Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.10.2023
Share:

By Village Missionary Movement

Monday, 16-Oct-2023

ಧೈನಂದಿನ ಧ್ಯಾನ(Kannada) – 16.10.2023

 

ಹುಡುಕಿ ಬರುವವರು

 

"…ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ…" - ಯೋಹಾನ 11:40

 

ಅಮೆರಿಕ ದೇಶದಲ್ಲಿ ವೈದ್ಯರೊಬ್ಬರು ಕ್ಯಾನ್ಸರ್‌ಗೆ ಔಷಧಿ ಕಂಡು ಹಿಡಿದರು. ಅವರಿಗೆ ಸರ್ಕಾರಿ ಪ್ರಶಸ್ತಿ ನೀಡಲು ಆಹ್ವಾನಿಸಿ ಸಮಾರಂಭ ಏರ್ಪಡಿಸಿದ್ದರು. ಮಳೆ, ಬಿರುಗಾಳಿಯಿಂದಾಗಿ ಸಮಾರಂಭಕ್ಕೆ ವಿಮಾನದಲ್ಲಿ ಹೋಗಲಾಗದೆ ಕಾರಿನಲ್ಲಿ ತೆರಳಿದ್ದರು. ಕಾರು ಒಂದು ನಿರ್ದಿಷ್ಟ ದೂರವನ್ನು ಮೀರಿ ಹೋಗಲಾರದೆ ಮನೆಯೊಂದರ ಮುಂದೆ ನಿಂತಿತು. ಆ ಮನೆಯ ಬಾಗಿಲು ತಟ್ಟಿ ನೀರು ಕೇಳಿದರು. ಕೂಡಲೇ ತಾಯಿ ಅವರನ್ನು ಒಳಗೆ ಕರೆದೊಯ್ದು ಕುಡಿಯಲು ನೀರು ಕೊಟ್ಟು ಕೂರಿಸಿ ಒಳಗಿನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಅಸ್ವಸ್ಥ ಮಗನಿಗಾಗಿ ಕಣ್ಣೀರಿನಿಂದ ಪ್ರಾರ್ಥಿಸಿದಳು. ಆ ತಾಯಿ ಹೊರಗೆ ಬಂದು ಹೀಗೆ ಹೇಳಿದರು ನನ್ನ ಮಗನ ಕಾಯಿಲೆಗೆ ಔಷಧಿಯನ್ನು ಬೇರೆ ದೇಶದ ವೈದ್ಯರೊಬ್ಬರು ಕಂಡು ಹಿಡಿದಿದ್ದಾರೆ. ಅವರನ್ನು ಹೋಗಿ ನೋಡಿ ಎಂದು ನಮ್ಮ ವೈದ್ಯರು ಹೇಳಿಬಿಟ್ಟರು. ನಾನು ಅಲ್ಲಿಗೆ ಹೋಗಿ ಅವರನ್ನು ನೋಡುವ ಮಟ್ಟಿಗೆ ಯಾವ ಸೌಕರ್ಯವೂ ನನಗಿಲ್ಲ ಆದ್ದರಿಂದ ನಾನು ಅಳುತ್ತಾ ನನ್ನ ಪರಲೋಕದ ತಂದೆಯ ಬಳಿ ಪ್ರಾರ್ಥಿಸಿದೆ ಎಂದರು. ಅವರು ರಿಪೋರ್ಟ್ ತೆಗೆದುಕೊಂಡು ನೋಡಿಬಿಟ್ಟು ಆ ಡಾಕ್ಟರ್ ನಾನೇ. ನಾನು ನಿಮ್ಮ ಮಗನನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೇನೆ ಎಂದರು. ದೇವರು ತಾಯಿಯ ಪ್ರಾರ್ಥನೆಯನ್ನು ಕೇಳಿ, ವೈದ್ಯರೇ ಅವರನ್ನು ಹುಡುಕಿ ಬರುವಂತೆ ಮಾಡಿದರು.

 

ಸತ್ಯವೇದದಲ್ಲಿ ಸಹ ಯೇಸು ಕ್ರಿಸ್ತನು ಈ ಲೋಕದಲ್ಲಿ ಸಂಚರಿಸಿದ ದಿನಗಳಲ್ಲಿ, ನಂಬಿಕೆಯಿಂದ ತನ್ನ ಬಳಿಗೆ ಬಂದು ಬೇಡಿಕೊಂಡ ಪ್ರತಿಯೊಬ್ಬರಿಗೂ ಸ್ವಸ್ಥತೆಯನ್ನು, ಬಲವನ್ನು ಅನುಗ್ರಹಿಸಿ ಅವರನ್ನು ಸಂತೋಷದಿಂದ ಕಳುಹಿಸಿದರು. ಆಹ್ವಾನಿಸಿದವರ ಮನೆಗೆ ಹೋಗಿ ಅದ್ಬುತ ಮಾಡಿದರು. ಪೇತ್ರನ ಮನೆಗೆ ಹೋಗಿ ಸತ್ತ ಮಗಳನ್ನು ಜೀವಂತವಾಗಿ ಎಬ್ಬಿಸಿದರು. ಜಕ್ಕಾಯನ ಮನೆಗೆ ಹೋಗಿ ರಕ್ಷಣಾನಂದವನ್ನು ಕೊಟ್ಟರು. ಅಂತೆಯೇ, ನಂಬಿಕೆಯಿಂದ ಕಾಯುತ್ತಿರುವವರನ್ನು ಹುಡುಕಿ ಹೋಗಿ ಗುಣಪಡಿಸುತ್ತಿದ್ದರು. 38 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಹುಡುಕಿಕೊಂಡು ಹೋಗಿ ಅವರನ್ನು ಗುಣಪಡಿಸಿದರು. ಗೂನಿಯಾಗಿದ್ದ ಸ್ತ್ರೀ, ಊನ ಕೈಯುಳ್ಳ ಮನುಷ್ಯನಿಗೆ ಆಲಯದೊಳಗೆ ಗುಣಪಡಿಸಿದರು. ನಂಬಿಕೆಯಿಂದ ಕೇಳಿಕೊಂಡ ಶತಾಧಿಪತಿಯ ಸೇವಕನನ್ನು ಗುಣಪಡಿಸಿದರು. ಅಷ್ಟೇ ಏಕೆ ಸತ್ತು ನಾಲ್ಕು ದಿನಗಳಾಗಿದ್ದ ಲಾಜರನನ್ನೂ ಸಹ ಎಬ್ಬಿಸಲು ಸಮಾಧಿಯ ಬಳಿ ಹುಡುಕಿಕೊಂಡು ಹೋದರು.

 

ಪ್ರಿಯರೇ, ನಮ್ಮ ಜೀವನದಲ್ಲಿಯೂ ಯಾವುದೇ ತರದ ಬಲಹೀನತೆ, ಅನಾರೋಗ್ಯ, ಕೊರತೆಗಳು ಅಥವಾ ಎಲ್ಲಾ ಮುಗಿಯಿತು ಎಂಬಂತಹ ಪರಿಸ್ಥಿತಿಗಳು ಇದ್ದರೂ ಅದರಿಂದ ಒಂದು ಬಿಡುಗಡೆಯನ್ನು ನೀಡಲು ದೇವರಿಗೆ ಸಾಧ್ಯ. ನಮ್ಮ ಕರ್ತನು "ಸಮುದ್ರದಲ್ಲಿ ದಾರಿಮಾಡಿ ಜಲಪ್ರವಾಹಗಳಲ್ಲಿ ಮಾರ್ಗವನ್ನು ಏರ್ಪಡಿಸಿ" ಎಂದು ಯೆಶಾಯ 43:16 ರಲ್ಲಿ ಇದೆ. ಆದ್ದರಿಂದ ನಿಮ್ಮ ನಂಬಿಕೆಯಿಲ್ಲದೆ ಸಮಾಧಿ ಮಾಡಲ್ಪಟ್ಟಿದ್ದರೆ ಅದನ್ನು ಎತ್ತಿರಿ. ನಂಬಿಕೆಯಿಂದ ಆತನನ್ನು ಪ್ರಾರ್ಥಿಸಿರಿ ಅವರು ಹುಡುಕಿ ಬಂದು ಅದ್ಭುತ ಮಾಡುತ್ತಾರೆ. ಹಲ್ಲೇಲೂಯ 

- Sis. ಬ್ಯೂಲ

 

ಪ್ರಾರ್ಥನಾ ಅಂಶ:

ನಮ್ಮ ಕಾರ್ಯಸ್ಥಳಗಳಲ್ಲಿ ಮೂವತ್ತು ದಿನಗಳೂ 30 ಮನೆಗಳಲ್ಲಿ ಪ್ರಾರ್ಥನಾ ಕೂಟಗಳು ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel bahsegel holiganbet holiganbet giriş holiganbet güncel giriş perabet perabet giriş perabet güncel giriş perabet perabet giriş