Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.11.2023
Share:

By Village Missionary Movement

Wednesday, 15-Nov-2023

ಧೈನಂದಿನ ಧ್ಯಾನ(Kannada) – 15.11.2023

 

ಸ್ತುತಿ ಹಾಡು

 

"...ನನ್ನ ಬಂಡೆ ಯಾದಾತನು ಸ್ತುತಿಹೊಂದಲಿ; .." - ಕೀರ್ತನೆ 18:46

 

ಒಂದು ಹಡಗಿನಲ್ಲಿ ಇಬ್ಬರು ನಿವೃತ್ತ ಯೋಧರು ಪ್ರಯಾಣಿಸುತ್ತಿದ್ದರು. ಒಬ್ಬರು ಇಂಗ್ಲೀಷ್ ನವರು ಮತ್ತು ಇನ್ನೊಬ್ಬರು ಜರ್ಮನ್ ದೇಶದವರು. ಇಂಗ್ಲೀಷ್ ನವರು ಬಾಲ್ಯದಲ್ಲಿ ತನ್ನ ತಾಯಿ ಕಲಿಸಿದ ಹಾಡನ್ನು ಯಾವಾಗಲೂ ಹಾಡುವುದುಂಟು. ಆ ಹಾಡಿನ ಸಾಲುಗಳು ಹೀಗಿವೆ: "ಸರ್ವಶಕ್ತ ದೇವರನ್ನು ಹೊರತುಪಡಿಸಿ ನನಗೆ ಬೇರೆ ಆಶ್ರಯವಿಲ್ಲ. ಕೈಬಿಡದೆ ಪ್ರೀತಿಯಿಂದ ಆದರಿಸಿ ಸಂತೈಸಿ ನಡೆಸು, ನೀನೇ ನನ್ನ ಭರವಸೆ, ನೀವು ನನಗೆ ಸಹಾಯ ಮಾಡುತ್ತೀರಿ. ಅಸಹಾಯಕ ಬಡವನನ್ನು ರೆಕ್ಕೆಯಿಂದ ಹೊದಿಸುವೆ" ಈ ಹಾಡನ್ನು ಹಡಗು ಪ್ರಯಾಣದಲ್ಲೂ ಹಾಡುತ್ತಲೇ ಇದ್ದರು. ಈ ಹಾಡನ್ನು ಕೇಳಿದ ಜರ್ಮನಿಯ ನಿವೃತ್ತ ಯೋಧನಿಗೆ ಇದೇ ಧ್ವನಿ, ಇದೇ ಹಾಡು, ಎರಡನೇ ಪ್ರಪಂಚ ಯುದ್ಧ ನಡೆದ ಸಂದರ್ಭದಲ್ಲಿ ಕೇಳಿದ್ದು ನೆನಪಾಯಿತು. ಅವರು ತಕ್ಷಣ ಕೇಳಿದರು, ನೀವು ಎರಡನೇ ಪ್ರಪಂಚ ಯುದ್ಧದಲ್ಲಿ ಸೈನಿಕನಾಗಿದ್ರಾ? ಎಂದು ಕೇಳಿದರು. ಆಂಗ್ಲರು ಹೌದು ಎಂದು ಹೇಳಿದ ಕೂಡಲೇ, "ನಾನು ನಿಮ್ಮ ವಿರುದ್ಧ ಜರ್ಮನ್ ಸೈನ್ಯದಲ್ಲಿದ್ದೆ, ಮತ್ತು ನಾನು ಕ್ರಿಸ್ತನನ್ನು ಸ್ವೀಕರಿಸಿದ್ದರಿಂದ, ನೀವು ಈ ಹಾಡನ್ನು ಹಾಡುವುದನ್ನು ಕೇಳಿದಾಗ ನಾನು ನಿಮ್ಮ ಮೇಲೆ ಗುಂಡು ಹಾರಿಸದೆ ಬಿಟ್ಟು ಬಿಟ್ಟೆ ಎಂದು ಹೇಳಿದರು. ಇಬ್ಬರೂ ಸಂತೋಷದಿಂದ ಕರ್ತನನ್ನು ಸ್ತುತಿಸಿದರು. ನೋಡಿ, ಒಂದು ಹಾಡು ಅವರ ಜೀವವನ್ನು ಉಳಿಸಿದೆ. ಹಾಗಾದರೆ ದೇವರನ್ನು ಸ್ತುತಿಸುವ ಸ್ತುತಿ ಹಾಡುಗಳಿಗೆ ಅಷ್ಟೊಂದು ಶಕ್ತಿ ಇದೆಯೇ ಎಂದು ಕೇಳಿದರೆ ಖಂಡಿತಾ ಇದೆ! ಸತ್ಯವೇದದಲ್ಲಿಯೂ ಸಹ ಒಂದು ಘಟನೆಯನ್ನು ಕಾಣಬಹುದು.

 

ಅರಸನಾದ ಯೆಹೋಷಾಫಾಟನು ಯುದ್ಧಕ್ಕೆ ಹೊರಡುವಾಗ ಕರ್ತನನ್ನು ಹಾಡಿ ಸ್ತುತಿಸುವವರನ್ನು ಮೊದಲ ಸಾಲಿನಲ್ಲಿ ನಿಲ್ಲಿಸಿದರು. ಅವರು ಹಾಡಿ ಸ್ತುತಿಸಿದಾಗ ಕರ್ತನು ಅವರಿಗೆ ವಿರುದ್ಧವಾಗಿ ಬಂದ ರಾಜರನ್ನು ಒಬ್ಬರಿಗೆ ವಿರುದ್ಧವಾಗಿ ಒಬ್ಬರನ್ನು ಎಬ್ಬಿಸಿದ್ದರಿಂದ, ಅವರನ್ನು ಪೂರ್ಣವಾಗಿ ಸಂಹರಿಸಿಬಿಟ್ಟರು. ಕರ್ತನು ಜಯವನ್ನು ಕೊಟ್ಟರು. ದಾವೀದನು ಹಾಡಿ ಸ್ತುತಿಸುತ್ತಿದ್ದರು. ಸಿಂಹ ಮತ್ತು ಕರಡಿಯಿಂದ ಕುರಿಯನ್ನು ರಕ್ಷಿಸುವ ಶಕ್ತಿಯನ್ನು ದೇವರು ಕೊಟ್ಟರು. ಗೊಲ್ಯಾತನನ್ನು ಸೋಲಿಸಿದರು. ಸೌಲನಲ್ಲಿದ್ದ ದುರಾತ್ಮವು ಅವರು ಕಿನ್ನರಿಬಾರಿಸುವಾಗ ಬಿಟ್ಟುಹೋಯಿತು.

 

ಇಂದಿಗೂ ಮುಯ್ಯಿ ತೀರಿಸದೆ ಕಾಪಾಡುತ್ತಿರುವ ನಮ್ಮ ರಕ್ಷಕನು ತೂಕಡಿಸದೆ ನಿದ್ರಿಸದೆ ಆತನ ರೆಕ್ಕೆಗಳಿಂದ ಹೊದಿಸಿ ಕಾದು ಕಾಪಾಡುತ್ತಿದ್ದಾರೆ. ನಾವು ಅರಿಯದ ಸಮಯದಲ್ಲೂ ನಮಗೆ ಬರಲಿರುವ ಕೇಡಿನಿಂದ ನಮ್ಮನ್ನು ಕಾಯುವ ದೇವರಾಗಿದ್ದಾರೆ. ಆದ್ದರಿಂದ ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವುದು. ಕುಟುಂಬದಲ್ಲಿ ಎಂತಹಾ ಇಕ್ಕಟ್ಟಾದ ಪರಿಸ್ಥಿತಿ ಇದ್ದರೂ, ಅಗತ್ಯತೆಗಳಿದ್ದರೂ ಸಾಲದ ಸಮಸ್ಯೆಯಲ್ಲಿದ್ದರೂ, ಪೌಲ ಸೀಲನಂತೆ ಹಾಡಿ ಸ್ತುತಿಸಿರಿ. ಕುಟುಂಬ ಪ್ರಾರ್ಥನೆಯನ್ನು ಬಿಡದಿರಿ. ಸೆರೆಮನೆಯ ಕದಗಳು ತಾನಾಗಿ ತೆರೆದುಕೊಂಡಂತೆ ಅದ್ಬುತವು ನಡೆಯುತ್ತದೆ ಹಲ್ಲೇಲೂಯ 

- Mr. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಮೋಕ್ಷ ಪ್ರಯಾಣ ಸೇರಿದಂತೆ ನಮ್ಮ ಎಲ್ಲಾ ಪತ್ರಿಕಾ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel