರಕ್ಷಕನಾದ ಯೇಸುವಿನ ಪ್ರೀತಿ! ನಾವು ಪಾಪಿಗಳಾಗಿದ್ದಾಗ ನಮಗಾಗಿ ಜೀವ ನೀಡಿದ ಪ್ರೀತಿ ಎಷ್ಟು ದೊಡ್ಡದು ಎಂದು ಯೋಚಿಸಿ.

 

ಯಾಕೋಬನು ತನ್ನ ಸಹೋದರನನ್ನು ಮತ್ತು ಅವನ ತಂದೆಯನ್ನು ವಂಚಿಸಿದಾಗಲೂ ಕರ್ತನು ಅವನೊಂದಿಗಿದ್ದರು. ಅಣ್ಣನ ಭಯದಲ್ಲಿ ಮಾವನ ಮನೆಗೆ ಹೋಗುವಾಗ, ತಲೆಯ ಕೆಳಗೆ ಕಲ್ಲು ಇಟ್ಟುಕೊಂಡು ಒಂಟಿಯಾಗಿ ಮಲಗಿದಾಗಲೂ "ನಾನೇ ನಿನ್ನೊಂದಿಗಿರುವೆನು" ಎಂದು ಜೊತೆಯಲ್ಲೇ ಇದ್ದರು. ದರ್ಶನವನ್ನು ಕೊಟ್ಟು ಈ ಸ್ಥಳಕ್ಕೆ ಹಿಂದಿರುಗಿ ಬರುವವರೆಗೂ ಇರುತ್ತೇನೆ ಎಂದರು. ಲಾಬಾನನ ಮನೆಯಲ್ಲಿ ಎರಡು ಪರಿವಾರಗಳನ್ನು ಸಂಪಾದಿಸಿ ಹಿಂದಿರುಗಿ ಬರುತ್ತಾರೆ. ಆಗ ಲಾಬಾನನು ತನ್ನ ದೇವರುಗಳನ್ನು ಕದ್ದಿದ್ದಾರೆಂದು

ಸೈನ್ಯದೊಂದಿಗೆ ಬಂದಾಗ ದೇವರು ಜೊತೆಯಿದ್ದರು. ಯಾಕೋಬನು ಭಯದಿಂದ ತನ್ನ ಸಹೋದರನನ್ನು ಸಂಧಿಸಲು ಹೋದಾಗಲೂ ಕರ್ತನು ಜೊತೆಯಲ್ಲೇ ಇದ್ದರು. ಭಯ, ಚಿಂತೆ, ಕಠಿಣ ಪರಿಶ್ರಮ ಮತ್ತು ನಷ್ಟದ ಸಮಯದಲ್ಲೂ ಜೊತೆಯಲ್ಲೇ ಇದ್ದರು. ಏಕೆಂದರೆ ವಾಗ್ದಾನ ಮಾಡಿದಾತನು ಮಾರ್ಪಡದಾತನು.

 

ಪ್ರಿಯರೇ, ದೇವರು ನಿಮ್ಮೊಂದಿಗೆ ಒಂದು ವಾಗ್ದಾನವನ್ನು ಮಾಡಿದ್ದಾರೆ. ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು! (ಮತ್ತಾಯ 28:20) ಈ ದೇವರು ಬದಲಾಗದವರು. ಯಾಕೋಬನು ತನ್ನ ಸಹೋದರನಿಗೆ ಹೆದರಿದಾಗ ಬಲವನ್ನು ಕಳೆದುಕೊಂಡಂತೆ ತೋರುತ್ತಿತ್ತು. ಆದುದರಿಂದ ಒಂಟಿಯಾಗಿದ್ದು ಕರ್ತನ ಬಳಿ ಅತ್ತು ಮೊರೆಯಿಟ್ಟು ಬೇಡಿಕೊಂಡಂತೆ, ನಾವು ಸಹ ನಮಗೆ ಇಕ್ಕಟ್ಟಾದ ಪರಿಸ್ಥಿತಿ ಏರ್ಪಡುವಾಗ, "ನಾನೇ ನಿನ್ನೊಂದಿಗಿರುವೆನು" ಎಂದು ಹೇಳಿರುವುದನ್ನು ಅರಿಕೆ ಮಾಡಿರಿ. ದೇವರು ನಿಮ್ಮನ್ನು ಬಲಪಡಿಸುವುದನ್ನು ಗ್ರಹಿಸುತ್ತೀರ. ಹಲ್ಲೇಲೂಯಾ!!

- Mrs. ಬೇಬಿ ಕಾಮರಾಜ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಪ್ರತಿ ಸೋಮವಾರ ನಡೆಯುವಂತಹ ರಾತ್ರಿ ಪ್ರಾರ್ಥನೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel