Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.10.2023
Share:

By Village Missionary Movement

Thursday, 12-Oct-2023

ಧೈನಂದಿನ ಧ್ಯಾನ(Kannada) – 12.10.2023

 

ರಕ್ತ ಸಾಕ್ಷಿ ಫಿಲಿಪ್ಪನು 

 

"…ಹೇಬೆಲನ ರಕ್ತಕ್ಕಿಂತ ಹಿತಕರವಾಗಿ ಮಾತಾಡುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ" - ಇಬ್ರಿಯ 12:24

 

ಹೇಬೆಲನು ಮೊದಲುಗೊಂಡು ಜೆಕರ್ಯ ವರೆಗೂ ಹಳೆಯ ಒಡಂಬಡಿಕೆಯ ಪ್ರವಾದಿಗಳು ಕೊಲ್ಲಲ್ಪಟ್ಟರು. ಹೇಬೆಲನ ರಕ್ತವು ಇಂದಿಗೂ ಮಾತನಾಡುತ್ತಿದೆ. ರಕ್ತ ಸಾಕ್ಷಿಗಳ ರಕ್ತವು ಮಾತನಾಡುತ್ತದೆ! ಅವರ ರಕ್ತದ ಹನಿಗಳಿಂದಲೇ ಸಭೆಗಳು ಮತ್ತು ಕ್ರೈಸ್ತವ್ಯವು ಬೆಳೆಯುತ್ತಿದೆ. ಹೊಸ ಒಡಂಬಡಿಕೆಯಲ್ಲಿ ಮೊದಲ ಶಿಷ್ಯನಾದ ಯಾಕೋಬನು ಮೊದಲ ರಕ್ತ ಸಾಕ್ಷಿಯಾಗಿ ಮರಣಹೊಂದಿದನು. ಈ ಸಾಲಿನಲ್ಲಿದ್ದ 12 ಮಂದಿ ಶಿಷ್ಯರಲ್ಲಿ ಫಿಲಿಪ್ಪನೂ ಒಬ್ಬರು. ಅವರ ಬಗ್ಗೆ ನೋಡೋಣ.

 

ಅಪೊಸ್ತಲನಾದ ಫಿಲಿಪ್ಪನು ಬೇತ್ಸಾಯಿದ ಪಟ್ಟಣದವನು. ಫಿಲಿಪ್ಪನು ಎಂದರೆ ಗ್ರೀಕ್ ಮಾತಿನಲ್ಲಿ 

ಕುದುರೆ ಎಂದರ್ಥ. ಅವರು ತನ್ನಷ್ಟಕ್ಕೆ ತಾನೇ ಕ್ರಿಸ್ತನನ್ನು ಹುಡುಕಲಿಲ್ಲ, ಕ್ರಿಸ್ತನೇ ಅವರನ್ನು ಕರೆದರು. ಅವರು ಫಿಲಿಪ್ಪನನ್ನು ಕಂಡುಕೊಂಡು - ನನ್ನನ್ನು ಹಿಂಬಾಲಿಸು ಎಂದು ಕರೆದರು. (ಯೋಹಾನ 1:43) ಫಿಲಿಪ್ಪನು ಪ್ರತಿಯೊಂದು ವಿಷಯವನ್ನು ಪರಿಶೀಲಿಸಿ ತಿಳಿದುಕೊಳ್ಳುವ ವ್ಯಕ್ತಿಯಾಗಿ ಕಾಣಲ್ಪಟ್ಟರು. ಇವರು ತನ್ನ ಸ್ನೇಹಿತನಾದ ನತಾನಯೇಲನನ್ನು ಕ್ರಿಸ್ತನೆಡೆಗೆ ಕರೆತರುವ ಸಾಧನವಾಗಿ ಕಾಣಲ್ಪಟ್ಟರು. (ಯೋಹಾನ 1:45) ಫಿಲಿಪ್ಪನು ಕೊನೆಯ ದಿನಗಳಲ್ಲಿ ಕೊಲೆಗಾರರ ಕೈಗೆ ಸಿಕ್ಕಿಬಿದ್ದಾಗ, ಅವರನ್ನು ಶಿಲುಬೆಗೆ ಕಟ್ಟಿ ಒದ್ದು ಕಲ್ಲಿನಿಂದ ಹೊಡೆದು ಕೊಂದರು. ಯೇಸು ಕ್ರಿಸ್ತನೊಂದಿಗಿದ್ದು ಅವರ ತ್ಯಾಗದ ಪ್ರೀತಿಯನ್ನು ನೋಡಿದ ಫಿಲಿಪ್ಪನು ತನ್ನನ್ನೂ ರಕ್ತ ಸಾಕ್ಷಿಯಾಗಿ ಸಾಯಲು ಒಪ್ಪಿಸಿಕೊಟ್ಟರು.

 

ನಾವು ಸಹ ನಮ್ಮ ಸುತ್ತಲಿರುವವರಿಗೆ ಸಾಕ್ಷಿಯಾಗಿದ್ದೇವೆಯೇ? ಯೇಸು ಕ್ರಿಸ್ತನ ಬಗ್ಗೆ ಹೇಳುತ್ತಿದ್ದೇವೆಯೇ? ನಮ್ಮ ಮಾತುಗಳು ಮತ್ತು ಕಾರ್ಯಗಳು ಯಾವ ರೀತಿ ಕಾಣುತ್ತಿವೆ. ಯೋಚಿಸಿ ನೋಡೋಣ. ದೇವರ ಪ್ರೀತಿಯನ್ನು ಅರಿತುಕೊಂಡಿರುವ ನಾವು ಸುಮ್ಮನಿರಬಹುದೇ? ಕ್ರಿಸ್ತನಿಗಾಗಿ ನಮ್ಮಿಂದ ಸಾಧ್ಯವಾದುದನ್ನು ಮಾಡಲು ಮುಂದೆ ಬರೋಣ. ಅನೇಕ ರಕ್ತಸಾಕ್ಷಿಗಳ ರಕ್ತದ ಮೇಲೆಯೇ ನಮ್ಮ ಸಭೆಗಳು ನಿರ್ಮಿಸಲ್ಪಟ್ಟಿವೆ ಎಂಬುದನ್ನು ಅರಿತುಕೊಂಡು, ತ್ಯಾಗದ ಜೀವನಕ್ಕೆ ನಮ್ಮನ್ನು ಒಪ್ಪಿಸಿಕೊಡೋಣ.

- Mrs. ಜ್ಞಾನಸೆಲ್ವಂ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ನಮ್ಮ ಪತ್ರಿಕಾ ಸೇವೆಗಳನ್ನು ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಭಾಷಾಂತರ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom jojobet jojobet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş casibom giriş casibom casibom jojobet jojobet giriş bahsegel bahsegel holiganbet holiganbet giriş holiganbet güncel giriş perabet perabet giriş perabet güncel giriş perabet perabet giriş