Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.11.2023
Share:

By Village Missionary Movement

Tuesday, 07-Nov-2023

ಧೈನಂದಿನ ಧ್ಯಾನ(Kannada) – 07.11.2023

 

ತೀರ್ಮಾನಿಸುವಿಕೆ

 

"ಹೀಗಿರಲಾಗಿ ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ" - 1 ಕೊರಿಂಥ 10:31

 

ಪ್ರಪಂಚದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅನೇಕ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಏನು ಅಧ್ಯಯನ ಮಾಡಬೇಕು? ಯಾವ ಕೆಲಸ ಮಾಡಬೇಕು? ಯಾರನ್ನು ಮದುವೆಯಾಗಬೇಕು? ಇಂಥಹ ಕಾರ್ಯಗಳಲ್ಲಿ ಏನಾದರೂ ಒಂದು ನಿರ್ಧಾರ ಕೈಗೊಳ್ಳಬೇಕಾದ ಪರಿಸ್ಥಿತಿಯಲ್ಲಿ ಯುವಕರು ಇದ್ದಾರೆ. ಇಂದಿನ ನಿರ್ಧಾರ ನಮ್ಮ ನಾಳೆಯನ್ನು ನಿರ್ಧರಿಸುತ್ತದೆ. ಸ್ವಾರ್ಥ, ಹೆಮ್ಮೆ, ಹಣದಾಸೆ ಇತ್ಯಾದಿಗಳಿಂದ ನಾವು ತೆಗೆದುಕೊಳ್ಳುವ ಅಸಡ್ಡೆ ಅಥವಾ ಆತುರದ ನಿರ್ಧಾರಗಳು ನಮ್ಮ ಜೀವನದುದ್ದಕ್ಕೂ ಮತ್ತು ಕೆಲವೊಮ್ಮೆ ನಮ್ಮ ಜೀವನದ ನಂತರವೂ ದೊಡ್ಡ ಪರಿಣಾಮಗಳನ್ನು ಬೀರುತ್ತವೆ.

 

ದೇವರ ಮಕ್ಕಳಾಗಿ ನಾವು ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಕೆಲವು ಅಂಶಗಳನ್ನು ನೋಡೋಣವಾ. ಮೊದಲು ದೇವರನ್ನು ಅವಲಂಬಿಸಿ ಮತ್ತು ಆತನನ್ನು ನಂಬಿ. ಆಗ ಅವರು ಏನು ಮಾಡಬೇಕೋ ಅದನ್ನು ನಿಖರವಾಗಿ ಮಾಡುತ್ತಾರೆ. ಕೀರ್ತನೆ 37:5 ಹೇಳುತ್ತದೆ, "ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು." ನಾವು ಯೇಸುವನ್ನು ನಮ್ಮ ಮಾರ್ಗದರ್ಶಿಯಾಗಿ ಮಾಡಿಕೊಂಡು ನಮ್ಮ ಎಲ್ಲವನ್ನು ಅವರ ಆಲೋಚನೆಗೆ ಅರ್ಪಿಸಿದರೆ ಅತ್ಯಂತ ಕಷ್ಟಕರವಾದ ಮತ್ತು ಗೊಂದಲಮಯವಾದ ವಿಷಯಗಳು ಸಹ ಸರಳವಾಗಿ ಮುಗಿಯುತ್ತವೆ.

 

ನಮ್ಮ ಸ್ಥಿತಿ ಮತ್ತು ನಮ್ಮ ಅಗತ್ಯಗಳನ್ನು ಪ್ರಾರ್ಥನೆಯೊಂದಿಗೆ ದೇವರಿಗೆ ತಿಳಿಸುವ ಮೂಲಕ ಮತ್ತು ಆತನಲ್ಲಿ ದೃಢವಾಗಿ ಭರವಸೆಯಿಡುವುದರಿಂದ ನಾವು ಗೊಂದಲಕ್ಕೊಳಗಾಗದೆ ಇರಬಹುದು. ಆತನನ್ನು ನೋಡುತ್ತಾ ಕುಳಿತು ಪ್ರಾರ್ಥಿಸಿ ಕಾದಿರೋಣ. ಯೇಸು ಕೂಡ ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಆರಿಸುವ ಮೊದಲು ರಾತ್ರಿಯಿಡೀ ಪ್ರಾರ್ಥಿಸಿದರು.

 

ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ದೇವರ ಆಲೋಚನೆಯನ್ನು ಪಡೆಯಬೇಕೆಂದು ಜ್ಞಾನೋಕ್ತಿಗಳ ಪುಸ್ತಕ ಹೇಳುತ್ತಿದೆ. ಒಬ್ಬನು ಸೂಕ್ತ ಆಲೋಚನೆಯನ್ನು ಪಡೆಯದಿದ್ದರೆ ಅವನ ಯೋಜನೆಗಳು ವಿಫಲವಾಗುತ್ತವೆ. ಆಲೋಚನೆಗಾರರು ಅನೇಕರಿದ್ದರೆ, ಅವು ದೃಢಗೊಳ್ಳುತ್ತದೆ ಎಂದು ಸತ್ಯವೇದವು ಹೇಳುತ್ತಿದೆ. ದೇವರ ಸಹಾಯದೊಂದಿಗೆ ನಾವು ನಿರ್ಧರಿಸಬಹುದು. ಅಮಾಲೇಕ್ಯರು ಚಿಕ್ಲಗ್ ಅನ್ನು ಹೇಗೆ ಸುಟ್ಟುಹಾಕಿ ಅವರ ಹೆಂಡತಿಯರು, ಮಕ್ಕಳು ಮತ್ತು ಆಸ್ತಿಯನ್ನು ದೋಚಿಕೊಂಡು ಹೋದಾಗ, ದಾವೀದನು ಕರ್ತನಲ್ಲಿ ತನ್ನನ್ನು ಬಲಪಡಿಸಿಕೊಂಡು ಅವರ ಬಳಿ ಆಲೋಚನೆಯನ್ನು ಕೇಳಿ ಅಮಾಲೇಕ್ಯರನ್ನು ಸೋಲಿಸಿ ಎಲ್ಲವನ್ನೂ ಹಿಂದಿರುಗಿಸಿಕೊಂಡರೋ ಹಾಗೆಯೇ ಕರ್ತನ ಆಲೋಚನೆಯೇ ಉತ್ತಮ ಮಾರ್ಗವಾಗಿದೆ! ನಿರ್ಧಾರ ತೆಗೆದುಕೊಳ್ಳಲು. ಹಲ್ಲೇಲೂಯಾ!!

- Mrs. ಜಾಸ್ಮಿನ್ ಪಾಲ್ 

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿ ಕಾರ್ಯಕ್ರಮಗಳ ಮೂಲಕ ಅನೇಕರು ದೇವರ ಪ್ರೀತಿಯನ್ನು ಅನುಭವಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş