Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.10.2023
Share:

By Village Missionary Movement

Sunday, 22-Oct-2023

ಧೈನಂದಿನ ಧ್ಯಾನ(Kannada) – 22.10.2023

 

ಸುವಾರ್ತೆ ಸಾರಬೇಕು 

 

"…ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ" - ಮಾರ್ಕನು 16:15

 

ರಾಬರ್ಟ್ ಅಂಕಲ್ ಒಬ್ಬ ದೊಡ್ಡ ಉದ್ಯಮಿ. ಬಡವರಿಗೆ ಸಹಾಯ ಮಾಡುವ ಹೃದಯವಂತ. ತನ್ನ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಅಥವಾ ಅವರ ಕುಟುಂಬದವರಿಗೆ ಏನಾದರೂ ತೊಂದರೆಯಾದರೆ ಓಡಿ ಬಂದು ಸಹಾಯ ಮಾಡುವ ವ್ಯಕ್ತಿ.

 

ಒಂದು ದಿನ ನಿದ್ದೆ ಮಾಡುತ್ತಿದ್ದ ರಾಬರ್ಟ್ ಅಂಕಲ್ ಕನಸಿನಲ್ಲಿ ಪರಲೋಕ ಮತ್ತು ನರಕದ ಒಂದು picture ಬಂತು. ಅದರಲ್ಲಿ ಭೂಮಿಯಿಂದ ಮೇಲಕ್ಕೆ ಬರುತ್ತಿದ್ದ ಮನುಷ್ಯರು ಮತ್ತು ಸಾಲಿನಲ್ಲಿ ನಿಂತಿದ್ದ ಜನರ ಗುಂಪು ಇತ್ತು. ಆಗ ಒಬ್ಬ ದೇವದೂತನು ದೊಡ್ಡ ಪುಸ್ತಕವನ್ನು ನೋಡುತ್ತಿದ್ದನು. ಆ ಪುಸ್ತಕದಲ್ಲಿ ಹೆಸರಿಲ್ಲದವರನ್ನು ಎಡಕ್ಕೆ, ಹೆಸರಿದ್ದವರನ್ನು ಬಲಕ್ಕೆ ಕಳುಹಿಸುತ್ತಿದ್ದರು. ಎಡಭಾಗದಲ್ಲಿ ಉರಿಯುತ್ತಿರುವ ಬೆಂಕಿ ಮತ್ತು ಬಲಭಾಗದಲ್ಲಿ ಅಮೃತಶಿಲೆಯ ಹೊಳೆಯುವ ಅರಮನೆ ಇತ್ತು. ಈ ಸಾಲಿನಲ್ಲಿ ರಾಬರ್ಟ್ ಮತ್ತು

ಅವರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಮು ಇಬ್ಬರೂ ನಿಂತಿದ್ದರು. ಅದರಲ್ಲಿ ರಾಬರ್ಟ್‌ನನ್ನು ಬಲಕ್ಕೆ ಮತ್ತು ರಾಮುವನ್ನು ಎಡಕ್ಕೆ ದೂತನು ಕಳುಹಿಸಿದನು. ರಾಮು ಭಯದಿಂದ ನಡುಗುತ್ತಾ, ನಾನು ಆ ಉರಿಯುವ ಬೆಂಕಿಗೆ ಹೋಗಲಾರೆ. ನನ್ನಿಂದ ಅಲ್ಲಿ ಸುಟ್ಟು ಹೋಗಲು ಆಗೋದಿಲ್ಲ. ಹಾಗಾದರೆ ಒಂದು ಮಾಡಿ. ಅಲ್ಲಿ ನಿಂತಿರುವ ನನ್ನ ಬಾಸ್ ರಾಬರ್ಟ್ ಅನ್ನು ನನ್ನೊಂದಿಗೆ ಅಲ್ಲಿಗೆ ಕಳುಹಿಸಿ. ಅವರು ಕ್ರೈಸ್ತರಾಗಿದ್ದರೂ ನನಗೆ ಯೇಸುವಿನ ಬಗ್ಗೆ ಹೇಳಲಿಲ್ಲ, ನರಕ ಮತ್ತು ಪರಲೋಕ ಎಂಬುದು ಇದೆ ಎಂದೂ ಹೇಳಲಿಲ್ಲ. ಹೇಳಿದ್ದರೆ ನಾನು ಮಾನಸಾಂತರ ಹೊಂದುತ್ತಿದ್ದೆ. ಎಂದು ಬಿಕ್ಕಿ ಬಿಕ್ಕಿ ಅತ್ತರು. ಆ ಅಳುವಿನ ಶಬ್ದಕ್ಕೆ ರಾಬರ್ಟ್ ಗಾಬರಿಗೊಂಡು ಎಚ್ಚರಗೊಂಡ. ನಾವು ಎಷ್ಟೇ ಇತರರಿಗೆ ಸಹಾಯ ಮಾಡಿದರೂ ಮತ್ತು ಅವರಿಂದ ಒಳ್ಳೆಯ ಹೆಸರನ್ನು ಪಡೆದರೂ, ಯೇಸುವಿನ ಬಗ್ಗೆ ಒಮ್ಮೆಯೂ ಅವರಿಗೆ ಹೇಳಲಿಲ್ಲವೇ. ನಾನು ದೊಡ್ಡ ತಪ್ಪನ್ನು ಮಾಡಿದ್ದೇನೆ ಎಂದು ಅರಿತುಕೊಂಡು ಆ ದಿನದಿಂದಲೇ ಅವರ ಕಂಪನಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಯೇಸುವಿನ ಬಗ್ಗೆ ಹೇಳಲು ಪ್ರಾರಂಭಿಸಿದರು.

 

ಏನು ಪುಟಾಣಿಗಳೇ, ನೀವು ಮಾತ್ರ ಒಳ್ಳೆಯವರಾಗಿದ್ದು ಪರಲೋಕಕ್ಕೆ ಹೋದರೆ ಸಾಕಾ? ನಿಮ್ಮ ಸಹ ವಿದ್ಯಾರ್ಥಿಗಳಿಗೆ ನೀವು ಸಹಾಯ ಮಾಡಬಹುದು. ಆದರೆ ಅವರಿಗೆ ಯೇಸುವಿನ ಬಗ್ಗೆ ಯಾರು ಹೇಳುತ್ತಾರೆ? ನಿಮ್ಮ ಊರಿನಲ್ಲಿರುವವರು ಮತ್ತು ಉಳಿದ ಎಲ್ಲಾ ಜನರು ಪರಲೋಕಕ್ಕೆ ಹೋಗೋದು ಬೇಡ್ವಾ? ಆದ್ದರಿಂದ ಆ ರಾಬರ್ಟ್ ಅಂಕಲ್ ಹಾಗೆ ಇಂದಿನಿಂದಲೇ ನಿನಗೆ ತಿಳಿದಿರುವ ಯೇಸಪ್ಪನನ್ನು ಇತರರಿಗೆ ತಿಳಿಸಲು ಮರೆತು ಹೋಗಬೇಡ ಕಂದಾ. ಓಕೆ ನಾ.

- Mrs. ಅನಿತಾ ಅಲಗರಸಾಮಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş