Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.10.2023
Share:

By Village Missionary Movement

Thursday, 19-Oct-2023

ಧೈನಂದಿನ ಧ್ಯಾನ(Kannada) – 19.10.2023

 

ಎಷ್ಟು ಕಾಲ ಕಾಯುವಿ?

 

"ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು; ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು." - ಜ್ಞಾನೋಕ್ತಿ 13:12

 

ಹಚ್ಚಹಸಿರಾಗಿ ಹೊಳೆಯುತ್ತಿದ್ದ ಸೋರೆಕಾಯಿ ಬಣ್ಣದ ಸುಂದರವಾದ ಗಿಳಿಯೊಂದು ಕಾಡಿನಲ್ಲಿರುವ ಮರಗಳನ್ನೆಲ್ಲಾ ಸುತ್ತುತ್ತಾ ಬಂತು. ದಟ್ಟವಾಗಿ ಬೆಳೆದಿದ್ದ ಕೊಂಬೆಗಳೊಂದಿಗೆ ದೊಡ್ಡ ಎಲೆಗಳನ್ನು ಮತ್ತು ಉದ್ದವಾದ ಕಾಯಿಗಳನ್ನು ಹೊಂದಿರುವ ಹತ್ತಿಯ ಮರ ಗಿಣಿಯ ಕಣ್ಣಿಗೆ ಬಿತ್ತು. ಹೇಗಾದರೂ ಮಾಡಿ ಈ ಮರದ ಹಣ್ಣನ್ನು ತಿನ್ನಬೇಕು ಎಂಬ ಆಸೆಯಿಂದ ಹಣ್ಣು ಮಾಗುವ ಸಮಯಕ್ಕಾಗಿ ಕಾಯುತ್ತಿತ್ತು. ಅಂದೋ ಪರಿತಾಪವಾಗಿ ಕಾಯಿಗಳು ಹಣ್ಣಾಗದೇ ಒಣಗಿ ಒಡೆದು ಅದರಲ್ಲಿದ್ದ ಹತ್ತಿಯೆಲ್ಲಾ ಹಾರಿತು. ಕಾಯುತ್ತಿದ್ದ ಗಿಣಿಗೆ ನಿರಾಶೆಯಾಯಿತು.

 

ಸತ್ಯವೇದದಲ್ಲಿ ಯೋಹಾನ 5.5 ರಲ್ಲಿ ಮೂವತ್ತೆಂಟು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯ ಬಗ್ಗೆ ಓದುತ್ತೇವೆ. ಸ್ವಲ್ಪ ಯೋಚಿಸೋಣ, 38 ವರ್ಷಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದವನು ನೀರು ಯಾವಾಗ ಕದಲಿಸಲ್ಪಡುತ್ತದೆ ಎಂದೇ ನೋಡಿದನು. ಆದರೆ ನಡೆದದ್ದೇನು? ಬೇರೆಯವರು ಹೋಗಿ ಸ್ವಸ್ಥವಾಗುತ್ತಿದ್ದರು. ಇವರಿಗೆ ಸಹಾಯ ಮಾಡಲು ಯಾರೂ ಇಲ್ಲ. ಆದ್ದರಿಂದಲೇ 38 ವರ್ಷಗಳ ಕಾಲ ಕಾಯುತ್ತಿದ್ದರು. ಅದೃಷ್ಟವಶಾತ್, ಯೇಸುವೇ ಆ ಮನುಷ್ಯನನ್ನು ಹುಡುಕಿಬಂದು ಗುಣಪಡಿಸಿದರು. ಇಲ್ಲದಿದ್ದರೆ ಅವರ 38 ವರ್ಷಗಳ ಕಾಯುವಿಕೆ ವ್ಯರ್ಥವಾಗುತ್ತಿತ್ತು. ಅದೇ ರೀತಿ ನಮ್ಮ ಜೀವನದಲ್ಲಿ ಮದುವೆ, ಮಗು, ಮನೆ ಕಟ್ಟಲು ಮತ್ತು ಉದ್ಯೋಗಕ್ಕಾಗಿ ಕಾಯುತ್ತಿರುತ್ತೇವೆ. ಆದರೆ ಅನೇಕ ಬಾರಿ ನಾವು ಸೋಲನ್ನೇ ಎದುರಿಸುತ್ತೇವೆ.

 

ಇದನ್ನು ಓದುತ್ತಿರುವ ಸಹೋದರ ಸಹೋದರಿಯರೇ! ನಮ್ಮ ಕಾಯುವಿಕೆ ಹೇಗಿದೆ? ಹತ್ತಿ ಮರದ ನಿಜವಾದ ಸ್ಥಿತಿಯನ್ನು ತಿಳಿಯದೆ ಹಣ್ಣನ್ನು ಕಾಯುತ್ತಿದ್ದ ಗಿಳಿಯಂತೆ ಇದೆಯಾ? ಅಥವಾ ಅನಾರೋಗ್ಯದಿಂದ, ತೊಂದರೆಯಿಂದ, ಶಾಂತಿಯ ಕೊರತೆಯಿಂದ ನಿಜವಾಗಿಯೂ ಬಿಡಿಸುವ ದೇವರ ಕಡೆಗೆ ದೃಷ್ಟಿಸುತ್ತಿದೆಯಾ? ನಿಮ್ಮ ಕಾಯುವಿಕೆ ಯಾರನ್ನು ನೋಡುತ್ತಾ ಯಾವುದನ್ನು ನೋಡುತ್ತಾ ಇದೆ? ಯೋಚಿಸಿ. ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು. (ಕೀರ್ತನೆ 27:14)

- Mrs. ಭುವಿತಾ ಎಬಿನೇಜರ್

 

ಪ್ರಾರ್ಥನಾ ಅಂಶ:

ಏಳು ಸಾವಿರ ಮಿಷನರಿಗಳು ಒಂದು ಲಕ್ಷ ಹಳ್ಳಿಗಳು ಎಂಬ ಗುರಿಯನ್ನು ತಲುಪಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al