Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.10.2023 (Kids Special)
Share:

By Village Missionary Movement

Sunday, 08-Oct-2023

ಧೈನಂದಿನ ಧ್ಯಾನ(Kannada) – 08.10.2023 (Kids Special)

 

ಎಲ್ಲವು ಒಳ್ಳೇದಕ್ಕಾಗಿಯೇ 

 

"... ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ." - ರೋಮಾ 8:28

 

ಅದೊಂದು ಸುಂದರವಾದ ಪಟ್ಟಣ. ಆ ಪಟ್ಟಣದ ಬಳಿಯಲ್ಲಿ ಬಹಳ ಮೆಟ್ಟಿಲುಗಳಿಂದ ಕೂಡಿದ ಒಂದು ಕೊಳವಿತ್ತು. ಅಲ್ಲಿ ಎಲ್ಲರಿಂದಲೂ ನಿರ್ಲಕ್ಷ್ಯವಾಗಿ ಎಣಿಸಲ್ಪಟ್ಟ ಒಂದು ಪರಮ ಬಡವನು ವಾಸಿಸುತ್ತಿದ್ದನು. ಅವನ ವಾಸಸ್ಥಾನವೇ ಆ ಕೊಳದ ತೀರವಾಗಿತ್ತು. 

 

ಒಂದು ದಿನ ಆ ಪಟ್ಟಣದ ರಾಜನ ಒಬ್ಬಳೇ ಮಗಳಿಗೆ ಜನ್ಮದಿನ ಬಂತು. ಆ ದಿನದಂದು ರಾಜನು ಆ ಊರಿನ ಜನರಿಗೆ ಔತಣವನ್ನು ಏರ್ಪಡಿಸಿದನು. ರಾಜನ ಮನೆ ಊಟ ಅಂದ್ರೆ ಹೇಳಬೇಕಾ. ಮಟನ್ ಬಿರಿಯಾನಿ, ಚಿಕನ್, ಪಾಯಸ ಹೀಗೆ ಭರ್ಜರಿಯಾಗಿ ನಡೆಯಿತು. ಎಲ್ಲರು ಸಾಲಿನಲ್ಲಿ ನಿಂತು ತೆಗೆದುಕೊಂಡರು. ಈ ಬಡ ಮನುಷ್ಯನೂ ಹೋಗಿ ನಿಂತನು. ಆದರೆ ಎಲ್ಲರೂ ಇವನನ್ನು ಹೀನವಾಗಿ ನೋಡಿ ದೂರ ತಳ್ಳಿದರು. ಸಾಯಂಕಾಲದವರೆಗೆ ಕಾಯುತ್ತಿದ್ದ ಅವನಿಗೆ ಮೋಸವಾಯಿತು. ಊಟ ಸಿಗಲಿಲ್ಲ. ಬೇಸರದಿಂದ ಆ ಕೊಳದ ತೀರದಲ್ಲಿ ಕುಳಿತು ಆಕಾಶವನ್ನು ನೋಡುತ್ತಾ, "ದೇವರೇ ನಾನು ಪರಮ ಬಡವನಾಗಿ ಹುಟ್ಟಿದ್ದು ನಾನು ಮಾಡಿದ ಪಾಪವಾ? ಏಕೆ ನನ್ನನ್ನು ಇಷ್ಟೊಂದು ಶೋಧಿಸುತ್ತಿದ್ದೀರ. ಎಲ್ಲರೂ ರಾಜನ ಮನೆಯ ಊಟವನ್ನು ತಿನ್ನುತ್ತಿದ್ದಾರೆ. ನಾನು ಮಾತ್ರ ಹೀಗೆ" . . . ಎಂದು ಪ್ರಲಾಪಿಸುತ್ತಿದ್ದನು.

 

ಆ ಸಮಯದಲ್ಲಿ ರಾಜನು ಔತಣವನ್ನು ಮುಗಿಸಿ ಮನೆಗೆ ಹಿಂದಿರುಗುತ್ತಿರುವಾಗ ಕೊಳದ ತೀರದಲ್ಲಿ ಒಣಗಿದ ಶರೀರದೊಂದಿಗೆ ಕುಳಿತುಕೊಂಡಿದ್ದ ಆ ಮನುಷ್ಯನನ್ನು ನೋಡಿದರು. ತಕ್ಷಣವೇ ರಥದಿಂದ ಇಳಿದು ಆ ಮನುಷ್ಯನ ಹೆಗಲಿನ ಮೇಲೆ ಕೈ ಹಾಕಿ, "ಊಟ ಮಾಡಿದೆಯಾ?" ಎಂದು ಕೇಳಿದರು. ತಕ್ಷಣವೇ ಅವನು ರಾಜನೆಂದು ತಿಳಿಯದೆ ಎಲ್ಲರೂ ರಾಜನು ಏರ್ಪಡಿಸಿದ್ದ ಔತಣದಲ್ಲಿ ತಿಂದರು. ಆದರೆ ನನಗೆ ಅದಕ್ಕೂ ಯೋಗ್ಯತೆ ಇಲ್ಲ ಎಂದು ಹೇಳುತ್ತಲೇ ನೀರಿನ ಕಡೆಗೆ ನೋಡಿದನು. ನೀರೊಳಗೆ ರಾಜನ ಮುಖ ಕಂಡ ಕೂಡಲೇ ಹಿಂತಿರುಗಿ ನೋಡಿ, "ರಾಜ ಕ್ಷಮಿಸಿಬಿಡಿ. ನಿಮಗೆ ಕೊಡಬೇಕಾದ ಗೌರವವನ್ನು ಕೊಡಲಿಲ್ಲ" ಎಂದನು. ತಕ್ಷಣವೇ ರಾಜ, "ಪರವಾಗಿಲ್ಲ ನನ್ನ ಮಗಳ ಜನ್ಮದಿನದಂದು ಯಾರೂ ಹಸಿವಿನಿಂದ ಇರಬಾರದು" ಎಂದು ಹೇಳಿ ಅವನನ್ನು ರಥದಲ್ಲಿ ಕೂರಿಸಿಕೊಂಡು ತನ್ನ ಮನೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ, ಹೊಸ ಬಟ್ಟೆ ಕೊಟ್ಟು ಅವರೊಂದಿಗೆ ಕೂರಿಸಿಕೊಂಡು ಊಟ ಮಾಡಿಸಿ ಕೆಲವು ಚಿನ್ನದ ನಾಣ್ಯಗಳನ್ನು ಕೊಟ್ಟು ಇವುಗಳನ್ನು ಇಟ್ಟುಕೊಂಡು ನಿನ್ನ ಜೀವನಸಾಗಿಸು ಎಂದು ಹೇಳಿ ಅವನನ್ನು ಕಳುಹಿಸಿದನು. ಅವನು ಸಹ ಕಣ್ಣೀರಿನಿಂದ ಕೃತಜ್ಞತೆ ಹೇಳಿ ಬಿಟ್ಟು ಹೊರಟುಹೋದನು.

 

ತಮ್ಮ, ತಂಗಿ ನಿನ್ನನ್ನೂ ನಿನ್ನ ಕುಟುಂಬವನ್ನು ಯಾರಾದರೂ ಹೀಗೆ ನಿರ್ಲಕ್ಷ್ಯವಾಗಿ ಹೀನವಾಗಿ ನೋಡುತ್ತಿದ್ದಾರಾ? ಚಿಂತಿಸಬೇಡ ಈ ಬಡ ಮನುಷ್ಯನನ್ನು ಹೆಚ್ಚಿಸಿದ ಯೇಸಪ್ಪ ನಿನ್ನನ್ನೂ ಅವರ ಕಣ್ಣುಗಳ ಮುಂದೆ ಹೆಚ್ಚಿಸುತ್ತಾರೆ. ಯೇಸಪ್ಪ ನಮ್ಮ ಜೀವನದಲ್ಲಿ ಏನೇ ಮಾಡಿದರೂ ಅದನ್ನು ಹಿತಕ್ಕಾಗಿಯೇ ಮಾಡುತ್ತಾರೆ ಎಂಬುದನ್ನು ಮರೆತುಬಿಡಬೇಡ. ಓಕೆ ನಾ ಪುಟಾಣಿಗಳೇ!

- Mrs .ಸಾರಾಳ್ ಸುಭಾಷ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet