Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.11.2023
Share:

By Village Missionary Movement

Saturday, 04-Nov-2023

ಧೈನಂದಿನ ಧ್ಯಾನ(Kannada) – 04.11.2023

 

ದೇವರ ಪ್ರಸನ್ನತೆ 

 

"…ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ" - ಇಬ್ರಿಯ 13:5

 

ಜೀವನದ ಕೆಲವು ಸಂದರ್ಭಗಳಲ್ಲಿ ದೇವರು ನಮ್ಮೊಂದಿಗಿದ್ದಾರಾ? ಇಲ್ಲವಾ? ಎಂಬ ಪ್ರಶ್ನಾರ್ಥಕ ಚಿಹ್ನೆ ದೇವರ ಮಕ್ಕಳಿಗೆ ಬರುತ್ತದೆ. "ನಾನು ನಿನ್ನನ್ನು ಎಂದಿಗೂ ಕೈ ಬಿಡುವುದಿಲ್ಲ" ಎಂಬ ವಾಗ್ದಾನ ತಪ್ಪದ ದೇವರ ಪ್ರಸನ್ನತೆಯನ್ನು ಯಾಕೆ ನಿಮ್ಮಿಂದ ಯಾವಾಗಲೂ ಅನುಭವಿಸಲು ಸಾಧ್ಯವಾಗದೆ ಹೋಗುತ್ತಿದೆ ಎಂಬುದರ ಕಾರಣಗಳನ್ನು ಸತ್ಯವೇದದ ಮೂಲಕ ಕಲಿಯೋಣ.

 

ದುಃಖ: ಯೇಸುವಿನ ಮರಣದಿಂದ ತುಂಬಾ ದುಃಖಿತಳಾಗಿದ್ದದರಿಂದ ಮಗ್ದಲದ ಮರಿಯಳು ತನಗೆ ಯೇಸು ಕಾಣಿಸಿಕೊಂಡರೂ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಎಮ್ಮಾಹು ಊರಿಗೆ ನಡೆದ ಇಬ್ಬರು ಶಿಷ್ಯರೊಂದಿಗೆ ಯೇಸು ಸಹ ನಡೆದು ಹೋದರು. ಅವರು ದುಃಖಿತರಾಗಿದ್ದದರಿಂದ ಯೇಸುವಿನ ಪ್ರಸನ್ನತೆಯನ್ನು ಅನುಭವಿಸಲಿಲ್ಲ. ಕಾರಣ ಅವರಿಗೆಲ್ಲ ಯೇಸುವಿನ ಪಾಡುಗಳು ಮತ್ತು ಪುನರುತ್ಥಾನದ ಮಾತುಗಳು ತಿಳಿದಿರಲಿಲ್ಲ. ಸಕಲವಿಧವಾಗಿ ಆದರಿಸುವ ದೇವರ ಕುರಿತಾದ ವೇದವಾಕ್ಯಗಳು ನಮ್ಮ ದುಃಖ, ವೇದನೆಯ ಸಮಯದಲ್ಲೂ ನಮ್ಮನ್ನು ಆದರಿಸಿ ಬಲಪಡಿಸುತ್ತವೆ. ಆದ್ದರಿಂದ ಅವುಗಳನ್ನು ತಿಳಿದಿರುವುದು ಎಷ್ಟು ಮುಖ್ಯ!

 

ಭಯ: ಭಯವು ಒಂದು ನಕಾರಾತ್ಮಕ ಭಾವನೆಯಾಗಿದೆ. ನಂಬಿಕೆಯನ್ನು ನಂದಿಸಿಬಿಡುತ್ತದೆ. ಐದು ರೊಟ್ಟಿಗಳು ಮತ್ತು ಎರಡು ಮೀನುಗಳೊಂದಿಗೆ ಐದು ಸಾವಿರ ಜನರಿಗೆ ಆಹಾರ ನೀಡಿದ ಅದ್ಭುತವಾದ ನಂತರ, ಯೇಸು ಮುಂದಾಗಿ ಆಚೇದಡಕ್ಕೆ ಹೋಗಿರಿ ಎಂದು ಹೇಳಿದರು. ಎದುರುಗಾಳಿ ಬೀಸುತ್ತಿದ್ದದರಿಂದ ತೆರೆಗಳ ಬಡಿತಕ್ಕೆ ಸಿಕ್ಕಿ ದೋಣಿಯು ಒದ್ದಾಡುತ್ತಿತ್ತು ಈ ಸಂದರ್ಭದಲ್ಲಿ ಯೇಸು ಸಮುದ್ರದ ಮೇಲೆ ನಡೆದು ಅವರ ಕಡೆಗೆ ಬಂದಾಗ ಶಿಷ್ಯರು ಆತನನ್ನು ನೋಡಿ ಭಯದಿಂದ ಕೂಗಿದರು. ಅವರ ಪ್ರಸನ್ನತೆಯನ್ನು ಅರಿಯಲಿಲ್ಲ. ಅವರು ಹೇಳಿ ಮಾಡಿದಂತಹ ಪ್ರಯಾಣದಲ್ಲಿ ಯಾವ ಹಾನಿಯೂ ಸಂಭವಿಸುವುದಿಲ್ಲ ಎಂಬ ನಂಬಿಕೆಯು ಅವರಿಗಿರಲಿಲ್ಲ. ಅವರ ಮುಂದೆ ಮಾಡಿದ ಅದ್ಭುತವನ್ನು ಸಹ ಅವರು ನೆನಪಿಸಿಕೊಳ್ಳಲಿಲ್ಲ. ನನ್ನ ಭಯಪಡುವ ದಿನದಲ್ಲಿ ಕರ್ತನನ್ನೇ ನಂಬುತ್ತೇನೆ ಎಂದು ದಾವೀದನು ಹೇಳುತ್ತಾರೆ. ನಾವು ಕರ್ತನನ್ನು ಅವರ ವಾಗ್ದಾನಗಳನ್ನು ನಂಬೋಣ!

 

ಹಿಂಜರಿಕೆ: ಪೇತ್ರನು ಮತ್ತು ಕೆಲವು ಶಿಷ್ಯರು ಹಿಂಜರಿದು ತಿಬೇರಿಯ ಸಮುದ್ರದಲ್ಲಿ ಮೀನು ಹಿಡಿಯಲು ಹೋದಾಗ ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಒಂದು ಮೀನೂ ಸಿಗಲಿಲ್ಲ. ಮುಂಜಾನೆ ದಡದಲ್ಲಿ ನಿಂತಿರುವ ಯೇಸುವನ್ನು ಅವರು ಗುರುತಿಸಲಿಲ್ಲ. ಆದರೆ ಯೇಸು 153 ದೊಡ್ಡ ಮೀನುಗಳನ್ನು ಹಿಡಿಯುವಂತೆ ಅದ್ಬುತ ಮಾಡಿ ಅವರ ಪ್ರೀತಿಯನ್ನು ಪ್ರದರ್ಶಿಸಿದಾಗ ಆತನನ್ನು ತಿಳಿದುಕೊಂಡರು. ನಾವು ಸಹ ಹಿಂಜರಿದ ಸ್ಥಿತಿಯಲ್ಲಿದ್ದರೂ ಅನೇಕ ವಿಷಯಗಳ ಮೂಲಕ ಯೇಸುವಿನ ಪ್ರೀತಿಯನ್ನು ಅನುಭವಿಸುವಂತೆ ಮಾಡುತ್ತಾರೆ. ಆಗ ಅವರ ಪ್ರಸನ್ನತೆಯನ್ನು ಅನುಭವಿಸಿ ಅವರ ಕಡೆಗೆ ತಿರುಗಿಕೊಳ್ಳೋಣ.

 

ಎಂದಿಗೂ ಬದಲಾಗದ ದೇವರು ನಮ್ಮನ್ನು ಬಿಟ್ಟು ಒಂದು ಕ್ಷಣವೂ ದೂರ ಸರಿಯುವುದಿಲ್ಲ! ನಮ್ಮನ್ನು ಕೈ ಬಿಡುವುದೂ ಇಲ್ಲ! ಹಲ್ಲೇಲೂಯಾ!

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಸುವಾರ್ತಾ ಶಿಬಿರದ ಮೂಲಕ ಭೇಟಿಯಾಗುವ ಮಕ್ಕಳು ಮತ್ತು ಯೌವನಸ್ಥರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al