Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.10.2023
Share:

By Village Missionary Movement

Thursday, 19-Oct-2023

ಧೈನಂದಿನ ಧ್ಯಾನ(Kannada) – 20.10.2023

 

ನಾಲಿಗೆ - ಕೇಡು

 

"ಅವರ ನಾಲಿಗೆಗಳೇ ಅವರಿಗೆ ವಿಘ್ನವಾಗಿ ಎಡವಿ ಬೀಳುವರು; ಆಗ ನೋಡುವವರೆಲ್ಲರು ತಲೆ ಅಲ್ಲಾಡಿಸಿ ಅಣಕಿಸುವರು" - ಕೀರ್ತನೆ 64:8

 

ವಿಜಯಪುರಿ ಎಂಬ ದೇಶವನ್ನು ವಿಜಯವರ್ಮನೆಂಬ ರಾಜ ಆಳುತ್ತಿದ್ದನು. ಅವರ ಆಸ್ಥಾನದಲ್ಲಿ ಮಹಿಪಾಲನೆಂಬ ಒಬ್ಬ ಕುಬ್ಜ ಮಂತ್ರಿಯಿದ್ದನು. ಒಮ್ಮೆ ರಾಜನು ಅವನನ್ನು ನೆರೆಯ ದೇಶಕ್ಕೆ ರಾಯಭಾರಿಯಾಗಿ ಕಳುಹಿಸಿದರು. ಆ ದೇಶದ ರಾಜನ ದೂತನಾಗಿ ಬಂದ ಮಂತ್ರಿ ಮಹಿಪಾಲನು ಕುಬ್ಜನಾದ ಕಾರಣ ಅವರನ್ನು ಕೇವಲವಾಗಿ ನೋಡಿ, ಗೇಲಿ ಮಾಡಿ ಮಾತಾಡಿದರು.

 

“ನಿಮ್ಮ ದೇಶದಲ್ಲಿ ನಿನಗಿಂತ ಉತ್ತಮನು ಯಾರೂ ಇಲ್ಲವಾ?” ಎಂದು ಕೇಳಿದರು. ಇದರಿಂದ ಮಂತ್ರಿಗೆ ಬಹಳ ದುಃಖವಾಯಿತು.ಕೂಡಲೇ ಅವನು “ಓ ರಾಜ, ನಮ್ಮ ದೇಶಕ್ಕೆ ಒಂದು ಪದ್ಧತಿಯಿದೆ. ಆ ಪದ್ಧತಿಯ ಪ್ರಕಾರ ರಾಜನು ನನ್ನನ್ನು ಇಲ್ಲಿಗೆ ದೂತನಾಗಿ ಕಳುಹಿಸಿದ್ದಾರೆ ಎಂದರು. "ನಿಮ್ಮ ದೇಶದ ಪದ್ಧತಿ ಏನು?" ಎಂದು ಕೇಳಿದರು. ಆಯಾ ದೇಶಕ್ಕೆ ತಕ್ಕಂತೆ ರಾಯಭಾರಿಗಳನ್ನು ಕಳುಹಿಸುವುದು ನಮ್ಮ ರಾಜನ ವಾಡಿಕೆ, ಬುದ್ಧಿವಂತ ರಾಜನು ಆಳುವ ದೇಶಕ್ಕೆ ಬುದ್ಧಿವಂತ ರಾಯಭಾರಿಗಳನ್ನು ಕಳುಹಿಸುತ್ತಾರೆ ಮತ್ತು ಮೂರ್ಖ ರಾಜನು ಆಳುವ ದೇಶಕ್ಕೆ ಮೂರ್ಖನನ್ನು ಕಳುಹಿಸುತ್ತಾರೆ ಎಂದನು. ನಮ್ಮ ದೇಶದಲ್ಲೇ ಬಹು ದೊಡ್ಡ ಮೂರ್ಖ ನಾನೇ, ಅದಕ್ಕಾಗಿಯೇ ನನ್ನನ್ನು ಇಲ್ಲಿಗೆ ಕಳುಹಿಸಿದರು" ಎಂದರು. ಇದನ್ನು ಕೇಳಿದ ಕೂಡಲೇ ಆ ರಾಜನು ನಾಚಿಕೆಯಿಂದ ತಲೆ ತಗ್ಗಿಸಿದನು.

 

ಹೌದು, ಕ್ರಿಸ್ತನಲ್ಲಿ ಪ್ರಿಯರೇ! ಇಂದಿಗೂ ನಾವು ನಮ್ಮ ಮಾತಿನ ಬಗ್ಗೆ ಜಾಗರೂಕರಾಗಿದ್ದೇವೆಯೇ? ನಮ್ಮ ಮಾತುಗಳನ್ನು ಇತರರನ್ನು ಅವಮಾನಿಸಲು ಮತ್ತು ನೋಯಿಸಲು ಉಪಯೋಗಿಸುತ್ತಿದ್ದೇವಾ? ಸ್ವಲ್ಪ ಯೋಚಿಸೋಣ.

 

ಚಾಡಿಗಾರನು ದೇಶದಲ್ಲಿ ಉಳಿಯನು; ಕೇಡು ಬಲಾತ್ಕಾರಿಯನ್ನು ಹಿಂದಟ್ಟಿ ಕೆಡವಿಬಿಡುವದು ಎಂದು ಕೀರ್ತನೆ 140:11 ರಲ್ಲಿ ಹೇಳಲ್ಪಟ್ಟಿದೆ. 

 

ಸತ್ಯವೇದದಲ್ಲಿಯೂ ಸಹ ತನ್ನ ನಾಲಿಗೆಯಿಂದ ಇತರರನ್ನು ನೋಯಿಸಿದ ಮನುಷ್ಯನಿದ್ದಾನೆ. ಅವನ ಹೆಸರು ನಾಬಾಲ್. ದಾವೀದನು 10 ಯುವಕರನ್ನು ನಾಬಾಲನ ಬಳಿಗೆ ಕಳುಹಿಸಿದರು. ಒಂದು ಕಾಲದಲ್ಲಿ ದಾವೀದನು ನಾಬಾಲನಿಗೆ ಸಹಾಯಕನಾಗಿದ್ದರು. 

 

ಆದರೆ ನಾಬಾಲನೋ, "ದಾವೀದನು ಯಾರು? ಯಜಮಾನನನ್ನು ಬಿಟ್ಟು ಓಡಿಹೋದವರು ಇಲ್ಲಿ ಅನೇಕರಿದ್ದಾರೆ. ನಾನು ಅವನಿಗೆ ಸಹಾಯ ಮಾಡುವುದಿಲ್ಲ" ಎಂದು ಅವಮಾನಿಸಿ ಅವರನ್ನು ಕಳುಹಿಸುತ್ತಾನೆ. ಇದರಿಂದ ದಾವೀದನು ನಾಬಾಲನಿಗೆ ವಿರುದ್ಧವಾಗಿ ಬರುತ್ತಾರೆ. ತನ್ನ ನಿಷ್ಕರುಣೆಯ ಮಾತಿನಿಂದ ತನಗೇ ಅಪಾಯವನ್ನು ತಂದುಕೊಂಡಿದ್ದನ್ನು ಇಂದಿನ ಸತ್ಯವೇದ ಭಾಗದಲ್ಲಿ ಓದಿದ್ದೇವೆ. ನಾವು ಸಹ ಇತರರೊಂದಿಗೆ ಮಾತನಾಡುವಾಗ ಒಳ್ಳೆಯ ಮಾತುಗಳನ್ನು ಮಾತನಾಡೋಣ. ಬೇರೆಯವರ ಮನನೋಯುವಂತೆ ಮಾತನಾಡದಿರೋಣ. ಆಮೆನ್!

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ಪ್ರತಿ ರಾಜ್ಯದಲ್ಲಿ 500 ಸಹ ಸೇವಕರು ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş