Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.10.2023
Share:

By Village Missionary Movement

Monday, 23-Oct-2023

ಧೈನಂದಿನ ಧ್ಯಾನ(Kannada) – 24.10.2023

 

ವೈರಾಗ್ಯ 

 

"…ಒಳ್ಳೇ ವಿಷಯದಲ್ಲಿ ನೀವು ಮೆಚ್ಚಿಸಿಕೊಳ್ಳುವದು ಒಳ್ಳೇದೇ" - ಗಲಾತ್ಯ 4:18

 

ದಾನಿಯೇಲ್ ಎಂದ ಕೂಡಲೇ ಅಪವಿತ್ರವಾದುದನ್ನು ತಿನ್ನದೇ ವೈರಾಗ್ಯವನ್ನು ತೋರಿಸಿದ್ದನ್ನೇ ನಾವು ನೆನಪಿಸಿಕೊಳ್ಳುತ್ತೇವೆ. ಇದಲ್ಲದೆ, ಅವರು ದೇವರ ಶಕ್ತಿಯ ಬಗ್ಗೆ ಮತ್ತು ದೇವರ ಬಗ್ಗೆ ವೈರಾಗ್ಯದಿಂದ ಇದ್ದರು. ರಾಜನು ಕನಸು ಕಂಡಾಗ ತುಂಬಾ ಮನೋವೇದನೆಯಲ್ಲಿದ್ದರು. ಕನಸನ್ನು ಮತ್ತು ಅದರ ಅರ್ಥವನ್ನು ಹೇಳಲು ಪ್ರತಿಯೊಬ್ಬರನ್ನೂ ಆಹ್ವಾನಿಸಿದರು. ಇಲ್ಲಿಯೇ ದಾನಿಯೇಲನು ಗುಪ್ತ ವಿಷಯಗಳನ್ನು ಬಹಿರಂಗಪಡಿಸುವವನಾಗಿ ವೈರಾಗ್ಯದಿಂದ ರಾಜನ ಬಳಿಗೆ ಹೋಗಿ ಕಾಲಾವಕಾಶವನ್ನು ಕೇಳುತ್ತಾರೆ. ನಂತರ ದಾನಿಯೇಲನು ಪ್ರಾರ್ಥಿಸುತ್ತಾರೆ, ತನ್ನ ಸ್ನೇಹಿತರನ್ನು ಸಹ ಪ್ರಾರ್ಥಿಸಲು ಹೇಳುತ್ತಾರೆ. ದೇವರಿಗೆ ಕೃತಜ್ಞತೆ ಸಲ್ಲಿಸಿ ತನ್ನ ನಂಬಿಕೆಯನ್ನು ಅರಿಕೆಮಾಡಿ ವೈರಾಗ್ಯದಿಂದ ಪ್ರಾರ್ಥಿಸುತ್ತಾರೆ. ಅದೇನಂದರೆ ಜ್ಞಾನ ಮತ್ತು ಶಕ್ತಿ ನಿಮಗೆ ಸೇರಿದ್ದು. ನೀವೇ ಜ್ಞಾನಿಗಳಿಗೆ ಜ್ಞಾನವನ್ನು ಕೊಡುವಾತನು ಎಂದು ಪ್ರಾರ್ಥಿಸುತ್ತಾರೆ.

 

ದೇವರು ಸಹ ದಾನಿಯೇಲನ ವೈರಾಗ್ಯವನ್ನು ನೋಡಿ ಅವರಿಗೆ ಕನಸು ಮತ್ತು ಅದರ ಅರ್ಥವನ್ನು ಬಹಿರಂಗಪಡಿಸಿದರು, ರಾಜನ ಮುಂದೆ ಹೋಗಿ ಕರ್ತನೇ ಇದನ್ನು ನನಗೆ ತಿಳಿಸಿದರು ಎಂದು ಸಹ ಹೇಳಿದರು. ಏಕೆಂದರೆ "ಇದು ನನಗೆ ಅಸಾಧ್ಯ, ರಹಸ್ಯವನ್ನು ಬಹಿರಂಗಪಡಿಸುವವರು ದೇವರೇ" ಎಂಬ ಆಲೋಚನೆಯೇ ತನ್ನನ್ನು ಹೆಚ್ಚಿಸಿಕೊಳ್ಳದೇ ದೇವರನ್ನು ಉನ್ನತೀಕರಿಸಲು ಕಾರಣವಾಯಿತು. ಅವರು ಪ್ರತಿದಿನ ದೇವರೊಂದಿಗೆ ಸಂಭೋಗಿಸುತ್ತಿದ್ದರು ಮತ್ತು ದೇವರನ್ನು ಚೆನ್ನಾಗಿ ತಿಳಿದಿದ್ದರು. ಆದುದರಿಂದ ದಾನಿಯೇಲನೊಳಗೆ ದೇವರ ಕುರಿತಾದ ವೈರಾಗ್ಯವು ಉರಿಯುತ್ತಲೇ ಇತ್ತು. ಎಷ್ಟೇ ಅಡೆತಡೆಗಳು ಬಂದರೂ ಇದನ್ನು ಬಿಟ್ಟು ಕೊಡಲಿಲ್ಲ. ಸತ್ಯವೇದ ಧ್ಯಾನ ಮತ್ತು ಪ್ರಾರ್ಥನೆಯೇ ದೇವರೊಂದಿಗೆ ನಮಗಿರುವ ಅನುಬಂಧವನ್ನು ತೋರಿಸುತ್ತದೆ ಎಂದು ಅರಿತಿದ್ದದರಿಂದ ದಾನಿಯೇಲನು ದಿನಕ್ಕೆ ಮೂರು ಬಾರಿ ಪ್ರಾರ್ಥಿಸುತ್ತಿದ್ದರು ಎಂದು ಸತ್ಯವೇದದಲ್ಲಿ ಬರೆಯಲ್ಪಟ್ಟಿದೆ.

 

ಪ್ರಿಯರೇ! ಇಂದು ಅನೇಕ ವಿಷಯಗಳಿಗೆ ವೈರಾಗ್ಯದಿಂದಿರುವ ನಾವು ಕರ್ತನಿಗಾಗಿ ವೈರಾಗ್ಯದಿಂದಿದ್ದೇವಾ? ಇಲ್ಲದಿದ್ದರೆ, ದೇವರನ್ನು ತಿಳಿದುಕೊಳ್ಳಬೇಕಾದ ರೀತಿಯಲ್ಲಿ ತಿಳಿದುಕೊಂಡಿಲ್ಲ ಎಂದರ್ಥ ಮತ್ತು ಅವರೊಂದಿಗಿನ ಸಂಬಂಧದ ಕೊರತೆ. ಇಂದು ಕೊನೆಯ ದಿನಗಳಲ್ಲಿ ನಮ್ಮಲ್ಲಿ ಪ್ರತಿಯೊಬ್ಬರೂ ಕ್ರಿಸ್ತನಿಗಾಗಿ ವೈರಾಗ್ಯವನ್ನು ತೋರಿಸುವವರಾಗಿ ಎದ್ದೇಳಬೇಕೆಂದು ದೇವರು ನಿರೀಕ್ಷಿಸುತ್ತಿದ್ದಾರೆ. ದೇವರೊಂದಿಗಿನ ನಮ್ಮ ಸಂಬಂಧವನ್ನು ಸರಿಪಡಿಸಿ ರಾಜರ ಮುಂದೆ ಮತ್ತು ಅಧಿಕಾರದಲ್ಲಿರುವ ಪ್ರತಿಯೊಬ್ಬರ ಮುಂದೆ ದೇವರಿಗಾಗಿ ವೈರಾಗ್ಯವನ್ನು ತೋರಿಸುವವರಾಗಿ ಎದ್ದೇಳೋಣ. ನಾವೇ ಕ್ರಿಸ್ತನ ಸೈನ್ಯ ನಮ್ಮ ಮೂಲಕವೇ ನಮ್ಮ ದೇಶದಲ್ಲಿ ಉಜ್ಜೀವನ!

- Bro. ಪೊನ್ಮಣಿ ಸಮುವೇಲ್ ರಾಜ

 

ಪ್ರಾರ್ಥನಾ ಅಂಶ:

ಮಾಧ್ಯಮ ಸೇವೆಯ ಮೂಲಕ ಹೆಚ್ಚಿನ ಜನರು ದೇವರ ಪ್ರೀತಿಯನ್ನು ಸವಿಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al