Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.10.2023
Share:

By Village Missionary Movement

Friday, 06-Oct-2023

ಧೈನಂದಿನ ಧ್ಯಾನ(Kannada) – 07.10.2023

 

ಹಿತಕ್ಕಾಗಿ 

 

"…ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ” - ರೋಮಾ 8:28

 

ಎಷ್ಟೋ ಯೇಸುವಿನ ಭಕ್ತರು, ಕ್ರಿಸ್ತನನ್ನು ಅಂಗೀಕರಿಸಿದವರು, ದೇವರನ್ನು ಪ್ರೀತಿಸುವ ಚಿಕ್ಕವರು ಮತ್ತು ದೊಡ್ಡವರು, ಎಲ್ಲರಿಗೂ ಜೀವನದಲ್ಲಿ ಕಷ್ಟಗಳು, ನಷ್ಟಗಳು, ಸಂಕಟಗಳು, ಉಪದ್ರವಗಳು ಬರುತ್ತಲೇ ಇವೆ. ಇವೆಲ್ಲವೂ ಮುಂದಿನ ದಿನಗಳ ಹಿತಕ್ಕಾಗಿಯೇ ಆಗಿರುತ್ತದೆ.

 

ಡಿ.ಎಲ್. ಮೂಡಿ ಎಂಬ ಉಜ್ಜೀವನದ ಬೋಧಕರ ಮನೆ, ಚರ್ಚ್ ಮತ್ತು ಚಿಕಾಗೋದಲ್ಲಿನ ಇವರ ಎಲ್ಲಾ ಆಸ್ತಿಗಳು ಬೆಂಕಿಬಿದ್ದು ಸುಟ್ಟುಹೋದವು. ತುಂಬಾ ಕುಗ್ಗಿಹೋದ D.L. ಮೂಡಿ, ಮನುಷ್ಯರ ಬಳಿ ಸಹಾಯ ಕೋರಲು ಬಯಸಿದರು. ಆದರೆ ದೇವರು ನಿನಗೆ ನಾನಿಲ್ಲವೋ? ಎಂದು ಕೇಳಿದ ಕೂಡಲೇ, ಮನುಷ್ಯರನ್ನು ನಂಬದೇ ದೇವರನ್ನು ಒರಗಿಕೊಂಡದ್ದರಿಂದ ಸೇವೆಯ ಹಾದಿಯಲ್ಲಿ ಮಹತ್ತರವಾದ ಆಶೀರ್ವಾದಗಳನ್ನು ಕಂಡುಕೊಂಡರು. 

 

ವಿಲಿಯಂ ಕೇರಿ ಭಾರತದ ಶ್ರೇಷ್ಠ ಮಿಷನರಿಯಾಗಿದ್ದರು. ಇವರ ಕಠಿಣ ಪರಿಶ್ರಮದ ಫಲವಾಗಿ ಬಂದ ಭಾಷಾಂತರಗಳು ಸತ್ಯವೇದಗಳಾಗಿ ಹೊರಬರಲು ಸಿದ್ಧವಾಗಿದ್ದ ಸಮಯದಲ್ಲಿ ಎಲ್ಲವು ಸುಟ್ಟು ಬೂದಿಯಾದವು. ಮುದ್ರಣಾ ಯಂತ್ರವು ಸಹ ಸುಟ್ಟು ಕರಕಲಾಯಿತು. ಹೆಂಡತಿಯೂ ಹುಚ್ಚಿಯಾದರು. ಯಾವುದಕ್ಕೂ ಕುಗ್ಗಿಹೋಗದೆ ತಮ್ಮ ಸೇವೆಯಲ್ಲಿ ಸೋಲಿಲ್ಲದೆ ಮುನ್ನಡೆದರು. 18 ಭಾಷೆಗಳಲ್ಲಿ ತರಬೇತಿ ಹೊಂದಿ ಬೈಬಲ್‌, ಆಧ್ಯಾತ್ಮಿಕ ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ತಯಾರಿಸಲು ಕರ್ತನು ಅವರಿಗೆ ಸಹಾಯ ಮಾಡಿದರು.

 

ಸತ್ಯವೇದದಲ್ಲಿಯೂ ಭಕ್ತನಾದ ಯೋಬನು ಎಲ್ಲವನ್ನು ಕಳೆದುಕೊಂಡು ಎಲ್ಲಾ ಮುಗಿಯಿತು ಎಂಬ ಸ್ಥಿತಿಗೆ ಬಂದರು. ಆದರೂ ನನ್ನ ವಿಮೋಚಕನು ಜೀವಂತವಾಗಿದ್ದಾರೆ ಎಂಬ ನಂಬಿಕೆಯ ಅರಿಕೆಮಾಡಿದರು. ಕೊನೆಗೆ ಎರಡು ಪಟ್ಟು ಆಶೀರ್ವಾದವನ್ನು ಪಡೆದರು. ನೊವೊವಿು ಬೇತ್ಲೆಹೇವಿುನಲ್ಲಿ ಬರ, ಎಲ್ಲವನ್ನು ಕಳೆದುಕೊಂಡ ಸ್ಥಿತಿ ಏನು ಮಾಡಬೇಕೆಂದು ತಿಳಿಯದೇ ಮೋವಾಬ್ ದೇಶಕ್ಕೆ ಹೋದರು. ದೇವರು ಇಲ್ಲಾದರೂ ಒಂದು ದಾರಿ ತೋರಿಸುತ್ತಾರೆ ಎಂದು ನಂಬಿದ್ದಳು. ನಂತರ ಇಲ್ಲಿಯೂ ಸಹ ಗಂಡ ಮತ್ತು ತನ್ನ ಮಕ್ಕಳನ್ನು ಕಳೆದುಕೊಂಡು ಒಂದು ಸೊಸೆಯೊಂದಿಗೆ ಎರಡನೇ ಬಾರಿ ಕತ್ತಲೆಯ ಸ್ಥಿತಿಯಲ್ಲಿ ಬರುತ್ತಾಳೆ. ಆದರೂ ಏನಾದರೂ ಒಂದು ಒಳ್ಳೆಯದು ಸಂಭವಿಸುತ್ತದೆ ಎಂದು ನಂಬಿದ್ದರು, ಕಾರ್ಯಮಾಡಿದರು, ಒಳ್ಳೆಯದು ಸಂಭವಿಸಿತು. ತನ್ನ ಸೊಸೆಯ ಮಗನನ್ನು ತನ್ನ ಮಗನಂತೆ ಬೆಳೆಸುವ ಭಾಗ್ಯವನ್ನು ಪಡೆದಳು.

 

ಪ್ರಿಯರೇ! ದೇವರ ಚಿತ್ತಕ್ಕನುಸಾರವಾಗಿ ತಮ್ಮನ್ನು ಸಮರ್ಪಿಸಿಕೊಂಡವರು ಮತ್ತು ಆತನಲ್ಲಿ ನಂಬಿಕೆ ಇಟ್ಟವರ ಜೀವನದಲ್ಲಿ ಎಂದಿಗೂ ಕೆಟ್ಟ ಕಾರ್ಯಗಳು ಕೊನೆಯಾಗಿರಲಿಲ್ಲ. ಎಷ್ಟೇ ಜನರು ತಂತ್ರೋಪಾಯಗಳನ್ನು ಮಾಡಿದರೂ ಎಲ್ಲವನ್ನು ಕಳೆದುಕೊಂಡರೂ, ಸರ್ವಶಕ್ತನು ಎಲ್ಲವನ್ನೂ ಒಳ್ಳೆಯದಾಗಿ ಮಾರ್ಪಡಿಸುತ್ತಾರೆ.

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳನ್ನು ತೆಗೆದುಕೊಡುವ ವ್ಯಕ್ತಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet