By Village Missionary Movement
Monday, 30-Oct-2023ಧೈನಂದಿನ ಧ್ಯಾನ(Kannada) – 30.10.2023
BE STILL
"ಶಾಂತ ವಾಗಿರ್ರಿ, ನಾನೇ ದೇವರಾಗಿದ್ದೇನೆಂದು ತಿಳುಕೊಳ್ಳಿರಿ;…" - ಕೀರ್ತನೆ 46:10
ವಿಮಲನ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕೆಳಗೆ ಬಿದ್ದು ಕಾಲಿಗೆ ಪೆಟ್ಟು ಬಿದ್ದು ನಿಲ್ಲಲು ಸಾಧ್ಯವಾಗದೆ ಇಬ್ಬರ ಸಹಾಯದಿಂದ ಖ್ಯಾತ ಮೂಳೆ ವೈದ್ಯರ ಬಳಿ ಹೋದನು. ಅವನು ನೋವಿನಿಂದ ಹೋಗುತ್ತಿದ್ದಂತೆ, ವೈದ್ಯರು ತಕ್ಷಣ ಬಂದು ನೋಡುತ್ತಾರೆ ಎಂದು ಅವನು ಭಾವಿಸಿದನು. ಆದರೆ ಅಲ್ಲಿ ನರ್ಸ್ ಪ್ರಥಮ ಚಿಕಿತ್ಸೆ ಕೊಡುವಾಗ ಹೆಸರು, ವಯಸ್ಸು, ಫೋನ್ ನಂಬರ್ ಕೇಳಿ ಕೈಗೆ ಟೋಕನ್ ಕೊಟ್ಟಳು. ಟೋಕನ್ ನೋಡಿದ ವಿಮಲನಿಗೆ ಗಾಬರಿಯಾಯಿತು. ಏಕೆಂದರೆ ಟೋಕನ್ ಸಂಖ್ಯೆ 33. 2 ಗಂಟೆಗಳ ನಂತರ ಕೇವಲ 20 ಸಂಖ್ಯೆ ಬಂದಿತು. ಕಾಯಲಾರದೆ ಸಂಕಟ ಪಡುತ್ತಿದ್ದೇನೆ, ಡಾಕ್ಟರನ್ನು ನೋಡದಂತೆ ನನ್ನನ್ನು ಹೀಗೆ ಕೂರಿಸಿದ್ದೀರ ಎಂದು ವಿಮಲನ್ ಅಳಲು ತೋಡಿಕೊಂಡರು. ನೀನು ತಾಳ್ಮೆಯಿಂದಿದ್ದರೆ ವೈದ್ಯರಿಂದ ಸೂಕ್ತವಾದ ಉತ್ತಮವಾದ ಚಿಕಿತ್ಸೆ ಪಡೆಯಬಹುದು, ತಿಳಿಯಬಹುದು, ನೋವು ಮರೆತುಬಿಡು ಎಂದು ಹೇಳಿ "ತಾಳ್ಮೆಯಿಂದಿರು, ಕಾದಿರು, ಗುಣವಾಗುತ್ತದೆ" ಎಂಬ ಮಾತು ಬರೆದಿದ್ದ ಬೋರ್ಡ್ ಅನ್ನು ಜೊತೆಗಿದ್ದವರು ತೋರಿಸಿದರು.
ಇಂದಿನ ಬಿಡುವಿಲ್ಲದ ಜಗತ್ತಿನಲ್ಲಿ, ಕಾಯುವುದು ಮತ್ತು ಮೌನವಾಗಿರುವುದು ಎಂಬುದು ಯಾರ ಬಳಿಯೂ ಕಾಣುತ್ತಿಲ್ಲ. ಸಾಂಸಾರಿಕ ಜೀವನದಲ್ಲಿ ವೈದ್ಯರಿಗಾಗಿ, ಬಸ್ಸಿಗಾಗಿ, ರೈಲಿಗಾಗಿ ಕಾಯುತ್ತಾರೆ. ಆದರೆ ಮೌನವಾಗಿ ಅಲ್ಲ ಗೊಣಗುಟ್ಟುತ್ತಾ! ಆದರೆ ಆಧ್ಯಾತ್ಮಿಕ ಜೀವನದಲ್ಲಿ ಕಾಯುವಿಕೆ ಎಂಬುದು ಇಲ್ಲವೇ ಇಲ್ಲ. ಇಸ್ರಾಯೇಲ್ಯರು ಐಗುಪ್ತದಿಂದ ಬಿಡುಗಡೆ ಹೊಂದಿ ಕಾನಾನ್‌ಗೆ ಬರುವಾಗ, ಒಂದು ಕಡೆ ಕೆಂಪು ಸಮುದ್ರ ಮತ್ತು ಇನ್ನೊಂದು ಬದಿಯಲ್ಲಿ ಫರೋಹನ ಸೈನ್ಯವಿದ್ದರೂ, ಅವರು ಕರ್ತನ ಬಳಿಗೆ ಹೋದಾಗ, ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ ಎಂದರು. STAND STILL ಎಂದು ಇಂಗ್ಲೀಷ್ ಸತ್ಯವೇದದಲ್ಲಿದೆ, "ಇನ್ನೂ ನಿಂತುಕೊಂಡು ಈಗ ನೀವು ಏನು ಮಾಡಬೇಕೆಂದು ತಿಳಿಯದಿರುವ ಹಾಗೆ ಸ್ವಂತ ಇಚ್ಛೆಯಿಂದ ಏನನ್ನೂ ಮಾಡದೇ ಸುಮ್ಮನಿರಿ" ಎಂದು. ಮೋಶೆ ಕೋಲನ್ನು ಚಾಚಿದಾಗ ಮಾರ್ಗವು ತೆರೆಯಿತು. ಹಾದುಹೋದರು. ಅಷ್ಟೇ ಅಲ್ಲ, ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವದಿಲ್ಲ ಎಂಬ ವಾಗ್ದಾನವನ್ನೂ ಅವರ ಕಣ್ಣು ಕಾಣುವಂತೆ ನೆರವೇರಿಸಿದರು.
ಪ್ರಿಯರೇ! ಕಾದಿರುವುದು ಎಂಬುದನ್ನು ನಾವು ಇಷ್ಟಪಡದಿರಬಹುದು. ಆದರೆ ಇಲ್ಲಿಯವರೆಗೂ ಕಾದಿದ್ದೆ ಸಿಗಲಿಲ್ಲ ಎಂದರೂ ಯಾವುದಾದರೂ ಸ್ವಂತ ಪ್ರಯತ್ನ ಮಾಡುತ್ತಾ ಇರಬಹುದು ಅಥವಾ ಪ್ರಲಾಪಿಸುತ್ತಾ, ಗೊಣಗುಟ್ಟುತ್ತಿರಬಹುದು. ಇಂದು ಎಲ್ಲವನ್ನೂ ನಿಲ್ಲಿಸಿ ತಡ ಮಾಡಿದರೂ ನನ್ನ ಯೋಜನೆ ನನ್ನಲ್ಲಿ ನೆರವೇರುತ್ತದೆ ಎಂಬ ನಂಬಿಕೆಯಿಂದ ಕಾಯುತ್ತಿರಿ. ದೇವರು ನಿಮ್ಮ ಮೇಲಿಟ್ಟಿರುವ ಯೋಜನೆಯನ್ನು ನಿಮ್ಮ ಮೂಲಕವೇ ಪೂರೈಸುತ್ತಾರೆ.
- Mrs. ಅನ್ಬುಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ಕಣ್ಮಣಿ ಮಕ್ಕಳು ಯೇಸುವಿಗಾಗಿ ಎಂಬ ಯೋಜನೆಯಲ್ಲಿ ಅನೇಕರು ತಮ್ಮನ್ನು ಸೇರಿಸಿಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482