Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.11.2023 (Kids Special)
Share:

By Village Missionary Movement

Saturday, 04-Nov-2023

ಧೈನಂದಿನ ಧ್ಯಾನ(Kannada) – 05.11.2023 (Kids Special)

 

ಆಸೆ ಈಡೇರುತ್ತದೆ

 

"ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು" - ಆದಿಕಾಂಡ 12:2

 

ಪ್ರೀತಿಯ ಮುದ್ದು ಪುಟಾಣಿಗಳೇ, ತ್ರೈಮಾಸಿಕ ಪರೀಕ್ಷೆಗಳು ಮುಗಿದ ನಂತರ ನೀವು ಅರ್ಧ ವಾರ್ಷಿಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುತ್ತೀರ. ಮೊದಲಿಗಿಂತ ಹೆಚ್ಚು ಅಂಕಗಳಿಸುವ ಆಸೆ ನಿಮ್ಮಲ್ಲಿದ್ದರೆ ನಮ್ಮ ಯೇಸಪ್ಪ ಖಂಡಿತಾ ಪೂರೈಸುತ್ತಾರೆ. ಅದಕ್ಕಾಗಿ ನಾವು ಮೂರು ಕೆಲಸಗಳನ್ನು ಮಾಡಬೇಕಾಗಿದೆ. ಒಂದು ಆಸೆ, ಎರಡು ಯೇಸಪ್ಪನ ಬಳಿ ಹೇಳಬೇಕು, ಮೂರು ದೇವರಿಗೆ ಭಯಪಟ್ಟು ಆತನಿಗೆ ಮೆಚ್ಚಿಕೆಯಾಗಿ ನಡೆಯಬೇಕು ಹೀಗೆ ಮಾಡಿ ನಾವು ಓದಲು ಆರಂಭಿಸಿದರೆ ಯೇಸಪ್ಪ ನಮಗೂ ಅದ್ಭುತಗಳನ್ನು ಮಾಡುತ್ತಾರೆ. ಸರಿ, ನಾವು ಒಂದು ಕಥೆಯನ್ನು ಕೇಳೋಣ್ವಾ?

 

ಒಬ್ಬ ಪ್ರತಿಭಾವಂತ ಶಿಲ್ಪಿ ಇದ್ದರು. ಶಿಲ್ಪಿ ಎಂದರೆ ಆಕೃತಿಗಳನ್ನು ಮತ್ತು ಸ್ಮಾರಕಗಳನ್ನು ಕಲ್ಲುಗಳಲ್ಲಿ ಕೆತ್ತುವವರು ಎಂದರ್ಥ. ಶಿಲ್ಪಿಯ ಕಣ್ಣುಗಳಲ್ಲಿ 2 ಬಂಡೆಗಳು ಕಂಡುಬಂದವು. ಅದನ್ನು ನೋಡಿದ ಕೂಡಲೇ ಅದರಲ್ಲಿ ಎರಡು ಶಿಲ್ಪಗಳನ್ನು ಕೆತ್ತಬೇಕು ಎಂದು ಯೋಚಿಸಿ ಕೆಲವು ಶಿಲ್ಪಿಗಳನ್ನು ಸ್ನೇಹಿತರಂತೆ ಆಹ್ವಾನಿಸಿ ಈ ಎರಡು ಬಂಡೆಗಲ್ಲುಗಳಲ್ಲಿ ಜಗತ್ಪ್ರಸಿದ್ಧ ಹಾಗೂ ಪ್ರೀತಿಪಾತ್ರರಾದ ಇಬ್ಬರು ವ್ಯಕ್ತಿಗಳನ್ನು ಕೆತ್ತಲು ಯೋಜನೆ ಹಾಕೋಣವಾ ಎಂದರು. ಅವರು ಆ ಬಂಡೆಯನ್ನು ನೋಡಿ ಇದೊಂದು ಸಾಮಾನ್ಯ ಕಲ್ಲು. ಜಗತ್ಪ್ರಸಿದ್ಧ ವ್ಯಕ್ತಿಗಳನ್ನು ಕೆತ್ತುವುದು ಸಾಧ್ಯವಿಲ್ಲದ ಕಾರ್ಯ ಎಂದು ತಳ್ಳಿಬಿಟ್ಟರು. ಆದರೆ ಅವರು ತನ್ನ ಮನಸ್ಸಿನಲ್ಲಿ ಒಂದು ತೀರ್ಮಾನ ಮಾಡಿ ಅದಕ್ಕಾಗಿ ಪ್ರಾರ್ಥನೆಯೂ ಮಾಡಿಬಿಟ್ಟರು. ಆದ್ದರಿಂದ ಅವರು ಅದನ್ನು ಅಸಡ್ಡೆಯಾಗಿ ಬಿಟ್ಟು ಬಿಡಲು ಬಯಸಲಿಲ್ಲ. ಇದ್ದಕ್ಕಿದ್ದಂತೆ ದೇವರು ಅವರಿಗೆ ಒಂದು ಒಳ್ಳೆಯ ಶಿಲ್ಪಿಯನ್ನು ನೆನಪಿಸಿದರು. ಅವರನ್ನು ಕರೆತಂದು ಈ ಕಲ್ಲುಗಳನ್ನು ತೋರಿಸಿ ತನ್ನ ಆಸೆಯನ್ನು ವ್ಯಕ್ತಪಡಿಸಿದರು. ಅವರು ಸಹ ಪ್ರಾರ್ಥಿಸಿ ಯಾರನ್ನು ಕೆತ್ತಬೇಕು ಎಂದು ನೆನಪಿಸುವಂತೆ ದೇವರನ್ನು ಕೇಳಿಕೊಂಡರು. ಆಗ ದಾವೀದನು ಸ್ವರಮಂಡಲಗಳನ್ನು ಬಾರಿಸಿ ಕರ್ತನನ್ನು ಮಹಿಮೆಪಡಿಸಿದ್ದು ಮತ್ತು ಗೊಲ್ಯಾತನನ್ನು ಕಲ್ಲಿನಿಂದ ಹೊಡೆದುರುಳಿಸಿದ್ದು ನೆನಪಿಗೆ ಬಂತು. ಅದನ್ನು ಹಾಗೆಯೇ ಶಿಲ್ಪವಾಗಿ ಕೆತ್ತಿಬಿಟ್ಟರು. ಅವರು ಹಾಗೆ ಕೆತ್ತುತ್ತಿರುವಾಗಲೇ ಹಲವು ಅನಗತ್ಯ ಭಾಗಗಳನ್ನು ಕೆತ್ತಬೇಕಾಯಿತು. ನಂತರ ಅದು ವಿಶ್ವವೇ ಬೆರಗಾಗುವಂತೆ ದುಬಾರಿ ಶಿಲ್ಪವಾಗಿ ಮಾರ್ಪಟ್ಟಿತು. ದಾವೀದನು ಸ್ವರಮಂಡಲವನ್ನು ನುಡಿಸುತ್ತಿರುವಂತೆ ಮತ್ತು ಯುದ್ಧದಲ್ಲಿ ಗೊಲ್ಯಾತನನ್ನು ಒಂದೇ ಕಲ್ಲಿನಿಂದ ಬೀಳಿಸಿದಂತೆಯೂ ಇತ್ತಂತೆ.

 

ಓಕೆ, ಪುಟ್ಟ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ದಾವೀದನು ಸಾಮಾನ್ಯ ಮನುಷ್ಯನಾಗಿದ್ದರೂ, ಅವನ ಮನಸ್ಸಿನಲ್ಲಿ ದೇವರನ್ನು ಮಹಿಮೆಪಡಿಸಿ ಘನಪಡಿಸಬೇಕು ಎಂಬ ಉನ್ನತ ಉದ್ದೇಶವನ್ನು ಹೊಂದಿದ್ದರು, ಆದ್ದರಿಂದ ಅವರು ಇನ್ನೂ ನಮ್ಮ ನೆನಪಿನಲ್ಲಿರುವ ಮೂಲಮಾದರಿಯ ದೇವರ ಮಗುವಿನಂತೆ ಕಾಣುತ್ತಿದ್ದಾರೆ. ಇಂದು. ನೀವು ಸಹ ನಿಮ್ಮನ್ನು ಸಾಮಾನ್ಯ ಎಂದು ಅಂದುಕೊಳ್ಳುತ್ತಿದ್ದೀರಾ? ಇಲ್ಲ; ಯೇಸುವಿನ ಬಳಿ ನಿಮ್ಮನ್ನು ಕೆತ್ತಲು ಒಪ್ಪಿಸಿಕೊಟ್ಟರೆ, ಜಗತ್ತು ಆಶ್ಚರ್ಯಪಡುವ ರೀತಿಯಲ್ಲಿ ಅವರು ನಿಮ್ಮನ್ನು ರೂಪಿಸುತ್ತಾರೆ. ನಾವು ಬದುಕಿರುವಾಗ ಮಾತ್ರವಲ್ಲ, ಸತ್ತ ನಂತರವೂ ಜಗತ್ತು ನಮ್ಮನ್ನು ನೆನಪಿಸಿಕೊಳ್ಳುತ್ತದೆ! ಸರೀನಾ?

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş