Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.10.2023
Share:

By Village Missionary Movement

Wednesday, 25-Oct-2023

ಧೈನಂದಿನ ಧ್ಯಾನ(Kannada) – 25.10.2023

 

ಅಂಟು ಮಿಠಾಯಿ ಅಲ್ಲ

 

"…ನಾನು ಸರ್ವಶಕ್ತನಾದ ದೇವರು; ನನಗೆ ನಡಕೊಂಡು ದೋಷವಿಲ್ಲದವನಾಗಿರು" - ಆದಿಕಾಂಡ 17:1

 

ನಾನು ಚಿಕ್ಕವನಿದ್ದಾಗ ನಮ್ಮ ಊರಲ್ಲಿ ಹಳೆಯ ಸೀಸ, ಕಬ್ಬಿಣ ಮತ್ತು ಹಿತ್ತಾಳೆಗೆ ಖರ್ಜೂರ, ಚೇಪೆಹಣ್ಣು, ಅಂಟು ಮಿಠಾಯಿ ಎಂದು ಸಾರುತ್ತಾ ಸೈಕಲ್‌ನಲ್ಲಿ ವ್ಯಾಪಾರಿಗಳು ಬರುತ್ತಿದ್ದರು. ನಾನು ಕೂಡ ಆಸೆಯಿಂದ ಆ ಅಂಟು ಮಿಠಾಯಿ ತೆಗೆದುಕೊಳ್ಳುತ್ತಿದ್ದೆ. ರುಚಿ ನೋಡುವ ಮೊದಲು, ನಾನು ಅದನ್ನು ಮೇಲೆ ಕೆಳಗೆ ಎಳೆದು ವೃತ್ತ, ಚೌಕ, ತ್ರಿಕೋನ ಹೀಗೆ ನನಗೆ ಇಷ್ಟ ಬಂದಂತೆ ಎಳೆದು ಆಟವಾಡುತ್ತಿದ್ದೆ. ಅದು ನಾನು ಎಳೆದ ಹಾಗೆಲ್ಲಾ ಬರೋದು ನನಗೆ ಅತಿ ಸಂತೋಷವಾಗುತ್ತಿತ್ತು.

 

ಸತ್ಯವೇದದಲ್ಲಿ, ಕತ್ತೆಯನ್ನು ಹುಡುಕಲು ಹೋದ ಸೌಲನನ್ನು ಕರ್ತನು ರಾಜನನ್ನಾಗಿ ಮಾಡಿದರು. ಆದರೆ ಸೌಲನು ದೇವರನ್ನು ಸರ್ವಶಕ್ತನಾಗಿ ನೋಡದೆ ತನಗೆ ಇಷ್ಟ ಬಂದ ಹಾಗೆ ಎಳೆದುಕೊಳ್ಳೋಣ ಅಂದುಕೊಂಡು ಅಂಟು ಮಿಠಾಯಿಯಂತೆ ಭಾವಿಸಿದರು. ಕರ್ತನ ವಾಕ್ಯವು ಸೌಲನಿಗೆ ನೇರವಾಗಿ ಬಂತು. "ಈಗ ನೀನು ಹೋಗಿ ಅಮಾಲೇಕ್ಯರನ್ನು ಹೊಡೆದುರುಳಿಸಿ ಅವರಿಗಿರುವದನ್ನೆಲ್ಲಾ ಸಂಪೂರ್ಣವಾಗಿ ಹಾಳುಮಾಡಿ ಕನಿಕರವಿಲ್ಲದೆ ಗಂಡಸರನ್ನು, ಹೆಂಗಸರನ್ನು, ಮಕ್ಕಳನ್ನು, ಶಿಶುಗಳನ್ನು, ಎತ್ತು, ಕುರಿ, ಕತ್ತೆ, ಒಂಟೆ, ಇವುಗಳನ್ನು ಕೊಂದುಹಾಕು" ಎಂದು. ಆದರೆ ಸೌಲನು ಅಮಾಲೇಕ್ಯರ ರಾಜನಾದ ಅಗಾಗನನ್ನು ಸಜೀವಿಯಾಗಿ ಹಿಡಿದು ಮೇಲ್ತರದ ಕುರಿ ದನಗಳನ್ನೂ ಕುರಿಮರಿಗಳನ್ನೂ ಕೊಬ್ಬಿದ ಪಶುಗಳನ್ನೂ ಶ್ರೇಷ್ಠವಾದ ಎಲ್ಲಾ ಪದಾರ್ಥಗಳನ್ನೂ ನಾಶಮಾಡ ಮನಸ್ಸಿಲ್ಲದೆ ಉಳಿಸಿದನು. ಪ್ರಯೋಜನವಿಲ್ಲದಂಥ ಹೀನವಾದವುಗಳನ್ನೆಲ್ಲಾ ನಾಶಮಾಡಿಬಿಟ್ಟನು. ಸೌಲನ ಹೃದಯದಲ್ಲಿ ಇದ್ದದ್ದೆಲ್ಲಾ ತಾನು ಮಾಡುತ್ತಿರುವುದು ಧರ್ಮವೇ ಎಂಬುದೇ. ಇದನ್ನೆಲ್ಲಾ ಕರ್ತನು ಕಂಡುಕೊಳ್ಳುವುದಿಲ್ಲ ಎಂದು ದೇವರನ್ನು ತನ್ನ ಕ್ರಿಯೆಗೆ ತಕ್ಕ ಹಾಗೆ ಭಾವಿಸಿದನು.

 

ಇಂದು ಅನೇಕ ಜನರು ಇದರಂತೆಯೇ ಮಾಡಿಬಿಟ್ಟು ಕರ್ತನು ಸುಮ್ಮನೆ ಬಿಟ್ಟು ಬಿಡುತ್ತಾರೆ. ಇದರಲ್ಲಿ ಏನು ತಪ್ಪಿದೆ ಎಂದು ತಮ್ಮ ಕಾರ್ಯವನ್ನು ತಾವೇ ಸಮರ್ಥಿಸಿಕೊಳ್ಳುತ್ತಾರೆ. ಬದಲಿಗೆ ಯೆಶಾಯ 64:6 "ನಮ್ಮ ಧರ್ಮಕಾರ್ಯಗಳೆಲ್ಲಾ ಹೊಲೆಯ ಬಟ್ಟೆಯಂತಿವೆ" ಎಂಬ ಗ್ರಹಿಕೆ ಇರಬೇಕು. ಪ್ರಿಯರೇ, ಕರ್ತನ ಪರಿಶುದ್ಧ ಗ್ರಂಥವು ಯಾವುದನ್ನೆಲ್ಲಾ ಧರ್ಮ ಎಂದು ಹೇಳುತ್ತದೋ ಅದೇ ಧರ್ಮ. ಯಾವುದನ್ನೆಲ್ಲಾ ಅಧರ್ಮ ಎಂದು ಹೇಳುತ್ತದೋ ಅದೆಲ್ಲಾ ಅಧರ್ಮವೇ. ಅದಕ್ಕಿಂತ ಹೆಚ್ಚಾಗಿ ಬೇರೊಂದಿಲ್ಲ.

 

ಆದ್ದರಿಂದ ಸರ್ವಶಕ್ತನಾದ ದೇವರನ್ನು ಅಂಟು ಮಿಠಾಯಿಯಂತೆ ನಮಗೆ ಇಷ್ಟ ಬಂದಂತೆ ಎಳೆದುಕೊಳ್ಳೋಣ ಎಂಬುದನ್ನು ಮರೆತು ಕೂಡ ಯೋಚಿಸಬೇಡಿ. ನೀವು ಮತ್ತು ನಾನೇ ದೇವರ ಕೈಯಲ್ಲಿ ಅಂಟು ಮಿಠಾಯಿಯಂತೆ ಇರಬೇಕು. ಅವರ ವಾಕ್ಯದ ಮೂಲಕ ನಮ್ಮನ್ನು ಹೇಗೆ ಎಳೆದರೂ ಅದಕ್ಕೆ ನಾವು ಹೊಂದಿಕೊಳ್ಳುವಂತೆ ಇರಬೇಕು. ಅದೇ ನಮಗೆ ಆಶೀರ್ವಾದ.

- Bro. ಸಿಮಿಯೋನ್

 

ಪ್ರಾರ್ಥನಾ ಅಂಶ:

ಯುವಕರ ಸಂಜೆ ಪ್ರಾರ್ಥನಾ ಗುಂಪುಗಳ ಮೂಲಕ ಭೇಟಿಯಾಗುವ ಪ್ರತಿಯೊಬ್ಬ ಯುವಕರು ದೇವರ ಕೈಯಲ್ಲಿ ಸಾಧನಗಳಾಗಿ ಉಪಯೋಗವಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş