Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ
Share:

By Village Missionary Movement

Monday, 09-Oct-2023

ಧೈನಂದಿನ ಧ್ಯಾನ(Kannada) – 10.10.2023

 

ಕಾಡು

 

"…ಅದರ ಅರಣ್ಯವನ್ನು ಏದೆನ್‌ ಹಾಗೆಯೂ ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು" - ಯೆಶಾಯ 51:3

 

ಜೀವನದಲ್ಲಿ ಅರಣ್ಯ ಎಂಬುದು ಯಾರೂ ಇಲ್ಲದ, ಏಕಾಂತವಾದ, ಕಠಿಣ ಪರಿಸ್ಥಿತಿಯಾಗಿದೆ. ಪ್ರತಿಯೊಬ್ಬರ ಜೀವನದಲ್ಲೂ ಇಂತಹ ಸನ್ನಿವೇಶ ಎದುರಾಗುತ್ತದೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಹೇಗಿರುತ್ತೇವೋ ಅದಕ್ಕೆ ತಕ್ಕಂತೆ ನಮ್ಮ ಜೀವನವು ಮುಂದುವರಿಯುತ್ತದೆ. ಇದರಲ್ಲಿ ಗುಣುಗುಟ್ಟಿ, ಏನಾದರೂ ಸ್ವಂತವಾಗಿ ಮಾಡಿಬಿಡೋಣ ಎಂದು ಪ್ರಯತ್ನಿಸಿದರೆ ಕುಗ್ಗಿಹೋಗುತ್ತಾರೆ. ಅನೇಕ ಜನರು ಈ ಪರಿಸ್ಥಿತಿಯನ್ನು ಜಯಿಸಲು ಸಾಧ್ಯವಾಗದೆ ತಮ್ಮ ಜೀವನವನ್ನು ಕೊನೆಗೊಳಿಸಿ ನರಕಕ್ಕೆ ಹೋಗುತ್ತಾರೆ. ಒಂದು ವಿಷಯವನ್ನು ನೆನಪಿಟ್ಟುಕೊಳ್ಳಿ, ಎತ್ತರಕ್ಕೆ ಹೋಗಲು ತರಬೇತಿ ನೀಡಲು, ಉನ್ನತಕ್ಕೇರಿಸಲು ಇದಕ್ಕಾಗಿಯೇ ಅರಣ್ಯವು ಬರುತ್ತದೆ.

 

ದಾವೀದನು ಅರಸನಾಗಿ ಹೆಚ್ಚಿಸಲ್ಪಡಲು ಅರಣ್ಯದಲ್ಲಿ ಅವರು ಪಡೆದಿದ್ದ ಅನುಭವವೇ ಸಹಾಯ ಮಾಡಿತು. ಗಣ್ಯ ಮಿಲಿಟರಿ ಅಕಾಡೆಮಿಗಳಲ್ಲಿ ಅವರ ಸಹೋದರರು ಪಡೆದಿದ್ದ ಕಠಿಣ ತರಬೇತಿಯು ಸಹಾಯ ಮಾಡಲಿಲ್ಲ. ಏಕೆಂದರೆ ಮಾನವ ಸಹಾಯವಿಲ್ಲದ ಅರಣ್ಯದಲ್ಲಿ ಕರ್ತನನ್ನು ಹಾಡಿ ಸ್ತುತಿಸಿ, ಕಠಿಣ ಪರಿಸ್ಥಿತಿಗಳನ್ನು ಜಯಿಸಿ ಬದುಕಲು ತರಬೇತಿ ಪಡೆದಿದ್ದರು. ಹಾಗರಳು, ಅರಣ್ಯದಲ್ಲಿ ನನ್ನನ್ನು ನೋಡುವ ದೇವರು ಎಂದಳು. ಅಬ್ರಹಾಮನು, ಯೆಹೋವ ಯೀರೆ ಅಂದನು. ಅದರಂತೆ ನೀವೂ ಸಹ ದೇವರನ್ನು ಸವಿಯಲು ಸಾಧ್ಯ. ಈ ಪರಿಸ್ಥಿತಿಯಲ್ಲಿ ಕರ್ತನನ್ನು ದೃಷ್ಟಿಸಿ ನೋಡುವುದಾದರೆ, ನಮ್ಮ ಪರಿಸ್ಥಿತಿಗೆ ಅನುಗುಣವಾಗಿ ತನ್ನನ್ನು ಬಹಿರಂಗಪಡಿಸಿಕೊಂಡು ಕಾರ್ಯ ಮಾಡುತ್ತಾರೆ. ನಾವು ಹೀಗೆ ಆತನನ್ನು ಗಟ್ಟಿಯಾಗಿ ಹಿಡಿದುಕೊಳ್ಳುವಾಗ ಅರಣ್ಯವೂ ಸಹ ದೇವರ ಉದ್ಯಾನದಂತಿರುತ್ತದೆ. ಕರ್ತನ ತೋಟದಲ್ಲಿ ಆದಾಮ ಮತ್ತು ಹವ್ವಳು ದೇವರೊಂದಿಗೆ ನಡೆದಂತೆ ನೀವು ಸಹ ನಡೆಯಬಹುದು. ಶೀಘ್ರದಲ್ಲೇ ಅರಣ್ಯವು ಹಾದುಹೋಗುತ್ತದೆ. ಕಾನಾನ್ ಬಂದು ಬಿಡುತ್ತದೆ.

 

ಅರಣ್ಯವು ಉನ್ನತಿಯ ಜನ್ಮಸ್ಥಳ ಎಂಬುದನ್ನು ಮರೆತು ಹೋಗಬೇಡಿ. ನೀವು ಈ ರೀತಿಯ ಅನುಭವದಲ್ಲಿದ್ದರೆ, ನಿಮ್ಮನ್ನು ನೀವು ನೋಡಿ ಹೇಳಬೇಕಾದದ್ದು, "ಉನ್ನತಿಗೆ ತರಬೇತಿ ಕರ್ತನನ್ನು ನೋಡು ಸುತ್ತಲೂ ನೋಡಬೇಡ ಅವರೇ ರೂಪಿಸುತ್ತಾರೆ" ಎಂದು! ಮೋಶೆಯನ್ನು ದೊಡ್ಡ ನಾಯಕನನ್ನಾಗಿ ರೂಪಿಸಿದ್ದೂ ಅರಣ್ಯದಲ್ಲಿಯೇ. ಅಷ್ಟೇ ಏಕೆ ಕ್ರಿಸ್ತನನ್ನು ಸೇವೆಯಲ್ಲಿ ಉಪಯೋಗಿಸಲ್ಪಡುವುದಕ್ಕಿಂತ ಮೊದಲು ಆತ್ಮನು ಅವರನ್ನು ಅಡವಿಗೆ ಒಯ್ದನು. ಉನ್ನತಿಯನ್ನು ಬಯಸಲಿಲ್ಲವೆಂದರೆ ತಾಳ್ಮೆಯನ್ನು ಎತ್ತಿ ಬಿಸಾಡಿರಿ. ಬದಲಾಗಿ ಗುಣುಗುಟ್ಟುವಿಕೆಯನ್ನು ಎತ್ತಿ ಬಿಸಾಡಿ ತಾಳ್ಮೆಯನ್ನನುಸರಿಸಿ ದೀರ್ಘಶಾಂತಿಯುಳ್ಳ ಕರ್ತನ ಕಡೆಗೆ ನೋಡಿದರೆ, ಅರಣ್ಯದ ದಿನಗಳು ಕಡಿಮೆಯಾಗುತ್ತದೆ. ಉನ್ನತಿಯು ಬಹಳ ಖಚಿತವಾಗಿರುತ್ತದೆ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಹಸಿದವರಿಗೆ ಆಹಾರ ನೀಡುವ ಯೋಜನೆಗೆ ಸಹಾಯ ಮಾಡುವ ಅನೇಕ ಕುಟುಂಬಗಳನ್ನು ದೇವರು ಎಬ್ಬಿಸಿಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet