By Village Missionary Movement
Sunday, 22-Oct-2023ಧೈನಂದಿನ ಧ್ಯಾನ(Kannada) – 23.10.2023
ಪ್ರಾರ್ಥಿಸಿರಿ
"ಸಹೋದರರೇ, ಇಸ್ರಾಯೇಲ್ಯರು ರಕ್ಷಣೆಹೊಂದಬೇಕೆಂಬದೇ ನನ್ನ ಮನೋಭಿಲಾಷೆಯೂ ದೇವರಿಗೆ ನಾನು ಮಾಡುವ ವಿಜ್ಞಾಪನೆಯೂ ಆಗಿದೆ" - ರೋಮಾ 10:1
ತನ್ನ ಜನರು ರಕ್ಷಣೆಹೊಂದಬೇಕು ಎಂದು ಭಾರದಿಂದ ವಿಜ್ಞಾಪನೆ ಮಾಡುವ ಅಪೊ. ಪೌಲನ ಮಾತುಗಳನ್ನು ಮೇಲೆ ಓದಿದ್ದೇವೆ. ಸಾಮಾನ್ಯವಾಗಿ ಅನೇಕ ರೀತಿಯ ಪ್ರಾರ್ಥನೆಗಳಿವೆ. ತಮಗಾಗಿ ಮತ್ತು ತಮ್ಮ ಕಾರ್ಯಗಳಿಗಾಗಿ ಪ್ರಾರ್ಥಿಸುವ ಅನೇಕ ಜನರಿದ್ದಾರೆ. ಇಂದು ನಾವು ಓದುವ ಪ್ರಾರ್ಥನೆಯಲ್ಲಿ, ತನ್ನ ಸುತ್ತಲಿರುವ, ತನ್ನನ್ನು ಅವಲಂಬಿಸಿರುವ ಜನರಿಗಾಗಿ ವಿಜ್ಞಾಪಿಸುವ ಒಂದು ಪ್ರಾರ್ಥನೆಯ ಬಗ್ಗೆ ಓದುತ್ತೇವೆ.
ಚಾರ್ಲ್ಸ್ CH ಸ್ಪರ್ಜನ್ ಬರೆದಿರುವ The soul winner ಎಂಬ ಪುಸ್ತಕದಲ್ಲಿ ರಾಹೇಲಳ ಗೋಳಾಟದ ಬಗ್ಗೆ ಉಲ್ಲೇಖಿಸಿದ್ದಾರೆ. ನನಗೆ ಮಗು ಕೊಡು ಇಲ್ಲವೇ ನಾನು ಸಾಯುತ್ತೇನೆ ಎಂದು ಗೋಳಾಡಿದಳು. ಅದರಂತೆ, ನಮ್ಮಲ್ಲಿ ಯಾರೊಬ್ಬರೂ ಸಹ ದೇವರ ರಾಜ್ಯದಲ್ಲಿ ಬಂಜೆಯಾಗಿರಲು ಬಯಸದೇ ಅತ್ತು ಗೋಳಾಡಬೇಕು. ಯಾವುದಾದರೂ ಒಂದು ಆತ್ಮವನ್ನಾದರೂ ರಕ್ಷಣೆಗೆ ತರುವವರೆಗೆ ನೀನು ಅತ್ತು ಗೋಳಾಡಿ ಪ್ರಾರ್ಥಿಸುವುದನ್ನು ನಿಲ್ಲಿಸಲೇಬಾರದು ಎಂದು ಅವರು ಬರೆದಿದ್ದಾರೆ. ಈ ಹಂಬಲವು ಅವರ ಹೃದಯವನ್ನು ತುಂಬಿದ್ದದರಿಂದ ಅನೇಕ ಆತ್ಮಗಳನ್ನು ಕರ್ತನ ಕಡೆಗೆ ಮುನ್ನಡೆಸಿದರು.
ಅನೇಕ ಬಾರಿ ನಮ್ಮ ಪ್ರಾರ್ಥನೆ ಒಂದು ಸಂಪ್ರದಾಯಕವಾಗಿ ಕಾಣುತ್ತಿದೆ ಎಂದು ಹೇಳಬಹುದು. ಒಂದು ಪ್ರಾರ್ಥನಾ ಕೂಟ ಎಂದರೆ ಇಂಥಿಂಥಾ ವಿಷಯಗಳಿಗೆ ಪ್ರಾರ್ಥನೆ ಮಾಡಬೇಕು ಎಂಬ ಒಂದು ನಿಯಮವಿದೆ ಎಂದು ಭಾವಿಸಿ ಪ್ರಾರ್ಥಿಸುತ್ತಿದ್ದೇವೆ. ಒಬ್ಬ ವ್ಯಕ್ತಿಯು ಆತ್ಮದಲ್ಲಿ ಮುರಿಯದ ಹೊರತು, ಅವನನ್ನು ಪ್ರಾರ್ಥನಾ ಜೀವನದಲ್ಲಿ ಎತ್ತಿ ಉಪಯೋಗಿಸಲು ಸಾಧ್ಯವಿಲ್ಲ ಎಂದು ಲಿಯೊನಾರ್ಡ್ ರೋವನ್‌ಹಿಲ್ ಎಂಬ ದೇವರ ಮನುಷ್ಯನು ಬರೆದಿದ್ದಾರೆ. ಪ್ರತ್ಯೇಕ ಕೋಣೆಯಲ್ಲಿ ವೈಯಕ್ತಿಕ ಪ್ರಾರ್ಥನೆಯಲ್ಲಿ ನಾಶವಾಗುವ ಜನರ ಬಗ್ಗೆ ಭಾರಪಡುವ ಜನರನ್ನು ದೇವರು ಹುಡುಕುತ್ತಿದ್ದಾರೆ.
ಇಂದಿನ ಧ್ಯಾನ ಸಂದೇಶದ ಮೂಲಕ ಪವಿತ್ರಾತ್ಮನು ನಮ್ಮೊಂದಿಗೆ ಮಾತನಾಡುತ್ತಿದ್ದಾರೆ. ಎಡಬಿಡದೆ ಪ್ರಾರ್ಥಿಸಿರಿ. ಆಸಕ್ತಿಯಿಂದ ಪ್ರಾರ್ಥಿಸಿರಿ. ಅದೇ ಸಮಯದಲ್ಲಿ ಮುರಿದ ಹೃದಯ ಮತ್ತು ಕಣ್ಣೀರಿನಿಂದ ಜನರಿಗಾಗಿ ಪ್ರಾರ್ಥಿಸಿರಿ ಎಂದು ಹೇಳುತ್ತಿದ್ದಾರೆ. ನಮ್ಮ ಪ್ರಾರ್ಥನಾ ಜೀವನದಲ್ಲಿರುವ ಬಂಜೆತನವು ಬದಲಾಗಲು, ಆಸಕ್ತಿಯಿಂದ ಪ್ರಾರ್ಥಿಸಲು ಕೃಪೆ ತೋರಿಸಿ ಕರ್ತನೇ ಎಂದು ಕೇಳಿರಿ. ಅನೇಕ ಜನರನ್ನು ಕರ್ತನ ಬಳಿಗೆ ಕರೆದೊಯ್ಯುವ ಆಶೀರ್ವಾದಕರವಾದ ಪಾತ್ರೆಯಾಗಿ ದೇವರು ನಿಮ್ಮನ್ನು ಮಾರ್ಪಡಿಸುತ್ತಾರೆ. ಆತನು ನಮ್ಮಲ್ಲಿ ಮಹತ್ಕಾರ್ಯಗಳನ್ನು ಮಾಡುವರು. ಆಮೆನ್.
- Bro. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
ಮಾಧ್ಯಮದಲ್ಲಿ ಕೆಲಸ ಮಾಡಲು ಸಮರ್ಪಣೆಯುಳ್ಳ ಅನುಭವವುಳ್ಳ ವ್ಯಕ್ತಿಗಳು ಸಿಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482