Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.10.2023
Share:

By Village Missionary Movement

Thursday, 26-Oct-2023

ಧೈನಂದಿನ ಧ್ಯಾನ(Kannada) – 27.10.2023

 

SMELL 

 

"…ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ವ್ಯಾಪನಗೊಳಿಸುತ್ತಾ ಬರುವ ದೇವರಿಗೆ ಸ್ತೋತ್ರ" - 2 ಕೊರಿಂಥ 2:14

 

ಭಾರತದಲ್ಲಿ ಮರದಲ್ಲಿ ಬೆಳೆಯುವ ಪ್ರಮುಖ ಸುವಾಸನೆ ಭರಿತ ಪದಾರ್ಥಗಳಲ್ಲಿ ಒಂದು ದಾಲ್ಚಿನ್ನಿ ಎಂಬ ಸುವಾಸನೆ ಭರಿತ ಚಕ್ಕೆ. ಈ ದಾಲ್ಚಿನ್ನಿ ಆಹಾರ ಪದಾರ್ಥಗಳನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಚಕ್ಕೆಯಲ್ಲಿರುವ ಫೀನಾಲ್ ಎಂಬ ರಾಸಾಯನಿಕ ಅಂಶವು ಆಹಾರದ ಮೇಲೆ ಬ್ಯಾಕ್ಟೀರಿಯಾ ಬೆಳೆದು ಆಹಾರ ಕೆಡದಂತೆ ತಡೆಯುತ್ತದೆ. ಆದ್ದರಿಂದ ಇದನ್ನು ಮುಖ್ಯವಾಗಿ ಮಾಂಸವನ್ನು ಸಂಸ್ಕರಿಸಲು ಉಪಯೋಗಿಸುತ್ತಾರೆ. ಚಕ್ಕೆಯು ಆಹಾರಕ್ಕೆ ರಮ್ಯವಾದ ಸುವಾಸನೆಯನ್ನೂ ನೀಡುತ್ತದೆ. ದೇವರು ಇಂತಹ ಶ್ರೇಷ್ಠತೆಯನ್ನು ನೈಸರ್ಗಿಕ ಮರಕ್ಕೆ ನೀಡಿದ್ದಾರೆ.

 

ಮತ್ತಾಯ 4 ರಲ್ಲಿ ಯೇಸು ಸೈತಾನನಿಂದ ಶೋಧಿಸಲ್ಪಡುವದಕ್ಕಾಗಿ ಆತ್ಮನು ಆತನನ್ನು ಅಡವಿಗೆ ಒಯ್ದನು. ಆಗ ಸೈತಾನನು ಯೇಸುವನ್ನು ಹಲವು ವಿಧವಾದ ಶೋಧನೆಗಳಿಂದ ಶೋಧಿಸಿದ್ದು ನಮಗೆ ಗೊತ್ತು. ಈ ಕಲ್ಲುಗಳು ರೊಟ್ಟಿಯಾಗುವಂತೆ ಅಪ್ಪಣೆಕೊಡು ಎಂಬ ಅವನ ಪ್ರಶ್ನೆಗೆ ಯೇಸುವಿನ ಉತ್ತರ ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂಬುದೇ! ಖಂಡಿತವಾಗಿಯೂ ಯೇಸು ಸುವಾಸನೆ ಕೊಡುವ ಮಾತುಗಳಿಂದ ಮಾತ್ರವೇ ಸೈತಾನನ್ನು ಜಯಿಸಿದರು. ಯೇಸು ಭೂಮಿಯಲ್ಲಿ ಜೀವಿಸಿದ ದಿನಗಳಲ್ಲಿ ಆತನ ಮಾತುಗಳಲ್ಲಿ, ಕ್ರಿಯೆಗಳಲ್ಲಿ, ಅದ್ಬುತಗಳನ್ನು ಮಾಡುವ ಸ್ಥಳಗಳಲ್ಲೂ ಅವರ ಸುವಾಸನೆಯು ಪ್ರಕಟವಾಯಿತು. ಕಾರಣ ಅವರು ಪವಿತ್ರಾತ್ಮನ ಅಭಿಷೇಕದಿಂದ ತುಂಬಿದ್ದದ್ದೇ.

 

ಪ್ರಿಯರೇ, ಹೇಗೆ ಒಂದು ದಾಲ್ಚಿನ್ನಿ ಚಕ್ಕೆಯು ಆಹಾರ ಪದಾರ್ಥಗಳನ್ನು ಸುವಾಸನೆ ಬೀರುವಂತೆ ಮಾಡುತ್ತದೋ, ಹಾಗೆಯೇ ದೇವರ ವಾಕ್ಯಗಳು ನಮ್ಮಲ್ಲಿರುವಾಗ, ಅದು ಜೀವ ವಾಸನೆಯಾಗಿ ಹೊರಚಿಮ್ಮುತ್ತದೆ. ಆ ವಾಕ್ಯಗಳೇ ಬ್ಯಾಕ್ಟೀರಿಯಾದಂತಹ ದುಷ್ಟ ದುರಾತ್ಮಗಳನ್ನು ನಾಶಮಾಡಲು ಶಕ್ತಿಯುತವಾಗಿ ಮಾರ್ಪಡುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರನ್ನು ಯೇಸು ಸುವಾಸನೆ ಹರಡುವವರಾಗಿ ಈ ಭೂಮಿಯ ಮೇಲೆ ಇಟ್ಟಿದ್ದಾರೆ. ನಮಗೆ ನೀಡಿರುವ ಸಮಯ ಮುಗಿಯುವುದರೊಳಗೆ ಎಲ್ಲೆಲ್ಲಿ ಸುವಾಸನೆಯನ್ನು ಹರಡಲು ಸಾಧ್ಯವೋ, ಅಲ್ಲೆಲ್ಲಾ ಸುವಾಸನೆಯನ್ನು ಹರಡೋಣ. ಸಾಮಾನ್ಯವಾದ ಒಂದು ಮರಕ್ಕೇ ಇಂತಹ ಸುವಾಸನೆಯನ್ನು ಹರಡುವ ಸಾಮರ್ಥ್ಯವನ್ನು ನೀಡಿದ್ದಾರೆ ಎಂದರೆ, ತನ್ನ ಸ್ವಾರೂಪ್ಯದಲ್ಲಿ ಸೃಷ್ಟಿಸಲ್ಪಟ್ಟ ನಮಗೆ ಆ ಶಕ್ತಿಯನ್ನು ಕೊಟ್ಟಿರುವುದಿಲ್ಲವೇ?

- Mrs. ಶಕ್ತಿ ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ಕಾರ್ಯ ಸ್ಥಳಗಳಲ್ಲಿ ಶಾಲೆ ಮತ್ತು ಕಾಲೇಜು ಅಧ್ಯಯನಗಳಲ್ಲಿ ನಮ್ಮ ಸೇವೆಯಿಂದ ಬೆಂಬಲ ನೀಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş