By Village Missionary Movement
Wednesday, 11-Oct-2023ಧೈನಂದಿನ ಧ್ಯಾನ(Kannada) – 11.10.2023
ಕೂಷ್ಯನ ಗುಣಲಕ್ಷಣ
"ಕೂಷ್ಯನು--ಅರಸ ನಾದ ನನ್ನ ಯಜಮಾನನಿಗೆ ವರ್ತಮಾನ ಉಂಟು . . ." - 2 ಸಮುವೇಲ 18:31
ಪರಿಶುದ್ಧ ಗ್ರಂಥದಲ್ಲಿ ಅನೇಕ ಪರಿಶುದ್ದರ ಜೀವನದ ಬಗ್ಗೆ ಬರೆಯಲ್ಪಟ್ಟಿದೆ. ಕೆಲವು ಕಥಾಪಾತ್ರಗಳ ಜೀವನ ನಮಗೆ ಮೂಲ ಉದಾಹರಣೆಯಾಗಿಯೂ, ಮತ್ತು ಇತರರ ಜೀವನ ನಮಗೆ ಎಚ್ಚರಿಕೆಯಾಗಿಯೂ ಬರೆಯಲ್ಪಟ್ಟಿದೆ. ಇಂದು ನಾವು ಕೂಷ್ಯನ ಪಾತ್ರವನ್ನು ನಮ್ಮೊಂದಿಗೆ ಹೋಲಿಸಿ ನೋಡಿಕೊಂಡು ನಮ್ಮನ್ನು ಸರಿಪಡಿಸಿಕೊಳ್ಳೋಣ.
ಕೂಷ್ಯನು ಆದೇಶಿಸಿದ ಕೆಲಸವನ್ನು ಮಾಡುವ ವ್ಯಕ್ತಿ:
ಹೇಗೆಂದರೆ, ಯೋವಾಬನಿಂದ ನೀನು ಹೋಗಿ ನೋಡಿದ್ದನ್ನು ರಾಜನಿಗೆ ತಿಳಿಸು ಎಂಬ ಆಜ್ಞೆ ಬಂದಕೂಡಲೇ ಬಹು ತ್ವರಿತವಾಗಿ ಕಾರ್ಯ ನಿರ್ವಹಿಸಿದ್ದನ್ನು ನಾವು ಓದುತ್ತೇವೆ. ನನಗೆ ಸೇವೆ ಮಾಡಲು ಆಸೆ. ಆದರೆ ಕೆಲಸ ಬಿಡಲು ಸಾಧ್ಯವಿಲ್ಲ. ಪಾರ್ಟ್ ಟೈಂ ಸೇವೆ ಮಾಡಿ ದೇವರ ಆಜ್ಞೆಯಲ್ಲಿ ನನ್ನ ಪಾತ್ರವನ್ನು ನೆರವೇರಿಸಲು ಬಯಸುತ್ತೇನೆ ಎಂದು ಭಾವಿಸಬಹುದು. ನೀವು ಕೂಷ್ಯನಂತೆ ಓಡಿ ರಾಜನ ಸ್ಥಾನದಲ್ಲಿರುವವರಿಗೆ ಸುವಾರ್ತೆ ಸಾರಲು ಸಾಧ್ಯ. ಯೇಸುವಿನ ಆಜ್ಞೆಗಳನ್ನು ಸರಿಯಾಗಿ ಮಾಡಿ, ಕೆಲಸದ ಸ್ಥಳದಲ್ಲಿ ಸಾಕ್ಷಿಯಾಗಿದ್ದು ಆತ್ಮಗಳ ಆದಾಯ ಮಾಡುವ ಕೆಲಸವನ್ನು ಮಾಡಲು ದೇವರು ನಿಮಗೆ ಕೃಪೆ ತೋರಿಸಲಿ.
ಕೂಷ್ಯನು ನಿಧಾನವಾಗಿ ಓಡಿದರು:
ನಾವು ಕೆಲಸಮಾಡುವ ಸ್ಥಳವಾಗಿರಬಹುದು, ಸೇವೆಯ ಹಾದಿಯಾಗಿರಬಹುದು, ಏನೇ ಇರಲಿ, ನಿಮಗೆ ಬರಬೇಕಾದ ಕೆಲವು ಉನ್ನತಿಗಳು ವಿಳಂಬವಾಗಬಹುದು. ಅದಕ್ಕಾಗಿ ಆತುರಪಟ್ಟು ನಿಧಾನವಿಲ್ಲದೇ ವರ್ತಿಸಿ ಇತರರೊಂದಿಗೆ ನಮ್ಮನ್ನು ಹೋಲಿಸಿಕೊಂಡು ನಮ್ಮ ಸಮಾಧಾನವನ್ನು ಕಳೆದುಕೊಳ್ಳದೇ ಇರುವುದಕ್ಕಾಗಿ ನಾವು ಕರೆಯಲ್ಪಟ್ಟಿದ್ದೇವೆ.
ಕೂಷ್ಯನು ವ್ಯವಸ್ಥಿತವಾಗಿ ತಿಳಿಸುತ್ತಾರೆ:
ಅವರು ಯುದ್ಧಭೂಮಿಯ ಘಟನೆಗಳನ್ನು ವ್ಯವಸ್ಥಿತವಾಗಿ ಮತ್ತು ಸ್ಪಷ್ಟವಾಗಿ ಒತ್ತಿ ಹೇಳುತ್ತಾರೆ. ನಾವು ಸಹ ದೇವರ ಸಮ್ಮುಖದಲ್ಲಿ ಕಾದಿದ್ದು ಸ್ಪಷ್ಟವಾದ ಮಾತುಗಳನ್ನು ಜನರಿಗೆ ಸುಲಭವಾಗಿ ಅರ್ಥವಾಗುವಂತೆ ತಿಳಿಸುವುದಕ್ಕಾಗಿಯೇ ಕರೆಯಲ್ಪಟ್ಟಿದ್ದೇವೆ.
ನಾಲ್ಕನೆಯದಾಗಿ, ಕೂಷ್ಯನು ಮಾಡಿದ ಕೃತ್ಯವು ರಾಜನನ್ನೇ ವಿಚಲಿತಗೊಳಿಸಿತು. ಹೌದು, ದೇವರು ನಮಗೆ ನೀಡಿದ ಜವಾಬ್ದಾರಿಯು ಉನ್ನತ ಸ್ಥಾನದಲ್ಲಿರುವವರನ್ನೂ ಸಹ ಸರಿಪಡಿಸಿ ದೇವರ ಪ್ರೀತಿಯನ್ನು ಅರಿಯುವಂತೆ ಮಾಡಲು ಸಾಧ್ಯ.
ಪ್ರಿಯರೇ! ಮೇಲೆ ಹೇಳಲ್ಪಟ್ಟ ಕೂಷ್ಯನ ನಾಲ್ಕು ಗುಣಲಕ್ಷಣಗಳೂ ನಮ್ಮಲ್ಲಿ ಕಾಣಲ್ಪಡುತ್ತಿದೆಯಾ? ಇಲ್ಲವಾ? ಎಂದು ಇಂದೇ ನಮ್ಮನ್ನು ನಾವು ನಿಧಾನಿಸಿ ತಿಳಿದುಕೊಳ್ಳೋಣ. ನಮ್ಮನ್ನು ಉಪಯೋಗಿಸಲು ಕರ್ತನು ಸಿದ್ಧವಾಗಿದ್ದಾರೆ. ನಾನು, ನೀವು ಸಿದ್ಧವಾ?
- Mrs. ತವಮಣಿ ವೈರವೇಲ್.
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಜನರು ಯೇಸುವಿನ ಪ್ರೀತಿಯನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482