Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.10.2023
Share:

By Village Missionary Movement

Friday, 20-Oct-2023

ಧೈನಂದಿನ ಧ್ಯಾನ(Kannada) – 21.10.2023

 

ದೊಡ್ಡ ಮೀನು

 

"…ನಿಮಗಿರುವವುಗಳಲ್ಲಿ ತೃಪ್ತರಾಗಿರ್ರಿ" - ಇಬ್ರಿಯ 13:5

 

ಒಬ್ಬ ವ್ಯಕ್ತಿ ತನ್ನ ಚಿಕ್ಕ ದೋಣಿಯೊಂದಿಗೆ ಸರಳ ರೀತಿಯಲ್ಲಿ ಮೀನುಗಾರಿಕೆಗೆ ಹೋದನು. ಆ ದಿನ ಅವನ ಬಲೆಗೆ ಒಂದು ದೊಡ್ಡ ಮೀನು ಸಿಕ್ಕಿಹಾಕಿಕೊಂಡಿತು. ಆದರೆ ಆ ಚಿಕ್ಕ ದೋಣಿಯಿಂದ ಆ ದೊಡ್ಡ ಮೀನನ್ನು ದಡಕ್ಕೆ ತರುವುದು ತುಂಬಾ ಕಷ್ಟ. ಆದರೂ ದುರಾಸೆಯಿಂದ ಆ ದೊಡ್ಡ ಮೀನನ್ನು ದಡಕ್ಕೆ ತರಲು ಯತ್ನಿಸಿದನು. ಅದು ತುಂಬಾ ಕಠಿಣವಾಗಿದ್ದದರಿಂದ ಬಹಳ ಹೊತ್ತು ಪ್ರಯತ್ನಿಸಿ ಸುಸ್ತಾದನು. ಕೊನೆಗೆ ಬೇರೆ ದಾರಿಯಿಲ್ಲದೆ ಬಲೆ ಹಿಡಿದು ಸಮುದ್ರದಲ್ಲಿ ಬಿಟ್ಟು ಜೀವ ಉಳಿಸಿಕೊಳ್ಳಲು ದಡಕ್ಕೆ ಬಂದು ಸೇರಿದನು. ಸಾಮಾನ್ಯವಾಗಿ ಹಿಡಿಯುತ್ತಿದ್ದ ಕೆಲವು ಮೀನುಗಳೂ ಸಹ ಅಂದು ಅವನಿಗೆ ನಷ್ಟವಾಯಿತು.

 

ಕೆಲವೊಮ್ಮೆ ಜೀವನದಲ್ಲಿ ದೊಡ್ಡ ದೊಡ್ಡ ಆಸೆಗಳು ಮತ್ತು ದೊಡ್ಡ ದೊಡ್ಡ ಕನಸುಗಳು ನಮ್ಮ ಹೃದಯವನ್ನು ಪ್ರವೇಶಿಸಿ ನಮ್ಮನ್ನು ಭಾರಗೊಳಿಸುತ್ತವೆ. ನಾವು ದೊಡ್ಡದನ್ನು ಬಯಸಲು ಪ್ರಾರಂಭಿಸಿದಾಗ, ನಮ್ಮ ಸಣ್ಣ ಆಸೆಗಳನ್ನು ಪೂರೈಸುವ ಮಾರ್ಗವೂ ಮುಚ್ಚಿಹೋಗುತ್ತದೆ.

 

ಹವ್ವಳ‌ ಹೃದಯದಲ್ಲಿ ಸೈತಾನನು ಬಹು ದೊಡ್ಡ ಆಸೆಯು ಪ್ರವೇಶಿಸುವಂತೆ ಮಾಡಿದನು. ಅವಳೂ ಅದನ್ನು ಅಂಗೀಕರಿಸಿದಳು. ದೇವರಂತೆ ಮಾರ್ಪಡಬೇಕೆಂಬ ಅವಳ ಬಯಕೆಯು, ದೇವರು ಅವರಿಗೆ ಇಟ್ಟಿದ್ದ ಉನ್ನತವಾದ ಆಶೀರ್ವಾದಗಳನ್ನು ಕಳೆದುಕೊಳ್ಳುವಂತೆ ಮಾಡಿತು.

 

ನಮ್ಮ ಉತ್ತಮ ಕಾರ್ಯನಿರ್ವಹಣೆಯ ಜೀವನದಲ್ಲಿ, ಹಣದಾಸೆ, ಭೌತಿಕತೆ, ಖ್ಯಾತಿ ಮತ್ತು ಕೆಲವು ಐಷಾರಾಮಿ ಆಸೆ ಇಂತಹವುಗಳು ಜನರ ಹೃದಯವನ್ನು ಪ್ರವೇಶಿಸುತ್ತದೆ. ಅವುಗಳು ಹೊರೆಯಾಗಿ ಮಾರ್ಪಟ್ಟು ಅವರು ಸಾಮಾನ್ಯವಾಗಿ ಅನುಭವಿಸುತ್ತಿದ್ದ ಉತ್ತಮ ಆಶೀರ್ವಾದಗಳನ್ನೂ ಸಹ ಕಳೆದುಕೊಳ್ಳುವಂತೆ ಮಾಡುತ್ತಿದೆ.

 

ನಾವು ಸತ್ಯವೇದದಲ್ಲಿ ಓದುತ್ತೇವೆ ಗೇಹಜಿಯ ಹೃದಯದಲ್ಲಿ ನುಸುಳಿದ ಹಣದಾಸೆಯು ಅವನ ಉತ್ತಮ ಸ್ಥಿತಿಯನ್ನು ಕಳೆದುಕೊಳ್ಳುವಂತೆ ಮಾಡಿತು. ಕಳೆದುಕೊಂಡದ್ದರೊಂದಿಗೆ ಕುಷ್ಠರೋಗಿಯೂ ಆದನು. ಉನ್ನತಿಯ ಕುರಿತಾದ ಆಸೆಗಳು ತಪ್ಪಲ್ಲ. ಆದರೆ ಅವು ದುರಾಸೆಯ ಮುಖವಾಡಗಳಾಗದಂತೆ ಎಚ್ಚರವಹಿಸೋಣ. ದೇವರು ತಾನೇ ನಿಮ್ಮನ್ನು ಆಶೀರ್ವದಿಸಲಿ !!

- Bro. ಪಾಲ್ ಜೆಬಸ್ಟಿನ್ ರಾಜ್

 

ಪ್ರಾರ್ಥನಾ ಅಂಶ:

ಕಚೇರಿ ಕೆಲಸಕ್ಕಾಗಿ ತುರ್ತಾಗಿ ಅಗತ್ಯವಿರುವ ಪ್ರಿಂಟರ್ ತೆಗೆದುಕೊಡಲು ಜನರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet giriş pokerklas betpas maximcasino pashagaming pashagaming egebet casibom casinolevant virusbet ultrabet grandpashabet royalbet perabet matbet kralbet perabet perabet giriş meritbet meritbet giriş