By Village Missionary Movement
Thursday, 26-Oct-2023ಧೈನಂದಿನ ಧ್ಯಾನ(Kannada) – 26.10.2023
ಬಳಲಿಹೋಗಬೇಡ
"ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ" - ಜ್ಞಾನೋಕ್ತಿ. 24:10
ರಾಮುವಿನ ಮರದ ಅಂಗಡಿಯೊಳಗೆ ಒಂದು ಇಲಿ ನುಗ್ಗಿ ಅಲ್ಲಿನ ಮರಗಳನ್ನು ಕಡಿಯುತ್ತಿತ್ತು. ನಂತರ ಅದು ಸಾಕಷ್ಟು ತೊಂದರೆ ನೀಡಲು ಪ್ರಾರಂಭಿಸಿತು. ರಾಮು ಇಲಿಗಳನ್ನು ಓಡಿಸಲು ಎಲ್ಲೆಂದರಲ್ಲಿ ಇಲಿ ಬಲೆಗಳನ್ನು ಇಟ್ಟರು. ಇಲಿ ಜೀವಂತವಾಗಿ ಸಿಕ್ಕಿಬಿದ್ದಿರುವುದನ್ನು ಕಂಡು ರಾಮು ಸಂತೋಷಪಟ್ಟರು. ನಂತರ ಇಲಿಯನ್ನು ಕೊಂದರು. ಆದರೆ ಅವರಿಗೆ ಬಂದ ಒಂದು ಆಶ್ಚರ್ಯವೆಂದರೆ ತನ್ನ ಅಂಗಡಿಯಲ್ಲಿ ಮರವನ್ನು ಕಡಿಯುವ ಇಲಿ ಈ ಮರದ ಬಲೆಯಿಂದ ಹೊರಬಂದಿರಬಹುದೇ? ಯಾಕೆ ಬರಲಿಲ್ಲ ಎಂದು ಯೋಚಿಸಿದರು.
ನಮ್ಮ ಜೀವನದಲ್ಲಿಯೂ ಒಂದು ಇಕ್ಕಟ್ಟು ಬಂದ ಕೂಡಲೇ ಇಕ್ಕಟ್ಟು ಮಾತ್ರವೇ ಕಣ್ಮುಂದೆ ಇರುತ್ತದೆ, ಯಾರು ಬಿಡಿಸುತ್ತಾರೆ ಎಂದು ಪ್ರಲಾಪಿಸುತ್ತೇವೆ, ತವಕಿಸುತ್ತೇವೆ. ಆದರೆ ತಪ್ಪಿಸುವವರನ್ನು ಬಿಟ್ಟು-ಬಿಟ್ಟು ಮನುಷ್ಯರನ್ನೇ ಹುಡುಕುತ್ತಾ ತವಕಿಸುವುದರಿಂದ ನಿರಾಶೆಗೊಳ್ಳುತ್ತೇವೆ ಮತ್ತು ಭರವಸೆ ಕಳೆದುಕೊಳ್ಳುತ್ತೇವೆ. ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು ಎಂದು ಯೆಶಾಯ 46:4 ರಲ್ಲಿ ಹೇಳುತ್ತಾರೆ. ಆತನು ಸರ್ವಶಕ್ತನು, ವಾಗ್ದಾನ ತಪ್ಪದವರು! ಇನ್ನೂ ನಾನು ನಿನ್ನನ್ನು ಉದ್ಧರಿಸುವೆನು; ನೀನು ಹೆದರುವ ಮನುಷ್ಯರ ಕೈಗೆ ಸಿಕ್ಕುವದಿಲ್ಲ. ಎಂದು ಯೆರೆಮಿಯ 39:17 ರಲ್ಲಿ ಹೇಳುತ್ತಾರೆ. ನಿಮ್ಮ ಎಲ್ಲಾ ಇಕ್ಕಟ್ಟುಗಳಿಗೆ, ಚಿಂತೆಗಳಿಗೆ ಮತ್ತು ಕಷ್ಟಗಳಿಗೆ ಅವರ ಬಳಿ ಸರಳ ಪರಿಹಾರವಿದೆ. ಅದನ್ನು ಅರಿಯಲು ಇಕ್ಕಟ್ಟಿನಲ್ಲಿಯೂ, ಚಿಂತೆಗಳಲ್ಲಿಯೂ ಕರ್ತನನ್ನು ನಂಬಿ ಅವರನ್ನು ಕೇಳಿದರೆ ಸಾಕು. ಅವರು ನಿಮಗೆ ಬೋಧಿಸಿ ನಡೆಸುತ್ತಾರೆ. ಮೋಶೆ ಮತ್ತು ಯೆಹೋಶುವ ಸಾವಿರಾರು ಜನರನ್ನು ಹೀಗೆಯೇ ನಡೆಸಿದರು. ಒಮ್ಮೆ ಅವರ ಮುಂದೆ ಕೆಂಪು ಸಮುದ್ರ, ಹಿಂದೆ ಫರೋಹನ ಸೈನ್ಯಗಳು! ಬಹಳ ಇಕ್ಕಟ್ಟು! ಮೋಶೆ ಕರ್ತನ ಕಡೆಗೆ ನೋಡಿದರು. ದೇವರು ಸರಳವಾದ ಮಾರ್ಗವನ್ನು ಹೇಳಿದರು. ಕೋಲನ್ನು ಚಾಚು ಎಂದು ಹೇಳಿದರು. ಚಾಚಿದ ಕೂಡಲೇ ಕೆಂಪು ಸಮುದ್ರವು ಎರಡು ಭಾಗವಾಯಿತು. ಅಷ್ಟೇ! ಐಗುಪ್ತದವರ ಪ್ರತಿಮೆಯನ್ನು ಮಾಡುವಂತಹ ಕಷ್ಟದ ವಿಷಯಗಳನ್ನು ದೇವರು ನೋಡಿಕೊಂಡರು.
ಇದನ್ನು ಓದುತ್ತಿರುವ ಪ್ರಿಯರೇ! ನಿಮ್ಮ ಜೀವನದಲ್ಲೂ ಇಕ್ಕಟ್ಟು, ಕಷ್ಟ ಮತ್ತು ಮುಂದಿನ ಹೆಜ್ಜೆ ಎಲ್ಲಿ ಇಡಬೇಕೆಂದು ತಿಳಿಯದೇ ಇದ್ದೀರಾ? ಸುಲಭವಾದ ಮಾರ್ಗದಲ್ಲಿ ಹಾದು ಹೋಗಲು ಸಹಾಯ ಮಾಡುವ ದೇವರನ್ನು ಹಿಡಿದುಕೊಳ್ಳಿ. ಲೋಕದಲ್ಲಿ ಉಪದ್ರವವಿದೆ. ಲೋಕವನ್ನು ಜಯಿಸಿದ್ದೇನೆ ಎಂದು ಹೇಳಿದ ದೇವರನ್ನು ಹಿಡಿದುಕೊಳ್ಳಿ. ನೀವೂ ಗೆಲ್ಲಬಹುದು.
- Mrs. ಅನ್ಬುಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ನಮ್ಮಿಂದ ಸಂಪೂರ್ಣ ಬೈಬಲನ್ನು ಪಡೆದ ಪ್ರತಿಯೊಬ್ಬ ವ್ಯಕ್ತಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482