Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.10.2023
Share:

By Village Missionary Movement

Friday, 13-Oct-2023

ಧೈನಂದಿನ ಧ್ಯಾನ(Kannada) – 13.10.2023

 

ಎಲ್ಲರೊಂದಿಗೆ ಸಮಾಧಾನವಾಗಿರಿ

 

"ನಿಮ್ಮ ನಿಮ್ಮೊಳಗೆ ಏಕಮನಸ್ಸುಳ್ಳವರಾಗಿರ್ರಿ" - ರೋಮಾ 12:16

 

ಒಮ್ಮೆ ಒಂದು ಮಹಿಳೆ ತನ್ನ ವಯಸ್ಸಾದ, ಅನಾರೋಗ್ಯದಿಂದಿದ್ದ ತಾಯಿಯ ಬಳಿ ತನ್ನ ಕಹಿಯಾದ ಸ್ವಭಾವವನ್ನು ಆಗಾಗ್ಗೆ ಹೊರಹಾಕುತ್ತಿದ್ದಳು. "ಸಾಕು ಸಾಕು ಇಷ್ಟು ತಿಂದರೆ ಸಾಕಾಗಲ್ವಾ? ಸಾಯುವ ಮುದುಕಿಗೆ ದಿನಾಲೂ ಸ್ನಾನ ಮಾಡಿ ಡ್ರೆಸ್ ಬದಲಾಯಿಸಬೇಕಾ?" ಎಂದು ಹೇಳುವಾಗಲೆಲ್ಲ ಆ ವಯಸ್ಸಾದ ತಾಯಿಯವರು ಬಹಳ ಸಂಕಟಪಡುತ್ತಿದ್ದರು. ಒಂದು ದಿನ ಆ ಮಗಳು ಪವಿತ್ರಾತ್ಮನಿಂದ ಪ್ರೇರೇಪಿಸಲ್ಪಟ್ಟಳು. ತನ್ನ ತಾಯಿಯ ಮೇಲೆ ತೋರುತ್ತಿರುವ ಕಹಿ ಭಾವನೆಯು ಹೇಗೆ ಪುನಃ ತನ್ನ ಮೇಲೆ ಪ್ರತಿಫಲಿಸುತ್ತದೆ ಎಂಬುದನ್ನು ಪವಿತ್ರಾತ್ಮನು ತಿಳಿಸಿದ್ದರಿಂದ, ಅವಳ ಕಣ್ಣುಗಳಲ್ಲಿ ಕಣ್ಣೀರು ಸುರಿಯಿತು ತನ್ನ ತಾಯಿಯ ಬಳಿ ಕ್ಷಮೆಯನ್ನು ಕೇಳಲು ಬಯಸಿದಳು. ಅಂದು ಮನೆಗೆ ಹಿಂದಿರುಗುವಾಗ ಹೂವಿನ ಬೊಕ್ಕೆಯನ್ನು ಖರೀದಿಸಿ ಅಮ್ಮನಿಗೆ ಕೊಟ್ಟು ಅಮ್ಮ ನನ್ನನ್ನು ಕ್ಷಮಿಸಿಬಿಡಿ, ಹಲವು ಬಾರಿ ನಿಮ್ಮ ಹೃದಯವನ್ನು ನೋಯಿಸಿದ್ದೇನೆ

ಎಂದು ಅತ್ತಳು. ತಾಯಿ ಮತ್ತು ಮಗಳು ಒಂದಾದರು. ಆ ಸಮಾಧಾನದ ಅಲೆಯು, ಅವರ ಪಕ್ಕದ ಮನೆಯ ವ್ಯಕ್ತಿಗಳೊಂದಿಗಿದ್ದ ದ್ವೇಷದ ಬಗ್ಗೆ ಆ ತಾಯಿಯವರಿಗೆ ಅರಿವು ಮೂಡಿಸಿತು. ಕ್ಷಮೆ ಕೇಳಿ ಪತ್ರ ಬರೆದು ಮಗಳ ಕೈಯಲ್ಲಿ ಕೊಟ್ಟು ಕಳುಹಿಸಿದಳು. ಊಹಿಸಲೂ ಸಾಧ್ಯವಾಗದಷ್ಟು ಜನ ಬಂದು ಆ ತಾಯಿಯೊಂದಿಗೆ ಐಕ್ಯವಾಗಿ ಸಂಭ್ರಮಿಸಿದರು. ಕ್ರಿಸ್ತನ ಪ್ರೀತಿ ಇಡೀ ಬೀದಿಯನ್ನು ವ್ಯಾಪಿಸಿತು. ಅದರ ಮೂಲಕ ದೇವರ ಪ್ರೀತಿಯನ್ನು ಅನೇಕರು ಅನುಭವಿಸಿದರು. ಮನಸ್ಸಿನ ಬದಲಾವಣೆಯಿಂದ ದೈಹಿಕ ದೌರ್ಬಲ್ಯ ದೂರವಾಗಿ ಗುಣಮುಖರಾದರು. ಸಮಾಧಾನವಾಗುವುದು ಎಷ್ಟು ಅದ್ಬುತವಾಗಿದೆ ನೋಡಿ.

 

ಪರಿಶುದ್ಧ ಗ್ರಂಥದಲ್ಲಿ ಹಳೆಯ ಒಡಂಬಡಿಕೆಯ ಯೋಸೇಫನ ಬಗ್ಗೆ ನಮಗೆ ಗೊತ್ತು. ಯೋಸೇಫನ ಸಹೋದರರು ಅವನಿಗೆ ವಿರುದ್ಧವಾಗಿ ಅನೇಕ ಕೆಟ್ಟ ಕೆಲಸಗಳನ್ನು ಮಾಡಿದರು. ಆದರೆ ಯೋಸೇಫನು ದೇಶದ ಅಧಿಪತಿಯಾಗಿ ಮಾರ್ಪಟ್ಟರೂ ಸಹ, ತನ್ನ ಸಹೋದರರನ್ನು ಸೇಡು ತೀರಿಸಿಕೊಳ್ಳಲು ಬಯಸಲಿಲ್ಲ, ಕಹಿ ಅಥವಾ ಯಾವುದೇ ರೀತಿಯ ದುರುದ್ದೇಶವೂ ಇಲ್ಲದವರಾಗಿಯೇ ಕಾಣಲ್ಪಟ್ಟರು. ಯೋಸೇಫನಲ್ಲಿ ಒಳ್ಳೆಯ ಸಮಾಧಾನವಾಗುವ ಮತ್ತು ಕ್ಷಮಿಸುವ ಸ್ವಭಾವವೇ ಇತ್ತು.

 

ಪ್ರಿಯರೇ! ಬೆಸಿಲಿಯಾ ಎಂಬ ಪರಿಶುದ್ಧ ತಾಯಿಯು ಹೇಳುತ್ತಾರೆ, "ಸಮಾಧಾನವಾಗುವುದು ಎಂಬುದು ಪರಲೋಕದ ಮಹಾನ್ ಆನಂದವನ್ನು ಸವಿಯುವುದಕ್ಕೆ ಸಮಾನವಾಗಿದೆ"! ನಾವು ಇತರರನ್ನು ಕ್ಷಮಿಸಿದರೆ ಈ ಲೋಕದಲ್ಲೇ ನಾವು ಅದನ್ನು ಸವಿಯಬಹುದು. ಆದ್ದರಿಂದ ನಾವು ಎಲ್ಲರೊಂದಿಗೆ ಸಮಾಧಾನವಾಗಿರೋಣ ಮತ್ತು ಕ್ರಿಸ್ತನ ಮನಸ್ಸಿನೊಂದಿಗೆ ಪ್ರೀತಿಯನ್ನು ತೋರಿಸೋಣ ಮತ್ತು ದೈವಿಕ ಶಾಂತಿಯನ್ನು ಪಡೆಯೋಣ. ಯೇಸುಕ್ರಿಸ್ತನು ಮರಣದ ವರೆಗೂ ತನ್ನನ್ನು ತಗ್ಗಿಸಿಕೊಂಡಂತೆ (ಫಿಲಿಪ್ಪಿ 2:8)‌ ನಾವು ನಮ್ಮನ್ನು ತಗ್ಗಿಸಿಕೊಂಡು, ಇತರರನ್ನು ಕ್ಷಮಿಸಿ ಸಮಾಧಾನವಾಗುವುದರ ಪ್ರಯೋಜನವನ್ನು ಪಡೆದುಕೊಳ್ಳೋಣ.

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ನಮ್ಮ ಪತ್ರಿಕಾ ಸೇವೆಗಳಲ್ಲಿ ಬರಹಗಾರರು ದೇವರ ಆತ್ಮದಿಂದ ಪ್ರೇರಿತರಾಗಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al