Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.11.2023
Share:

By Village Missionary Movement

Tuesday, 31-Oct-2023

ಧೈನಂದಿನ ಧ್ಯಾನ(Kannada) – 01.11.2023

 

WHAT NEXT? . . .

 

 "ಮನುಷ್ಯನು ಮುಂದಿನದನ್ನು ತಿಳಿಯನು;" - ಪ್ರಸಂಗಿ 10:14

 

ನಮ್ಮ ಮಕ್ಕಳು 12 ನೇ ತರಗತಿಯನ್ನು ಮುಗಿಸಿದ ಕೂಡಲೇ, ನಾವು ಅವರನ್ನು ಮುಂದೆ ಏನು ಎಂದು ಕೇಳುತ್ತೇವೆ. ಹದಿಹರೆಯದವರು ಪ್ರತಿದಿನ ಮುಂದೇನು? ಎಂಬ ಪ್ರಶ್ನೆಯನ್ನು ಉಪಯೋಗಿಸುತ್ತಲೇ ಇರುತ್ತಾರೆ. ಆದರೆ ಈ ಪ್ರಶ್ನೆಯನ್ನು ದಣಿದಿರುವಾಗ, ಚಿಂತೆಯಿಂದ ಸೋತು ಕುಳಿತಿರುವಾಗ ತನ್ನನ್ನು ತಾನೇ ಕೇಳಿಕೊಳ್ಳುವಂಥದ್ದಲ್ಲ.

 

ಚೆನ್ನಾಗಿ ದಿಗ್ವಿಜಯವಾಗಿ, ವೈರಾಗ್ಯದಿಂದ, ಮನಸು ಬಂದಂತೆ ಸಾಗುತ್ತಿದ್ದ ಹೊಸ ಒಡಂಬಡಿಕೆಯ ಸೌಲನ ಜೀವನದಲ್ಲಿ ಒಂದು ಕುಸಿತ! ತನ್ನಿಂದ ಮುಂದುವರಿಯಲು ಸಾಧ್ಯವಾಗಲಿಲ್ಲ, ಕುದುರೆಯಿಂದ ಬೀಳುತ್ತಾರೆ. ಹಗಲಿನಲ್ಲಿ ಬೆಳಕನ್ನು ಮತ್ತು ಶಬ್ದವನ್ನೂ ಕೇಳಿ ಭಯದಿಂದ ನಡುಗುತ್ತಾರೆ. ಆದರೆ ಅವರು ಅದರೊಂದಿಗೆ ಎಲ್ಲವೂ ಮುಗಿಯಿತು ಎಂದು ಕ್ಷಮೆಯಾಚಿಸಿ ಮುಗಿಸಿಬಿಡದೇ what next ಎಂದು ಯೋಚಿಸಿ ನಾನೇನು ಮಾಡಬೇಕೆಂದು ಬಯಸುತ್ತೀರಿ? ಎಂದು ಕೇಳುತ್ತಾರೆ. ಇದನ್ನೇ ನಿರೀಕ್ಷಿಸುತ್ತಿದ್ದ ಕರ್ತನು ಆತನಿಗೆ ಸ್ಪಷ್ಟವಾದ ಯೋಜನೆಯನ್ನು ನೀಡುತ್ತಾರೆ.

 

ಸೌಲನು ಪೌಲನಾಗಿ ಮಾರ್ಪಟ್ಟು ತನ್ನ ಮಾರ್ಗವನ್ನು ಬದಲಾಯಿಸುತ್ತಾರೆ. ದೇವರು ಜೊತೆ ಇದ್ದು ನಡೆಸುತ್ತಾರೆ. "ನನ್ನನ್ನು ಅನುಸರಿಸಿರಿ" ಎಂದು ಪೌಲನು ಧೈರ್ಯವಾಗಿ ಹೇಳುವಂತೆಯೂ ಇನ್ನೂ ಅನೇಕರು ಅವರನ್ನು ಅನುಸರಿಸಿ ಮೂಲಮಾದರಿಯಾದ ಜೀವನವನ್ನು ನಡೆಸಲು ದೇವರು ಸಹಾಯ ಮಾಡಿದರು. ಇನ್ನೂ ನೀನು ತಪ್ಪು ಹಾದಿಯಲ್ಲಿ ಹೋಗುತ್ತಿದ್ದೀಯಾ? ಅಥವಾ ಪಾಪದ ಕೆಸರಿನಲ್ಲಿ ಬಿದ್ದು ಹೋಗಿದ್ದೀಯಾ? ನನಗೆ ಇನ್ನು ಜೀವನವೇ ಇಲ್ಲ ನರಕದ ಜೀವನವೇ ಎಂದು ಹೇಳುತ್ತೀಯಾ? ಇಲ್ಲ . . . ದೇವರು ಒಂದು ಯೋಜನೆಯೊಂದಿಗೆ ನಿನಗಾಗಿ ಕಾದಿದ್ದಾರೆ. ನೀನು ಪಾಪದಲ್ಲಿ ಬಿದ್ದದ್ದು ನಿಜವೇ. ಇದನ್ನು ಓದಿದ ನಂತರವೂ, ಅದೇ ಹಾದಿಯಲ್ಲಿ ಹೋಗದೇ ನಿನ್ನ ಮಾರ್ಗವನ್ನು ಬದಲಾಯಿಸು. what next ಎಂದು ಯೋಚಿಸಿ ನಿಮ್ಮ ಚಿತ್ತವನ್ನು ಮಾಡಲು ಸಮರ್ಪಿರ್ಪಿಸುತ್ತೇನೆ ಎಂದು ಅರ್ಪಿಸಿ ಅವರ ಕೈಯನ್ನು ಹಿಡಿದುಕೋ. ಬಿದ್ದ ನೀನು ಎದ್ದೇಳು. ಸಂಸೋನನು ಮಾರ್ಗ ತಪ್ಪಿ ಅಪಹಾಸ್ಯಕ್ಕೆ ಗುರಿಯಾದನು. ಆದರೆ ಅವನು ಹಾಗೆಯೇ ಸಾಯಲು ಬಯಸಲಿಲ್ಲ what next ಎಂದು ಯೋಚಿಸಿ ದೇವರ ಬಳಿ ಅವಕಾಶ ಕೇಳಿದನು. ಅವನು ಸಾಯುವಾಗ, ಅನೇಕರು ಸತ್ತರು. ದಾವೀದನು ಸಹ ಪಾಪದಲ್ಲಿ ಬಿದ್ದರು. ಆದರೆ ಧೂಳನ್ನು ಒದರಿಬಿಟ್ಟು ಎದ್ದು ಓಡಿ ಜಯಕರವಾಗಿ ಮುಗಿಸಿದರು.

 

ಯೌವನಸ್ಥನೇ! ನೀನೂ ಸಹ ಬಿದ್ದುಬಿಟ್ಟರೆ ಚಿಂತಿಸಬೇಡ. ಪ್ರತಿಯೊಬ್ಬರ ಜೀವನದಲ್ಲೂ ಕುಸಿತ ಎಂಬುದು ಇದ್ದೇ ಇರುತ್ತದೆ. ಎದ್ದೇಳು! ಎದ್ದೇಳಲು ಬೇಕಾದ ಶಕ್ತಿ ನಿನ್ನಲ್ಲಿದೆ. ಎದ್ದೇಳಲು ಆಸೆ ಪಡು, ಪ್ರಯತ್ನಿಸು. ಬಲವು ತಾನಾಗಿ ಬರುತ್ತದೆ. what next ಎಂದು ಇನ್ನು ಮುಂದೆ ಮತ್ತೊಬ್ಬರ ಬಳಿ ಕೇಳಬೇಡ; ದಣಿದ ನಿನ್ನ ಆತ್ಮವನ್ನು ಕೇಳು. ದೇವರ ಚಿತ್ತಕ್ಕೆ ಒಪ್ಪಿಸು, ಅವರ ಕೈ ಹಿಡಿದುಕೋ. ದೇವರು ನಿನ್ನನ್ನೂ ದೊಡ್ಡ ಮಟ್ಟದಲ್ಲಿ ಅನೇಕ ಜನರಿಗೆ ಉಪಯುಕ್ತವಾಗಿ ಮಾರ್ಪಡಿಸುತ್ತಾರೆ. ಆಮೆನ್.

- K. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al