Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.11.2023 (Children’s day Special)
Share:

By Village Missionary Movement

Tuesday, 14-Nov-2023

ಧೈನಂದಿನ ಧ್ಯಾನ(Kannada) – 14.11.2023 (Children’s day Special)

 

ಪ್ರೀತಿಯ ತಂದೆ

 

"…ಮಕ್ಕಳನ್ನು ಬಿಡಿರಿ; ನನ್ನ ಹತ್ತರ ಬರುವದಕ್ಕೆ ಅವುಗಳಿಗೆ ಅಡ್ಡಿಮಾಡಬೇಡಿರಿ; ಪರಲೋಕರಾಜ್ಯವು ಇಂಥವರದೇ…" - ಮತ್ತಾಯ 19:14

 

ಮುದ್ದು ಪುಟಾಣಿಗಳೇ! ಇಂದು ನಿಮ್ಮ ದಿನ. ಮಕ್ಕಳ ದಿನಾಚರಣೆ! Happy Children's day! ಕೈ ಕೊಡಿ. ಚಿಕ್ಕ ಮಕ್ಕಳೆಲ್ಲಾ ಪ್ರೀತಿಯಿಂದ "ನೆಹರೂ ಮಾಮಾ" ಎಂದು ಕರೆಯುವ ಪ್ರಧಾನಿ ನಮ್ಮಲ್ಲಿದ್ದರು. ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತಿದ್ದೇವೆ. ನೋಡಿ, ಪ್ರಧಾನಿಗೆ ನಿಮ್ಮ ಮೇಲೆಯೇ ಪ್ರೀತಿ. ಈ ಲೋಕದಲ್ಲಿರುವ ಎಲ್ಲರಿಗಿಂತ ಯೇಸಪ್ಪನಿಗೆ ನೀವಂದ್ರೆ ತುಂಬಾ ತುಂಬಾ ಇಷ್ಟ. ನಿಮ್ಮ ಮೇಲೆ ಬಹಳ ಕಾಳಜಿ ತೋರುತ್ತಾರೆ. ಅದರ ಬಗ್ಗೆ ಒಂದು ನಿಜವಾದ ಕಥೆಯನ್ನು ನೋಡೋಣ್ವಾ?

 

ಅಮೆರಿಕಾ ದೇಶದಿಂದ ಆಂಕ್ರೋಮಾ ಎಂಬ ದೇವ ಸೇವಕರನ್ನು ನಮ್ಮ ತಮಿಳುನಾಡಿನ ಸಭೆಯಲ್ಲಿ ಪ್ರಸಂಗ ಮಾಡಲು ಆಹ್ವಾನಿಸಲಾಗಿತ್ತು. ಆಗ ಹೇಳಿದ ಸಾಕ್ಷಿಯನ್ನು ಈಗ ಅವರ ಮೂಲಕವೇ ಕೇಳೋಣ್ವಾ? "ನಾನು ಚಿಕ್ಕ ಹುಡುಗನಾಗಿದ್ದಾಗ, ನಾನು ಪ್ರೀತಿಗಾಗಿ ಹಂಬಲಿಸುತ್ತಿದ್ದೆ, ಏಕೆಂದರೆ ನನಗೆ ನನ್ನ ತಂದೆ ಯಾರು ಅಂತಾನೆ ಗೊತ್ತಿಲ್ಲ, ನಾನು ನನ್ನ ತಾಯಿಯನ್ನು ಕೇಳಿದರೆ, ಅವರು ತುಂಬಾ ಕೋಪಗೊಂಡು ಕಿರುಚುತ್ತಿದ್ದರು. ಪ್ರೀತಿಯಿಲ್ಲದ ಜಾಗದಲ್ಲಿ ಬೆಳೆದದ್ದರಿಂದ ಚಿಂತೆಯಿಂದ ನಾನು ಯಾವಾಗಲೂ ಅಳುತ್ತಲೇ ಇದ್ದೆ. ಒಂದು ದಿನ ಅಮ್ಮ ಕೂಡ ನನ್ನನ್ನು ಪಾರ್ಕ್‌ನಲ್ಲಿ ಕೂರಿಸಿಬಿಟ್ಟು "ಈಗಲೇ ಬರ್ತೀನಿ" ಎಂದು ಹೇಳಿ ಹೋದವರು ಸಂಜೆಯಾದರೂ ಬರಲಿಲ್ಲ. ಕತ್ತಲಾಗುವವರೆಗೂ ಒಂದೇ ಸ್ಥಳದಲ್ಲಿ ಕೂತಿದ್ದ ನಾನು ಅಳಲು ಪ್ರಾರಂಭಿಸಿದೆ. ಹಸಿವು ಒಂದು ಕಡೆ, ಭಯ ಮತ್ತೊಂದೆಡೆ. ಆ ಸಮಯದಲ್ಲಿ ಒಂದು ಅಯ್ಯನವರು ಬಂದು ನನ್ನನ್ನು ಪ್ರೀತಿಯಿಂದ ಎತ್ತಿಕೊಂಡು ಕಣ್ಣೀರು ಒರೆಸಿ ಅವರ ಮನೆಗೆ ಕರೆದೊಯ್ದರು. ಹೊಟ್ಟೆ ತುಂಬಾ ಊಟ ಕೊಟ್ಟು ಮನೆಯಲ್ಲಿದ್ದವರೆಲ್ಲರೂ ನನ್ನ ಬಳಿ ನಗುತ್ತಾ ನನ್ನೊಂದಿಗೆ ಮಾತಾಡಿದರು.

 

ಮನಸ್ಸು ತಣ್ಣಗಾಯಿತು. ಆ ಮನೆಯಲ್ಲಿ ನನ್ನಂತೆ ಇಬ್ಬರು ತಮ್ಮಂದಿರು ಇದ್ದರು. ಅವರಿಗೆ ಟ್ಯೂಷನ್ ಕಲಿಸಲು ಬರುತ್ತಿದ್ದ ಟೀಚರ್ ನನಗೂ ಪಾಠವನ್ನು ಕಲಿಸಿದರು. ಆ ತಮ್ಮಂದಿರೊಂದಿಗೆ ನಾನು ಸಹ ತಪ್ಪದೇ Sunday school ಗೆ ಹೋಗುತ್ತಿದ್ದೆ. ಅಲ್ಲಿ ಕಲಿಸಿದ ಎಲ್ಲಾ ಹಾಡುಗಳು ಮತ್ತು ಕಥೆಗಳು ನನಗೆ ಇಷ್ಟವಾದವು. ಯೇಸಪ್ಪ ನಿನ್ನ ಮೇಲೆ ತುಂಬಾ ಪ್ರೀತಿಯಿಂದಿದ್ದಾರೆ ಎಂದು ಅವರು ಹೇಳಿದ ಮಾತುಗಳು ನನಗೆ ತುಂಬಾ ಸಂತೋಷವನ್ನುಂಟುಮಾಡಿದವು. ಅಂದಿನಿಂದ ನಾನು ಯೇಸಪ್ಪನನ್ನು ಅಪ್ಪಾ, ಅಪ್ಪಾ ಎಂದು ಕರೆದು ನನಗೆ ಬೇಕಾದದ್ದನ್ನೆಲ್ಲಾ ಕೇಳುತ್ತಿದ್ದೆ. ಅವರು ಕೊಟ್ಟುಬಿಡುತ್ತಿದ್ದರು. ಅನೇಕ ಕಷ್ಟಗಳ ನಡುವೆ, ಯೇಸಪ್ಪನ ಮಗುವಾಗಿ ಬದುಕಿ ದೊಡ್ಡವನಾದೆನು. ಸೇವೆ ಮಾಡಲು ಯೇಸಪ್ಪ ನನ್ನನ್ನು ಕರೆದರು. ಕರ್ತನು ನನ್ನ ಜೀವನದಲ್ಲಿ ಮಾಡಿದ್ದನ್ನು ನಾನು ಇತರರಿಗೆ ಹೇಳಲಾರಂಭಿಸಿದೆ. ವರಗಳನ್ನು, ಶಕ್ತಿಯನ್ನು ಕೊಟ್ಟರು. ಇಂದು ನಾನು ಪ್ರಪಂಚದಾದ್ಯಂತ ಸುತ್ತಿ ಬರುತ್ತಾ ಈ ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದೇನೆ. ನನಗೇ ಆಶ್ಚರ್ಯವಾಯಿತು! ನನ್ನ ತಂದೆ ಇದ್ದಿದ್ದರೂ ಕೂಡ ನನಗೆ ಇಂತಹ ಭಾಗ್ಯ ಸಿಗುತ್ತಿತ್ತೋ?” ಎಂದು ಹೇಳಿದರು.

 

ಪ್ರೀತಿಯ ಮುದ್ದು ಮಕ್ಕಳೇ! ನೀವೂ ಸಹ ಆತನ ಪ್ರೀತಿಯನ್ನು ಅರ್ಥಮಾಡಿಕೊಂಡರೆ ಆತನು ನಿಮ್ಮನ್ನು ಆತನ ಇಚ್ಛೆಯಂತೆ ಉನ್ನತೀಕರಿಸುತ್ತಾರೆ. Ok ನಾ.

- Sis. ದೆಬೋರಾಳ್ 

 

ಪ್ರಾರ್ಥನಾ ಅಂಶ:

ಮಾಧ್ಯಮ ಮತ್ತು ಕಚೇರಿಯಲ್ಲಿ ಕೆಲಸಮಾಡುತ್ತಿರುವ ಸೇವಕರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel