Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.11.2023
Share:

By Village Missionary Movement

Friday, 03-Nov-2023

ಧೈನಂದಿನ ಧ್ಯಾನ(Kannada) – 03.11.2023

 

ನಂಬಿ ವಹಿಸಿಕೊಟ್ಟ ಜವಾಬ್ದಾರಿ

 

"…ಅವನವನ ನಡತೆಗೆ ತಕ್ಕ ಫಲವನ್ನು ಕೊಡುವನು" - ಮತ್ತಾಯ 16:27

 

ಒಂದು ವಿಚಿತ್ರವಾದ ಪ್ರಾಚೀನ ಕಥೆಯಿದೆ. ದೇವರು ಈ ಲೋಕವನ್ನು ಸೃಷ್ಟಿಸಿದಾಗ ಎಲ್ಲಾ ಸೃಷ್ಟಿಯನ್ನು ನೋಡಿಕೊಳ್ಳಲು ಒಂದೊಂದು ದೂತನನ್ನು ನೇಮಿಸಿದರು. ಮನುಷ್ಯನಿಗೆ, ಸಮುದ್ರ ಜೀವಿಗಳಿಗೆ, ಕಾಡು ಮೃಗಗಳಿಗೆ, ನಾಡು ಮೃಗಗಳಿಗೆ, ಮರಗಳಿಗೆ ಮತ್ತು ಹುಲ್ಲಿಗೆ ಎಂದು ಒಂದೊಂದು ದೂತನನ್ನು ನೇಮಿಸಿದರು. ಹುಲ್ಲಿಗೆ ನಿಯೋಜಿಸಲಾದ ದೂತನು ಈ ಪುಟ್ಟ ಹುಲ್ಲಿಗೆ ಹೋಗಿ ನಾನೇನು ಮಾಡಲಿ ಎಂದು ಅಂದುಕೊಂಡು ಅದನ್ನು ಗಮನಿಸದೆ ಬಿಟ್ಟನು. ಹುಲ್ಲು ಒಣಗಿ ಹೋಯಿತು. ಹುಲ್ಲು ಇಲ್ಲದೆ, ಕಾಡಿನಲ್ಲಿ ವಾಸಿಸುವ ಆಡುಗಳು, ಹಸುಗಳು ಮತ್ತು ಜಿಂಕೆಗಳು ಹಸಿವಿನಿಂದ ಬಳಲುತ್ತಿದ್ದವು. ದೇವರು ಆ ದೂತನಿಗೆ ನಿನಗೆ ಕೊಡಲ್ಪಟ್ಟ ಕೆಲಸ ಚಿಕ್ಕದೆಂದು ಭಾವಿಸಿ ನಿರ್ಲಕ್ಷ್ಯವಾಗಿದ್ದೆ. ಈಗ ನಿನ್ನ ಕೆಲಸದ ಮಹತ್ವ ಗೊತ್ತಾಗುತ್ತಿದೆಯಾ? ಎಂದರು.

 

ಇದರಂತೆಯೇ ಇಂದು ಅನೇಕರು ತಮಗೆ ಕೊಟ್ಟ ಕೆಲಸ ಚಿಕ್ಕದು, ದೊಡ್ಡದು, ಅಲ್ಪವಾದದ್ದು, ಶ್ರೇಷ್ಟವಾದದ್ದು ಎಂದು ಭಾವಿಸಿ ನಿರ್ಲಕ್ಷ್ಯವಾಗಿದ್ದಾರೆ. ಒಂದನ್ನು ಮುಖ್ಯ ಕೆಲಸವೆಂದೂ ಮತ್ತೊಂದನ್ನು ಮುಖ್ಯವಲ್ಲದ ಕೆಲಸವೆಂದೂ ಪರಿಗಣಿಸುತ್ತಾರೆ. ನಿಮಗೆ ಈ ಜವಾಬ್ದಾರಿ ಮತ್ತು ಕೆಲಸವನ್ನು ಕೊಟ್ಟವರು ಮನುಷ್ಯರೇ ಇರಬಹುದು. ಆದರೆ ಕೆಲಸ ಮಾಡುವವರು ಅನೇಕರು ಇದ್ದರೂ, ನಿಮಗೆ ಕೊಡಬೇಕೆಂಬ ಕಲ್ಪನೆಯನ್ನು ಕರ್ತನೇ ಅವರ ಮನಸ್ಸಿನಲ್ಲಿ ಇಟ್ಟರು. ದೇವರ ಅನುಮತಿಯಿಲ್ಲದೆ ನಿಮಗೆ ಏನನ್ನೂ ನೀಡಲಾಗುವುದಿಲ್ಲ. ದೇವರು ನಿಮ್ಮನ್ನು ನಂಬಿ ಕೊಟ್ಟಿರುವ ಜವಾಬ್ದಾರಿಯನ್ನು ನೀವು ಹೇಗೆ ನಿರ್ವಹಿಸುತ್ತಿದ್ದೀರಿ? ಅವರು ಕೊಟ್ಟಿರುವ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸಿ ಮುಗಿಸಿದಾಗ, ಅದಕ್ಕೆ ತಕ್ಕ ಪ್ರತಿಫಲವಿರುತ್ತದೆ. ಹನ್ನೆರಡು ಜೋಡಿ ಎತ್ತುಗಳನ್ನು ತಂದು ತಾನಾಗಿ ಉಳುತ್ತಿದ್ದವರು ಎಲೀಷ. (1 ಅರಸುಗಳು 19:19) ಅಷ್ಟೊಂದು ಶ್ರೀಮಂತನಾಗಿದ್ದರು. ಆದರೆ ಅಭಿಷೇಕಿಸಲ್ಪಟ್ಟು ಎಲೀಯನು ಹಿಂತಿರುಗಿದಾಗ, ಅವರಿಗೆ ಬೇಕಾದ ಎಲ್ಲಾ ಕೆಲಸಗಳನ್ನೂ, ಎಲೀಯನ ಕೈಗೆ ನೀರು ಕೊಡುವುದನ್ನೂ ಜಾಗರೂಕತೆಯಿಂದ ಮಾಡುತ್ತಿದ್ದರು. ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿ ದ್ದೀಯಾ? ಅವನು ನೀಚರ ಮುಂದೆ ಅಲ್ಲ, ಅರಸರ ಮುಂದೆಯೇ ನಿಲ್ಲುವನು" (ಜ್ಞಾನೋಕ್ತಿ 22:29) ಎನ್ನುತ್ತಾರೆ.

 

ಪ್ರಿಯರೇ, ನಿಮಗೆ ನೀಡಿದ ಜವಾಬ್ದಾರಿ ಮತ್ತು ಕೆಲಸದ ಹಿಂದೆ ಪರಲೋಕ ಆಶೀರ್ವಾದವಿದೆ. ಯಾಕಂದರೆ ಈ ಜವಾಬ್ದಾರಿ, ಈ ಕೆಲಸವು ಪರಲೋಕ ದೇವರಿಂದ ನಿಮಗೆ ಆಜ್ಞಾಪಿಸಲ್ಪಟ್ಟಿದೆ ಎಂಬುದನ್ನು ಮರೆಯಬೇಡಿರಿ. ಕ್ರಿಸ್ತನೇ ನಿಮ್ಮ ಯಜಮಾನ. ಲೌಕಿಕ ವೇತನವನ್ನು ನೋಡಬೇಡಿ ಮತ್ತು ಮನುಷ್ಯನನ್ನು ನೋಡಿ ಪರಲೋಕದ ಆಶೀರ್ವಾದಗಳನ್ನು ಕಳೆದುಕೊಳ್ಳಬೇಡಿರಿ. ನೀವು ಎಲ್ಲೇ ಇದ್ದರೂ ನಿಮ್ಮ ಕೆಲಸವನ್ನು ಎಚ್ಚರಿಕೆಯಿಂದ ಮಾಡಿದರೆ, ಪರಲೋಕ ಆಶೀರ್ವಾದವು ನಿಮ್ಮನ್ನು ಹುಡುಕಿಬರುತ್ತದೆ. ನೀವು ಹುಡುಕಿ ಹೋಗಬೇಕಿಲ್ಲ!

- Mrs. ತವಮಣಿ ವೈರವೇಲ್

 

ಪ್ರಾರ್ಥನಾ ಅಂಶ:

ಸುವಾರ್ತಾ ಶಿಬಿರದ ಆರ್ಥಿಕ ಅಗತ್ಯಗಳು ಪೂರೈಸಲ್ಪಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin