By Village Missionary Movement
Sunday, 12-Nov-2023ಧೈನಂದಿನ ಧ್ಯಾನ(Kannada) – 13.11.2023
ಅರಣ್ಯದಲ್ಲಿ ದಾರಿ
"...ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ ಅಡವಿಯಲ್ಲಿ ನದಿಗಳನ್ನು ಹರಿಸುವೆನು" - ಯೆಶಾಯ 43:19
ಹಿಮಾಲಯದಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಅಜ್ಜ ಮತ್ತು ಆತನ ಮಗ ಬಡತನದಲ್ಲಿ ಬದುಕುತ್ತಿದ್ದರು. ಒಮ್ಮೆ ಚಳಿ ಹೆಚ್ಚಾಗಿದ್ದದರಿಂದ ಬೇಗ ಅಂಗಡಿ ಮುಚ್ಚಿ ಮನೆಗೆ ಹೋದರು. ಅವರ ಊರಿನಲ್ಲಿ ಭಯೋತ್ಪಾದಕರು ಗಲಭೆ ನಡೆಸಿ ಪ್ರತಿ ಮನೆಯ ಮೇಲೂ ದಾಳಿ ನಡೆಸಿದಾಗ ಅಜ್ಜನ ಮಗನ ತಲೆ ಬುರುಡೆಯೂ ಒಡೆದಿತ್ತು. ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣದ ಅಗತ್ಯವಿತ್ತು. ಮನೆಯಲ್ಲಿ ಹಣವಿರಲಿಲ್ಲ. ಊರಿನವರೆಲ್ಲ ಬಡವರು; ಎಲ್ಲರೂ ಭಯೋತ್ಪಾದಕರಿಂದ ನಷ್ಟ ಅನುಭವಿಸಿದ್ದಾರೆ. ಅಂಗಡಿಯಲ್ಲಿ ಹಣವೇನಾದರೂ ಇದೆಯೇ ಎಂದು ನೋಡಲು ಹೋದರು. ಅಂಗಡಿಯ ಬೀಗ ಒಡೆದಿತ್ತು. ಸಕ್ಕರೆ ಡಬ್ಬಿಯ ಕೆಳಗೆ 1000 ರೂಪಾಯಿ ಕಾಣುತ್ತಿತ್ತು. ನನ್ನ ಅವಶ್ಯಕತೆ ತಿಳಿದು ನಾನು ಆರಾಧಿಸುವ ಯೇಸುಕ್ರಿಸ್ತನೇ ಇಟ್ಟು ಹೋಗಿದ್ದಾರೆ ಅಂದುಕೊಂಡು ಅವರನ್ನು ಸ್ತುತಿಸುತ್ತಲೇ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೊರಟರು.
ಈ ಹಣವನ್ನು ಇಟ್ಟು ಹೋದದ್ದು ಒಂದು ಸೈನ್ಯದ ಮೇಜರ್ ಆಗಿದ್ದರು. ಸೈನ್ಯದ ಮೇಜರ್ ತನ್ನ ಸೈನಿಕರೊಂದಿಗೆ ಹೋಗುತ್ತಿದ್ದಾಗ ಸೈನಿಕರು ಚಹಾ ಕುಡಿಯಲು ಬಯಸಿದರು. ಆದರೆ ಟೀ ಅಂಗಡಿ ಮುಚ್ಚಿತ್ತು. ಸೈನಿಕರು ಟೀ ಅಂಗಡಿಯ ಬೀಗ ಒಡೆದು ತಾವೇ ಟೀ ಮಾಡಿಕೊಂಡು ಕುಡಿದರು. ಮೇಜರ್ ಟೀ ಅಂಗಡಿಯವರಿಗೆ ಸಕ್ಕರೆ ಡಬ್ಬದ ಕೆಳಗೆ 1000 ರೂಪಾಯಿಗಳನ್ನು ಇಟ್ಟು ಹೋಗಿದ್ದರು. ಈ ಹಣದಿಂದಲೇ ಟೀ ಅಂಗಡಿ ಮಾಲೀಕನ ಮಗನ ಗಾಯ ವಾಸಿಯಾಯಿತು. ಯುದ್ಧದ ಸೈನಿಕರು ತಮ್ಮ ಕರ್ತವ್ಯದಿಂದ ಹಿಂತಿರುಗುತ್ತಿದ್ದಾಗ ಟೀ ಅಂಗಡಿಯ ಹಿರಿಯರನ್ನು ನೋಡಿ ಹೇಗೆ ಈ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೀರಾ ಎಂದು ಕೇಳಿದಾಗ, ನನ್ನನ್ನು ಯೇಸು ಪೋಷಿಸುತ್ತಿದ್ದಾರೆ ಎಂದು ಹೇಳಿ ನಡೆದ ಘಟನೆಯನ್ನು ವಿವರಿಸಿದರು. ಕೂಡಲೇ ಮೇಜರ್ ಹೇಳಿದರು, "ನಿಮ್ಮ ದೇವರು ದೊಡ್ಡವರೇ, ನಿಜವಾಗಿಯೂ ಬಹಳ ದೊಡ್ಡವರು. ಅವರೇ ನಮ್ಮ ಮೂಲಕ ನಿಮಗೆ ಸಹಾಯ ಮಾಡಿದರು" ಎಂದು ಹೇಳಿದರು.
ಹೌದು, ನಮ್ಮ ದೇವರು ಆಶ್ಚರ್ಯವಾಗಿ ಮಾರ್ಗ ತೆರೆಯುವವರು. ಹಾಗರಳು ಮರುಭೂಮಿಯಲ್ಲಿ ನೀರಿಲ್ಲದೆ ಮಗು ಸಾಯುವ ಸ್ಥಿತಿಯಲ್ಲಿ ಇದ್ದದ್ದನ್ನು ಕಂಡು ಅಳುತ್ತಿರುವುದನ್ನು ನೋಡಿ ಒರತೆಯನ್ನು ತೋರಿಸಿದರು. ಸಂಸೋನನು ಬಿಡದೇ ನೀರಿಗಾಗಿ ಕರ್ತನ ಬಳಿ ಬೇಡಿಕೊಂಡಾಗ ಒರತೆಯನ್ನು ಉಂಟು ಮಾಡಿದರು.
ಇಸ್ರಾಯೇಲ್ ಜನರಿಗಾಗಿ ಬಂಡೆಯಿಂದ ನೀರನ್ನು ಬರಮಾಡಿದರು.
ಪ್ರಿಯರೇ, ಅದರಂತೆಯೇ ನಿಮಗೆ ಸಹಾಯ ಮಾಡಲು ಯಾರೂ ಇಲ್ಲದ ಮರುಭೂಮಿಯ ಪರಿಸರದಲ್ಲಿ ನೀವು ಏಕಾಂಗಿಯಾಗಿ ಸಿಲುಕಿದ್ದೀರಾ? ದೇವರು ನಿಮಗಾಗಿ ಒರತೆಯನ್ನು ಉಕ್ಕುವಂತೆ ಮಾಡಲು ಶಕ್ತನಾಗಿದ್ದಾರೆ. ಯಾರಿಂದ ಬೇಕಾದರೂ ಸಹಾಯ ದೊರೆಯುವಂತೆ ಮಾಡಲು ಶಕ್ತನಾಗಿದ್ದಾರೆ. ಎಲ್ಲಾ ಸಮಯದಲ್ಲೂ ಅವರನ್ನು ಮಾತ್ರ ನೋಡಿ. ಸಹಾಯ ದೊರೆಯುತ್ತದೆ, ಅಗತ್ಯಗಳು ಪೂರೈಸಲ್ಪಡುತ್ತವೆ, ಆಶೀರ್ವಾದಕರವಾದ ಜೀವನ ಲಭಿಸುತ್ತದೆ.
- Mr. ಸಮುವೇಲ್ ಮೋರಿಸ್
ಪ್ರಾರ್ಥನಾ ಅಂಶ:
ಯೌವನಸ್ಥರ ಸಂಜೆ ಪ್ರಾರ್ಥನಾ ಗುಂಪಿನ ಮೂಲಕ ಭೇಟಿಯಾಗುವ ಯೌವನಸ್ಥರಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482