Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.11.2023
Share:

By Village Missionary Movement

Thursday, 09-Nov-2023

ಧೈನಂದಿನ ಧ್ಯಾನ(Kannada) – 09.11.2023

 

ಅಸಲಿ - ನಕಲಿ?

 

"ಆದರೆ ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ" - 1 ಥೆಸಲೋನಿಕ 5:21

 

ಅದು ಮರದ ಕರಕುಶಲ ವಸ್ತುಗಳನ್ನು ಮಾರುವ ಅಂಗಡಿಯಾಗಿತ್ತು. ಅಲ್ಲಿ ಶ್ರೀಗಂಧದ ಉತ್ಪನ್ನಗಳಿಗೆ ವಿಶೇಷ ಮೌಲ್ಯವಿತ್ತು. ಶ್ರೀಗಂಧದ ಮರದ ಎರಡು ವಿಧವಾದ ಉತ್ಪನ್ನಗಳಿದ್ದವು. ಒಂದು ಒರಿಜಿನಲ್ ಶ್ರೀಗಂಧದ ಮರ. ಇದು ನೈಸರ್ಗಿಕ ವಾಸನೆ ಮತ್ತು ಬೆಲೆಗೆ ಯೋಗ್ಯವಾಗಿತ್ತು. ಎರಡನೆಯ ವಿಧ ಶ್ರೀಗಂಧದ ತೈಲದಿಂದ ಮೇಲೆಲ್ಲಾ ಹಚ್ಚಿ ಇಡಲಾಗಿತ್ತು. ಇದು ಉತ್ತಮ ವಾಸನೆಯುಳ್ಳದ್ದಾಗಿಯೂ, ಬೆಲೆ ಬಹಳ ಕಡಿಮೆಯಾಗಿಯೂ ಇತ್ತು. ಆದರೆ ಇದು ಪ್ರೇಕ್ಷಕರು ಮತ್ತು ಗ್ರಾಹಕರನ್ನು ಆಕರ್ಷಿಸಿತು. ಗ್ರಾಹಕರು ಎರಡನೇ ದರ್ಜೆಯ ಉತ್ಪನ್ನಗಳನ್ನೇ ಖರೀದಿಸಿದರು. ಇದನ್ನು ಕಂಡು ಶ್ರೀಗಂಧದಿಂದ ಮಾಡಿದ ವಸ್ತು ಅಳುತ್ತಾ ರೋದಿಸಿತು. ಇದನ್ನು ನೋಡಿದ ತೇಗದ ಮರದ ಕುರ್ಚಿ, "ಸ್ನೇಹಿತ ವಿಷಾದಿಸಬೇಡ, ತಾಳ್ಮೆಯಿಂದ ಕಾದಿರು" ಎಂದಿತು. ಒಬ್ಬ ಯುವಕ ಮತ್ತು ಅವನ ತಂದೆ ಅಂಗಡಿಗೆ ಬಂದರು. ಯುವಕ ನಕಲಿ ಶ್ರೀಗಂಧದ ಉತ್ಪನ್ನಗಳನ್ನು ಎತ್ತಿಕೊಂಡನು. ಮರಗೆಲಸದಲ್ಲಿ ಅನುಭವವಿರುವ ತಂದೆಯವರು ಪ್ರಥಮ ದರ್ಜೆಯಲ್ಲಿರುವುದನ್ನು ತೆಗೆದುಕೊಳ್ಳಲು ಹೇಳಿದರು. ಸುವಾಸನೆ ಕಡಿಮೆಯಾದರೂ, ಅದರ ನಿಜವಾದ ಮೌಲ್ಯವನ್ನು ಒತ್ತಿ ಹೇಳಿ ಅವರು ಒರಿಜಿನಲ್ ಶ್ರೀಗಂಧದ ಉತ್ಪನ್ನಗಳನ್ನು ತೆಗೆದುಕೊಂಡು ಹೋದರು.

 

ಯೇಸುಕ್ರಿಸ್ತನು ಆರಿಸಿಕೊಂಡ ಹನ್ನೆರಡು ಶಿಷ್ಯರಲ್ಲಿ, ದೇವರಿಂದ ಆರಿಸಲ್ಪಟ್ಟ ಮತ್ತು ಅವರೊಂದಿಗೆ ಊಟಮಾಡಿ ಮಲಗಿದ್ದ ಇಸ್ಕರಿಯೋತ ಯೂದನು ಇತರರ ದೃಷ್ಟಿಯಲ್ಲಿ ಶಿಷ್ಯನೆಂದು ಗುರುತಿಸಲ್ಪಟ್ಟನು. ಆದರೆ ಹಣದ ಆಸೆಯಿಂದ ದೇವರನ್ನು ಹಿಡಿದುಕೊಡುವ ಕ್ಷಣಕ್ಕಾಗಿ ಕಾಯುತ್ತಿದ್ದ ಕೆಟ್ಟ ಗುಣ ಇಸ್ಕರಿಯೋತ ಯೂದನಲ್ಲಿ ಅಡಗಿತ್ತು. ಹಿಡಿದುಕೊಡುವ ಸಮಯ ಬರುವವರೆಗೂ ಯಾರಿಗೂ ಅದು ತಿಳಿದಿರಲಿಲ್ಲ. ಹನ್ನೆರಡು ಮಂದಿಯೊಂದಿಗೆ ಕೊನೆಯದಾಗಿ ಪಸ್ಕಾ ಭೋಜನದಲ್ಲಿದ್ದ ಸಮಯದಲ್ಲಿ ಯೇಸು, "ತನ್ನನ್ನು ಒಬ್ಬನು ಹಿಡಿದುಕೊಡುವನು" ಎಂದು ಹೇಳಿದರು. ಎಲ್ಲರೂ ನಾನಾ? ನಾನಾ? ಎಂದು ಕೇಳುವಾಗ, ತಾನೇ ಎಂದು ತಿಳಿದಿದ್ದರೂ ತನ್ನ ದುಷ್ಟ ಉದ್ದೇಶಗಳನ್ನು ಮರೆಮಾಡಲು ಇತರರೊಂದಿಗೆ ಸೇರಿ ನಾನಾ? ಎಂದು ಎಲ್ಲವನ್ನೂ ತಿಳಿದಿರುವ ಯೇಸುವಿನ ಬಳಿ ಕೇಳಿದನು. ಕೊನೆಯ ಕ್ಷಣದವರೆಗೂ ಅಸಲು ಶಿಷ್ಯನ ಹಾಗೆಯೇ ಯೂದನ ಮಾತುಗಳೂ ಇದ್ದವು.

 

ಹೌದು, ಪ್ರಿಯರೇ, ಮನುಷ್ಯರ ಹೊರನೋಟವನ್ನು ನೋಡಿ ಒಳ್ಳೆಯವರು ಎಂದು ಭಾವಿಸಿ ಮೋಸ ಹೋಗುವವರು ಅನೇಕರಿದ್ದಾರೆ. ಆದುದರಿಂದಲೇ ನಮ್ಮ ಕರ್ತನು "ಸರ್ಪಗಳಂತೆ ಜ್ಞಾನಿಗಳಾಗಿರಿ" ಕುರಿಗಳ ವೇಷವನ್ನು ಹಾಕಿಕೊಂಡು ಬರುವ ತೋಳಗಳಂತಿರುವ ಮನುಷ್ಯರ ಬಳಿ ಎಚ್ಚರವಾಗಿರಿ. ಅವರ ಫಲಗಳಿಂದಲೇ ಅವರನ್ನು ತಿಳಿಯಬಹುದು ಎಂದು ಹೇಳಿದ ಮಾತುಗಳು ಎಷ್ಟು ಸತ್ಯ! ನಾವು ಸಹ ಒಂದು ನಕಲಿ ಕ್ರೈಸ್ತ ಜೀವನವನ್ನು ನಡೆಸದಂತೆ ಜಾಗರೂಕರಾಗಿರೋಣ.

- Mrs. ಶಶಿಕಲಾ ಪರಮಶಿವಂ

 

ಪ್ರಾರ್ಥನಾ ಅಂಶ:

ಅಮೆನ್ ವಿಲೇಜ್ ಟಿವಿ ಕಾರ್ಯಕ್ರಮಗಳನ್ನು ಬೆಂಬಲಿಸುವ ಅನೇಕ ಪಾಲುದಾರರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş