Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.11.2023
Share:

By Village Missionary Movement

Saturday, 11-Nov-2023

ಧೈನಂದಿನ ಧ್ಯಾನ(Kannada) – 11.11.2023

 

ಕರ್ತನಲ್ಲಿ ಸಂತೋಷ

 

"...ಕರ್ತನ ಆನಂದವು ನಿಮ್ಮ ಬಲವಾಗಿರು ವದರಿಂದ ನೀವು ವ್ಯಥೆಪಡಬೇಡಿರಿ" - ನೆಹೆಮಿಯ 8:10

 

ರೂಮೇನಿಯಾ ದೇಶದಲ್ಲಿ ಒಂದು ಸಣ್ಣ ಕೋಣೆಯಲ್ಲಿ ಹೆಚ್ಚಿನ ಸಂಖ್ಯೆಯ ಕೈದಿಗಳನ್ನು ಬಂಧಿಸಲಾಗಿತ್ತು. ಕ್ರಿಸ್ತನನ್ನು ಬೋಧಿಸಿದ್ದಕ್ಕಾಗಿ ಒಬ್ಬ ಸುವಾರ್ತಾಬೋಧಕನನ್ನು ಸಹ ಬಂಧಿಸಲಾಗಿತ್ತು. ಅವರನ್ನು ಹೊರತುಪಡಿಸಿ, ಇತರ ಕೈದಿಗಳಲ್ಲಿ ಯಾರೂ ಕ್ರಿಸ್ತನನ್ನು ತಿಳಿದಿರಲಿಲ್ಲ ಮತ್ತು ದೇವರಲ್ಲಿ ನಂಬಿಕೆ ಇಟ್ಟಿರಲಿಲ್ಲ. ಅವರ ನಡುವೆ ಯಾವಾಗಲೂ ಜಗಳ ಮತ್ತು ಸಮಸ್ಯೆಗಳಿದ್ದವು. ಆದರೆ ಸುವಾರ್ತಾಬೋಧಕನು ಜೈಲಿನಲ್ಲಿನ ಎಲ್ಲಾ ಕಷ್ಟಗಳು ಮತ್ತು ನೋವುಗಳ ಮಧ್ಯೆಯೂ ಕ್ರಿಸ್ತನನ್ನು ತೋರಿಸುತ್ತಾ ಸಂತೋಷದಿಂದ ಮತ್ತು ತಾಳ್ಮೆಯಿಂದ ಬದುಕುತ್ತಿದ್ದರು. ಎಲ್ಲರ ಗಮನವೂ ಅವರತ್ತ ಹೊರಳಿತು. ಸುವಾರ್ತಾಬೋಧಕರ ಬಳಿ ನೀವು ಯಾವಾಗಲೂ ಸಂತೋಷದಿಂದಲೂ ಮತ್ತು ಉತ್ಸಾಹದಿಂದಲೂ ಇರುವುದರ ರಹಸ್ಯವೇನು? ಎಂದು ಕೇಳಿದರು. ಕ್ರಿಸ್ತನೇ ನನ್ನ ಜೀವನದ ಸಂತೋಷ ಮತ್ತು ಬಲವು ಎಂದು ಹೇಳಿದರು. ಸೆರೆಯಲ್ಲಿದ್ದ ಪ್ರತಿಯೊಬ್ಬ ಕೈದಿಗಳು ಯೇಸುವನ್ನು ಸ್ವೀಕರಿಸಿದರು. ತಕ್ಷಣವೇ, ರೂಮೇನಿಯನ್ ಸರ್ಕಾರವು ಸುವಾರ್ತಾಬೋಧಕನನ್ನು ತೀವ್ರವಾಗಿ ಥಳಿಸಿತು ಮತ್ತು ಅವರನ್ನು ಕತ್ತಲೆಯ ಕೋಣೆಯಲ್ಲಿ ಏಕಾಂತ ಬಂಧನದಲ್ಲಿರಿಸಿ ಚಿತ್ರಹಿಂಸೆ ನೀಡಿತು. ಆದರೂ ಇನ್ನೂ ಅನೇಕ ಕೈದಿಗಳು ಯೇಸುವನ್ನು ಸ್ವೀಕರಿಸಿದರು ಮತ್ತು ಸಾಕ್ಷಿಗಳಾಗಿ ಮಾರ್ಪಟ್ಟರು.

 

ಸತ್ಯವೇದದಲ್ಲಿಯೂ ಸಹ, ಪೌಲನೂ ಸೀಲನೂ ಸೆರೆಯಲ್ಲಿದ್ದರೂ ಕೈಕಾಲುಗಳು ಕಟ್ಟಲ್ಪಟ್ಟಿದ್ದರೂ ದೇವರಿಗೆ ಸ್ತುತಿಪದಗಳನ್ನು ಹಾಡುತ್ತಿದ್ದರು. ಕರ್ತನಲ್ಲಿ ಸಂತೋಷವಾಗಿದ್ದರು. ಅವರು ಸುವಾರ್ತೆಯಾಗಿ ಬೋಧಿಸಿದ್ದನ್ನೇ ಬದುಕಿ ತೋರಿಸಿದರು. ಆದ್ದರಿಂದ ಸೆರೆಮನೆಯ ಬಾಗಿಲು ತೆರೆಯಲ್ಪಟ್ಟರೂ, ಯಾರೂ ತಪ್ಪಿಸಿಕೊಳ್ಳಲು ಯೋಚಿಸದೆ ಎಲ್ಲರ ಕಟ್ಟುಗಳು ಬಿಚ್ಚಲ್ಪಟ್ಟಿದ್ದರೂ ಬಿಡುಗಡೆಯಿಂದಿದ್ದರು. "ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ನಾನು ತಿರಿಗಿ ಹೇಳುತ್ತೇನೆ (ಫಿಲಿಪ್ಪಿ 4:4) ಎಂದರು. ಹಾಗೆಯೇ ಬದುಕಿ ತೋರಿಸಿದರು. ಆದ್ದರಿಂದ ಅನೇಕ ಸಭೆಗಳನ್ನು ಸ್ಥಾಪಿಸಿದರು ಮಾತ್ರವಲ್ಲದೆ ಅನೇಕ ಪತ್ರಿಕೆಗಳನ್ನು ಬರೆದರು. ಅವು ಪವಿತ್ರಾತ್ಮನಿಂದ ಅಂಗೀಕರಿಸಲ್ಪಟ್ಟು ಸತ್ಯವೇದದಲ್ಲಿಯೂ ಸ್ಥಾನ ಪಡೆದಿದೆ.

 

ನಮಗೆ ಇಂತಹ ಯಾವ ಕಷ್ಟಗಳೂ ಇಲ್ಲ. ನಾವು ನಮ್ಮ ದೇಶದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಹಾಗಾದರೆ ಸಾಕಷ್ಟು ಮಟ್ಟಿಗೆ ಸಂತೋಷದಿಂದಲೂ ಮತ್ತು ಬಲದಿಂದಲೂ ಕ್ರಿಸ್ತನನ್ನು ಇತರರಿಗೆ ತೋರಿಸಿದಾಗ, ನಾವು ಅನೇಕ ಜನರನ್ನು ನರಕದ ಹಾದಿಯಿಂದ ಬಿಡಿಸಿ ನೇರವಾಗಿ ಪರಲೋಕ ರಾಜ್ಯಕ್ಕೆ ಕರೆದೊಯ್ಯುತ್ತೇವೆ, ಹೇರಳವಾಗಿ ಆತ್ಮಗಳನ್ನು ಕೊಯ್ಯುತ್ತೇವೆ ಮತ್ತು ಕ್ರಿಸ್ತನಲ್ಲಿ ಹೇರಳವಾದ ಫಲವನ್ನು ಪಡೆಯುತ್ತೇವೆ ಎಂಬುದರಲ್ಲಿ ಸಂದೇಹವೇ ಇಲ್ಲ. ನಾವು ಕ್ರಿಸ್ತನನ್ನು ಹೇಳುವವರಾಗಿ ಅಲ್ಲ, ಕ್ರಿಸ್ತನನ್ನು ತೋರಿಸುವವರಾಗಿ ಬದುಕೋಣ.

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಪ್ರತಿ ರಾಜ್ಯದಲ್ಲಿ 500 ಹೊಸ ಮಿಷನರಿಗಳು ನಮ್ಮ ಸೇವೆಯಲ್ಲಿ ಜೊತೆಗೂಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş