Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.11.2023 (Kids Special)
Share:

By Village Missionary Movement

Saturday, 11-Nov-2023

ಧೈನಂದಿನ ಧ್ಯಾನ(Kannada) – 12.11.2023 (Kids Special)

 

Bread and Butter 

 

"ಇದಲ್ಲದೆ ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವದೇಕೆ?" - ಲೂಕ 6:41

 

"ಅಮ್ಮಾ, ಅಮ್ಮಾ ತುಂಬಾ ಹಸಿವಾಗ್ತಿದೆ; Bread and Butter ಹಾಕಿಕೊಡಿ ಅಮ್ಮಾ" ಎಂದು School ಮುಗಿಸಿ ಮನೆಗೆ ಬಂದ ಆಗ್ನೆಸ್ ಕೇಳಿದಳು. ಅಮ್ಮ ತಕ್ಷಣ ಮಾಡಿಕೊಟ್ಟರು. ಆಗ್ನೆಸ್‌ ಚೆನ್ನಾಗಿ ಸವಿದು ತಿಂದು ಮುಗಿಸಿ ಅಮ್ಮನ ಕೆನ್ನೆಗೆ ಮುತ್ತು ಕೊಟ್ಟು ಆಟವಾಡಲು ಹೊರಟು ಹೋದಳು. ಏನು ಪುಟಾಣಿಗಳೇ, ನಿಮಗೂ Butter ಹಾಕಿದ Bread ಅಂದರೆ ತುಂಬಾ ಇಷ್ಟ ಅಲ್ವಾ. ಬೆಣ್ಣೆಯೊಂದಿಗೆ ಬ್ರೆಡ್ ಅನ್ನು ಸಹ ಪ್ರೀತಿಸುತ್ತೀರಿ. ಸರಿ, ಕಥೆಯೊಳಗೆ ಹೋಗೋಣ್ವಾ?

 

ಆಗ್ನೆಸ್ ಅಮ್ಮ ದಿನವೂ Butter ಮತ್ತು Bread ತೆಗೆದುಕೊಳ್ಳುತ್ತಿದ್ದ ಅಂಗಡಿಯವರ ಬಳಿಗೆ ಹೋಗಿ, "ಏಕೆ ನಿಮ್ಮ ಅಂಗಡಿಯಲ್ಲಿ ತೆಗೆದುಕೊಳ್ಳುವ ಬೆಣ್ಣೆಯ ಪ್ರಮಾಣವು ಕಡಿಮೆ ಆಗ್ತಿದೆ?" ಎಂದು ಕೇಳಿದಳು. ಇವರಂತೆಯೇ ಆ ಅಂಗಡಿಯಲ್ಲಿ ತೆಗೆದುಕೊಳ್ಳುತ್ತಿದ್ದ ಅನೇಕರು ಕೇಳಿದರು. ಕೂಡಲೇ ಈ ಅಂಗಡಿಗೆ ಯಾವಾಗಲೂ ಬೆಣ್ಣೆ ತಂದುಹಾಕುತ್ತಿದ್ದವನ ಮೇಲೆ ಅನುಮಾನ ಬಂತು. ಮಾರನೇ ದಿನ ಬೆಣ್ಣೆ ತಂದವನ ಹತ್ತಿರ, "ನೀನು ಇಷ್ಟು ದಿನ ನನಗೆ ಮೋಸ ಮಾಡಿದ್ದೀಯ, ಬೆಣ್ಣೆಯ ಪ್ರಮಾಣವನ್ನು ಕಡಿಮೆ ಮಾಡಿ ಪ್ಯಾಕೆಟ್ ನಲ್ಲಿ ತಂದಿದ್ದೀಯ" ಎಂದು ಜಗಳವಾಡಿದರು. ತಕ್ಷಣ ಅವರು ತಾಳ್ಮೆಯಿಂದ, “ಇಲ್ಲ, ಸರಿಯಾಗಿಯೇ ತೂಕ ಹಾಕಿಕೊಂಡು ತರುತ್ತಿದ್ದೇನೆ” ಎಂದನು. ಕೂಡಲೇ ಗ್ರಾಮದ ಜನರು ಈ ಅಂಗಡಿಯವನನ್ನು ಬೆಂಬಲಿಸಿ ಬೆಣ್ಣೆ ಮಾರುವವನನ್ನು ಗದರಿಸಿ ಕೊನೆಗೆ ಗ್ರಾಮದ ಮುಖಂಡನ ಬಳಿ ಸಮಸ್ಯೆ ತೋಡಿಕೊಂಡರು. ಊರಿನ ಮುಖ್ಯಸ್ಥನೂ ತೂಕ ಹಾಕಿ ನೋಡಿದರು. 1/4 ಕೆಜಿ ಪ್ಯಾಕೆಟ್ ನಲ್ಲಿ 50 ಗ್ರಾಂ ಕಡಿಮೆಯಿತ್ತು. ತಕ್ಷಣ ಸಿಟ್ಟಿಗೆದ್ದ ಊರಿನ ಮುಖಂಡರು, "ನೀನು ನಮ್ಮನ್ನೆಲ್ಲಾ ಮೂರ್ಖರನ್ನಾಗಿಸುತ್ತೀಯಾ. ಇನ್ಮುಂದೆ ಈ ಊರಿನ ಕಡೆ ಬರಬೇಡ" ಎಂದು ಸಿಟ್ಟಿನಿಂದ ಗದರಿಸಿದರು. ತಕ್ಷಣ ಬೆಣ್ಣೆ ವ್ಯಾಪಾರಿ, "ಐಯ್ಯಾ, ನನ್ನನ್ನು ಕ್ಷಮಿಸಿಬಿಡಿ, ತಕ್ಕಡಿಯಲ್ಲಿ ಇಡುವ ತೂಕದ ಕಲ್ಲು ನನ್ನ ಬಳಿ ಇಲ್ಲ. ಈ ಬ್ರೆಡ್ ಅಂಗಡಿಯವರ ಬಳಿ ಇರುವ 1/4 ಕೆಜಿ ಬ್ರೆಡ್ ಪ್ಯಾಕೆಟ್ ಗಳನ್ನು ಇಟ್ಟು ತೂಕ ಮಾಡಿ ಈ ಬೆಣ್ಣೆ ಪೊಟ್ಟಣಗಳನ್ನು ಹಾಕುತ್ತೇನೆ" ಎಂದು ಹೇಳಿ, ತಕ್ಕಡಿಯನ್ನು ತೆಗೆದುಕೊಂಡು ಬ್ರೆಡ್ ಪ್ಯಾಕೆಟ್ ಒಂದೆಡೆ, ಬೆಣ್ಣೆಯ ಪೊಟ್ಟಣ ಇನ್ನೊಂದೆಡೆ ಇಟ್ಟು ತೂಕ ಹಾಕಿದನು. ಎರಡೂ ಸಮವಾಗಿದ್ದವು. ಎಲ್ಲರೂ ಆ ಬ್ರೆಡ್ ಅಂಗಡಿಯವನನ್ನು ನೋಡಿ, "ನೀನು ಕಡಿಮೆ ತೂಕ ಹಾಕಿ ಮಾರಿ ಬಿಟ್ಟು ಮತ್ತೊಬ್ಬರ ಮೇಲೆ ತಪ್ಪು ಹೊರಿಸುತ್ತಿದ್ದೀಯಾ? ಎಂದು ಅವನನ್ನು ಬೈದು ಹೊರಟು ಹೋದರು. ಇವನೂ ನಾಚಿಕೆಯಿಂದ ತಲೆ ತಗ್ಗಿಸಿಕೊಂಡು ಮನೆಗೆ ಮರಳಿದನು. 

 

ತಮ್ಮ, ತಂಗಿ ನೋಡುದ್ರಾ! ತನ್ನ ತಪ್ಪನ್ನು ಮರೆಮಾಚಿಕೊಂಡು ಇನ್ನೊಬ್ಬರ ಮೇಲೆ ತಪ್ಪು ಹೊರಿಸಿದ್ದರಿಂದ ಎಲ್ಲರ ಮುಂದೆಯೂ ಹೇಗೆ ಅವಮಾನಕ್ಕೊಳಗಾದ! ಇದರಂತೆಯೇ, ನೀನು ಕೂಡ ಯಾವಾಗಲೂ ಮತ್ತೊಬ್ಬರ ಮೇಲೆ ತಪ್ಪು ಹೊರಿಸಬಾರದು. ಯಾವಾಗಲೂ ನಮ್ಮನ್ನು ಸರಿಪಡಿಸಿಕೊಳ್ಳುವತ್ತ ಗಮನ ಹರಿಸಬೇಕು. Ok ನಾ. Bye!

- Mrs. ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş