Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.11.2023
Share:

By Village Missionary Movement

Monday, 06-Nov-2023

ಧೈನಂದಿನ ಧ್ಯಾನ(Kannada) – 06.11.2023

 

ಕಾಣೆಯಾದ ಕುರಿ

 

"ನಾನೇ ಒಳ್ಳೇ ಕುರುಬನು; ಒಳ್ಳೇ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ” - ಯೋಹಾನ10:11

 

ಒಬ್ಬ ಕುರುಬನು ತನ್ನ ಕುರಿಗಳ ಹಿಂಡನ್ನು ಪರ್ವತದ ತಪ್ಪಲಿನ ಕಡೆಗೆ ಕರೆದೊಯ್ದನು. ಹಿಂಡಿನಲ್ಲಿದ್ದ ಚೇಷ್ಟೆಯ ಕುರಿಯೊಂದು ಮೇಯುತ್ತಿರುವಾಗ ತಲೆ ಎತ್ತಿ ನೋಡಿತು. ಸ್ವಲ್ಪ ದೂರದಲ್ಲಿದ್ದ ಹಸಿರು ಹುಲ್ಲುಗಾವಲನ್ನು ಕಂಡಿತು. ಮೇಯಲು ಆಸೆಯಿಂದ ಕುರುಬನ ಕಣ್ಣು ತಪ್ಪಿಸಿ ಸ್ವಲ್ಪ ದೂರ ಹೋಯಿತು. ಸ್ವಲ್ಪ ದೂರ, ಸ್ವಲ್ಪ ದೂರ ಎಂದು ಕುರುಬನ ಕಣ್ಣಿಗೆ ಕಾಣದಂತೆ ದೂರ ಹೊರಟು ಹೋಯಿತು. ಸ್ವಲ್ಪ ಕತ್ತಲಾಗಲು ದಾರಿತಪ್ಪಿದ ಕುರಿಗೆ ಭಯವಾಯಿತು. ಮಾರಣಾಂತಿಕ ಮೃಗಗಳ ಸದ್ದು ಬೇರೆ. ಗಾಬರಿ ಹುಟ್ಟಿಸಲು, ಅದು ದಯನೀಯವಾಗಿ ನಿಂತಿತು. ಅಲ್ಲಿ ಹಿಂಡುಗಳನ್ನು ಕೂಡಿಸಿದ ಕುರುಬನು ಕಾಣೆಯಾದ ಕುರಿಯನ್ನು ಹುಡುಕುತ್ತಾ ಬಂದನು. ಮುಳ್ಳುಗಳಿಂದ ಚುಚ್ಚಲ್ಪಟ್ಟು ಕರುಣಾಜನಕವಾಗಿ ನಿಂತಿದ್ದ ಕುರಿಯನ್ನು ಕಂಡನು. ಖುಷಿಯಿಂದ ಅದನ್ನು ತಬ್ಬಿಕೊಂಡು ತೋಳಿನ ಮೇಲೆ ಹಾಕಿಕೊಂಡು ಹಿಂಡಿನ ಕಡೆ ನಡೆದನು.

 

ಸತ್ಯವೇದದಲ್ಲಿಯೂ ಸಹ ತನ್ನ ನೋಟಕ್ಕೆ ಅಂದವಾಗಿ ಕಂಡ ಸೊದೋಮ್‍ಗೊಮೋರ ಪಟ್ಟಣಗಳಿಗೆ ಹತ್ತಿರವಿರುವ ಯೊರ್ದಾನ್ ಅನ್ನು ಕಂಡು, ಲೋಟನು ಅಬ್ರಹಾಮನನ್ನು ಬಿಟ್ಟು ಬೇರ್ಪಟ್ಟರು. ಆ ಪಟ್ಟಣದ ದುಷ್ಟತನವು ಹೆಚ್ಚಾಗಿ ದೇವರ ಸನ್ನಿಧಿಗೆ ತಲುಪಿದಾಗ ಅದನ್ನು ನಾಶಮಾಡಲು ದೇವದೂತರು ಬಂದರು! ಅದರಲ್ಲಿ ಲೋಟನನ್ನು ತಪ್ಪಿಸಿ ಕಳುಹಿಸಿಬಿಟ್ಟಾಗ, ಅವರ ಹೆಂಡತಿ ಹಿಂತಿರುಗಿ ನೋಡಿ ಉಪ್ಪಿನ ಸ್ತಂಭವಾದಳು. ಹೆಣ್ಣು ಮಕ್ಕಳಿಬ್ಬರೂ ಪಾಪ ಮಾಡಿದರು. ಅವರಿಂದ ಮೋವಾಬ್ ಮತ್ತು ಅಮ್ಮೋನ್ ಎಂಬ ಇಬ್ಬರು ವಂಶಸ್ಥರು ಬಂದರು. ತಪ್ಪಿಸಿಕೊಂಡು ಬಂದ ಆ ಪೀಳಿಗೆಯನ್ನು ಉಳಿಸಲು ದೇವರು ಮೋವಾಬ್ಯ ಮಹಿಳೆಯಾದ ರೂತ್‌ಳೊಂದಿಗೆ ಪುನಃ ತನ್ನ ವಿಮೋಚನೆಯ ಯೋಜನೆಯನ್ನು ಪ್ರಾರಂಭಿಸಿದರು. ಹೌದು, ಅವರು ತಳ್ಳಿಬಿಡುವವರಲ್ಲವಲ್ಲಾ!

 

ಪ್ರಿಯರೇ, ಲೋಕದ ಇಚ್ಚೆಗಳಿಂದ ಸಿಕ್ಕಿಕೊಂಡು, ಪಾಪದಲ್ಲಿ ಬಿದ್ದಿದ್ದ ನಮ್ಮನ್ನು ಬಿಡಿಸಲು ಯೇಸುಕ್ರಿಸ್ತನೇ ನಮಗಾಗಿ ಬಂದರೇ. ಕಾಣದೆಹೋದ ಕುರಿಗಳಾದ ನಮ್ಮನ್ನು ಬಿಡಿಸಿಕೊಳ್ಳುವುದಕ್ಕಾಗಿ ಅವರು ತನ್ನ ಕೊನೆಯ ಹನಿ ರಕ್ತವನ್ನೂ ಸಹ ನಮಗಾಗಿ ಸುರಿಸಿಬಿಟ್ಟರೇ! ಮುಳ್ಳಿನ ಕಿರೀಟ ಧರಿಸಿಕೊಂಡು, ಗಾಯಗೊಂಡು, ಹೊಡೆತಗಳನ್ನು ತಿಂದು, ಜಜ್ಜಲ್ಪಟ್ಟರೇ. ನಮ್ಮ ಕುರುಬನು ಕುರಿಗಳಿಗಾಗಿ ತನ್ನ ಪ್ರಾಣವನ್ನು ಕೊಡುವ ಒಳ್ಳೆಯ ಕುರುಬನಲ್ಲವೇ! ನೀವು ಇನ್ನೂ ಯೇಸುವಿನ ಮಂದೆಯನ್ನು ಸೇರದ ಕುರಿಗಳಾ? ಒಳ್ಳೆಯ ಕುರುಬನಾಗಿ ಇಂದಿಗೂ ಕಣ್ಣೀರಿನಿಂದ ನಿಮ್ಮನ್ನು ಹುಡುಕುತ್ತಿದ್ದಾರೆ. ದೇವರು ಇನ್ನೂ ನಿಮ್ಮನ್ನು ಪ್ರೀತಿಸುತ್ತಿದ್ದಾರೆ. ನಿಮ್ಮ ಪಾಪಗಳನ್ನು ಮರೆತುಬಿಟ್ಟರು. ಆದರೆ ನಿಮ್ಮನ್ನು ಎಂದಿಗೂ ಮರೆಯುವುದೇ ಇಲ್ಲ. ಅವರ ತೋಳಿನ ಮೇಲೆ ಹೊತ್ತುಕೊಳ್ಳಲು ಸಿದ್ಧವಾಗಿದ್ದಾರೆ

- Sis. ಮಂಜುಳಾ

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿ ಸ್ಯಾಟಲೈಟ್ ಚಾನೆಲ್ ಆಗಿ ಪರಿವರ್ತಿಸಲು ಮಾಡುತ್ತಿರುವ ಎಲ್ಲಾ ಪ್ರಯತ್ನಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al