Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.11.2023
Share:

By Village Missionary Movement

Wednesday, 08-Nov-2023

ಧೈನಂದಿನ ಧ್ಯಾನ(Kannada) – 08.11.2023

 

ಅಸಹ್ಯಕರ

 

"ವಕ್ರಹೃದಯರು ಯೆಹೋವನಿಗೆ ಅಸಹ್ಯರು; ಸನ್ಮಾರ್ಗಿಗಳು ಆತನ ದಯೆಗೆ ಆಸ್ಪದರು" - ಜ್ಞಾನೋಕ್ತಿ 11:20

 

"ಕರ್ತನಿಗೆ ಅಸಹ್ಯವಾದವುಗಳು" ಎಂದು ಅನೇಕ ಕಾರ್ಯಗಳು ಸತ್ಯವೇದದಲ್ಲಿವೆ. ಅವುಗಳಲ್ಲಿ ಕೆಲವನ್ನು ಧ್ಯಾನಿಸಿ ನಮ್ಮನ್ನು ಪರೀಕ್ಷಿಸೋಣ. ಕರ್ತನಿಗೆ ಅಸಹ್ಯವಾದ ಕಾರ್ಯಗಳು

 

1. ಮೋಸದ ತ್ರಾಸು: "ಮೋಸದ ತ್ರಾಸು ಯೆಹೋವನಿಗೆ ಅಸಹ್ಯ; ನ್ಯಾಯದ ತೂಕ ಆತನಿಗೆ ಸಂತೋಷ." (ಜ್ಞಾನೋ. 11:1) ಸಾಮಾನ್ಯವಾಗಿ ಈ ವಾಕ್ಯವನ್ನು ತಕ್ಕಡಿಯನ್ನು ಉಪಯೋಗಿಸುವ ವ್ಯಾಪಾರಿಗಳು ಅನುಸರಿಸಬೇಕಾದ ವಿಧಾನವಾಗಿದೆ. ಅವರು ತಪ್ಪು ತೂಕ ಅಥವಾ ಅಳತೆ ಸೇರುಗಳನ್ನು ಹೊಂದಿದ್ದರೆ ದೇವರು ಅವರನ್ನು ಆಶೀರ್ವದಿಸಲು ಸಾಧ್ಯವೇ ಇಲ್ಲ. ನಾವು ಕೈಯಿಟ್ಟು ಮಾಡುವ ಕೆಲಸಗಳು ಆಶೀರ್ವದಿಸಲ್ಪಡಬೇಕಾದರೆ ನಾವು ಎಲ್ಲಾ ವಿಷಯಗಳಲ್ಲಿ ನಿಷ್ಠೆಯಿಂದ ನಡೆಯುವುದು ಅತ್ಯಗತ್ಯ. ಏಕೆಂದರೆ ನಂಬಿಗಸ್ತನು ಆಶೀರ್ವಾದ ಪೂರ್ಣನಾಗುವನು.

 

2. ವಕ್ರಹೃದಯರು: ವಕ್ರಹೃದಯರು ಯೆಹೋವನಿಗೆ ಅಸಹ್ಯರು." (ಜ್ಞಾನೋ. 11:20) ಪ್ರಾಮಾಣಿಕತೆ ಇಲ್ಲದ, ಕರ್ತನಿಗೆ ಇಷ್ಟವಿಲ್ಲದ ದಾರಿಯಲ್ಲಿ ನಡೆಯುವವರು ಅಂದರೆ ಅಸತ್ಯವಾದ ಮತ್ತು ನ್ಯಾಯಕ್ಕೆ ವಿರುದ್ಧವಾದ ಕೆಲಸಗಳನ್ನು ಮಾಡುವವರು ಕರ್ತನಿಗೆ ಅಸಹ್ಯರು. ನೀತಿವಂತರನ್ನು ತಪ್ಪಿತಸ್ಥರೆಂದು ಮತ್ತು ತಪ್ಪಿತಸ್ಥರನ್ನು ನೀತಿವಂತರೆಂದು ನಿರ್ಣಯಿಸುವ ಸುಳ್ಳುಗಾರರನ್ನು ದೇವರು ದ್ವೇಷಿಸುತ್ತಾರೆ. ಕರುಣೆಯನ್ನು ಕೋರಿ ನ್ಯಾಯವನ್ನು ವಿರೂಪಗೊಳಿಸುವವರನ್ನು ಅಸಹ್ಯರಾಗಿ ಮಾತ್ರವಲ್ಲ, ಅವರಿಗೆ ಶಿಕ್ಷೆಯೂ ನೀಡುತ್ತಾರೆ. ನಾವು ಇಂತಹ ಅಸಹ್ಯಕರ ಕೆಲಸಗಳನ್ನು ಮಾಡದೆಯೂ ಮತ್ತು ಹಾಗೆ ಮಾಡುವವರನ್ನು ಬೆಂಬಲಿಸದೆಯೂ ಇರೋಣ.

 

3. ಸುಳ್ಳು ತುಟಿ: "ಸುಳ್ಳುತುಟಿ ಯೆಹೋವನಿಗೆ ಹೇಸು" (ಜ್ಞಾನೋ. 12:22) ಸುಳ್ಳನ್ನು ಸರಳವಾಗಿ ಮಾತನಾಡುವವರು ಅನೇಕರಿದ್ದಾರೆ. ಇದು ತಪ್ಪು ಮತ್ತು ದೇವರಿಗೆ ವಿರುದ್ಧವಾದುದು ಎಂದು ಅವರು ಅರಿತುಕೊಳ್ಳುವುದಿಲ್ಲ. ಸುಳ್ಳಾಡುವವರೆಲ್ಲರು ಎರಡನೇ ಮರಣವಾದ ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ ಪಾಲುದಾರರಾಗುತ್ತಾರೆ ಎಂದು ಸತ್ಯವೇದವು ಎಚ್ಚರಿಸುತ್ತಿದೆ. ಸುಳ್ಳಾದದ್ದನ್ನು ನಡಿಸುವವನೊಬ್ಬನೂ ದೇವರ ರಾಜ್ಯವನ್ನು ಪ್ರವೇಶಿಸುವುದಿಲ್ಲ. (ಪ್ರಕಟನೆ 21:27)

 

4. ದುಷ್ಟರ ಮಾರ್ಗ ಮತ್ತು ನಡೆ: ದುಷ್ಟರ ಮಾರ್ಗ ಮತ್ತು ಬಲಿ ಅವರ ನೆನಪುಗಳು ಕರ್ತನಿಗೆ ಅಸಹ್ಯವಾಗಿದೆ. ನೀತಿಯನ್ನು ಅನುಸರಿಸುವವನನ್ನು ಆತನು ಪ್ರೀತಿಸುತ್ತಾನೆ. ಯಥಾರ್ಥವಂತರ ಪ್ರಾರ್ಥನೆಯನ್ನು ಕರ್ತನು ಕೇಳಿ ಅದರಲ್ಲಿ ಸಂತೋಷಪಡುತ್ತಾರೆ.

 

ಅಂತಿಮವಾಗಿ, ಹೆಮ್ಮೆಯ ವ್ಯಕ್ತಿ ದೇವರಿಗೆ ಅಸಹ್ಯವಾಗಿದ್ದಾನೆ. ಆದ್ದರಿಂದ ನಾವು ತಾಳ್ಮೆಯನ್ನು ಧರಿಸಿಕೊಂಡು ದೇವರಿಗೆ ಅಸಹ್ಯವಾದ ಕಾರ್ಯಗಳನ್ನು ಎತ್ತಿ ಬಿಸಾಡಿ ದೇವರಿಗೆ ಮೆಚ್ಚಿಕೆಯಾಗಿ ಜೀವಿಸಿ, ದೇವರ ಆಶೀರ್ವಾದವನ್ನು ಸ್ವತಂತ್ರಿಸಿಕೊಳ್ಳೋಣ. ಆಮೆನ್!

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿ ಕಾರ್ಯಕ್ರಮಗಳನ್ನು ತಯಾರಿಸುವ ಸಿಬ್ಬಂದಿಗಳಿಗಾಗಿ ಮತ್ತು ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet