By Village Missionary Movement
Thursday, 05-Oct-2023ಧೈನಂದಿನ ಧ್ಯಾನ(Kannada) – 06.10.2023
ಒಳ್ಳೆಯ ವರ
"ಪತ್ನಿ ಯನ್ನು ದೊರಕಿಸಿಕೊಂಡವನು ಒಳ್ಳೇದನ್ನು ಸಂಪಾದಿಸಿ ದವನಾಗಿ ಕರ್ತನ ದಯೆಯನ್ನು ಹೊಂದುತ್ತಾನೆ" - ಜ್ಞಾನೋಕ್ತಿ 18:22
ಉತ್ತಮ ಶಿಕ್ಷಣ, ಉತ್ತಮ ಉದ್ಯೋಗ ಮತ್ತು ಉತ್ತಮ ಜೀವನ ಸಂಗಾತಿಯನ್ನು ಪಡೆಯುವುದು ಅನೇಕ ಹದಿಹರೆಯದವರ ಕನಸು. “ಒಳ್ಳೆಯ ಹೆಂಡತಿಸಿಗುವುದೆಲ್ಲಾ ದೇವರು ಕೊಡುವ ವರ” ಎಂಬ ನಾಣ್ಣುಡಿಯೂ ಇದೆ.ಒಳ್ಳೆಯ ಹೆಂಡತಿ ಸಿಗುವುದು ಮತ್ತು ಸಂತೋಷದ ಕುಟುಂಬ ಜೀವನವನ್ನು ನಡೆಸುವುದು ದೇವರ ಆಶೀರ್ವಾದವೇ.
ದೇವರು ಅದಕ್ಕಾಗಿಯೇ ಮದುವೆಯ ಬಂಧವನ್ನು ಸೃಷ್ಟಿಸಿದರು. ನಾವು ಒಬ್ಬರಿಗೊಬ್ಬರು ಜೊತೆಯಾಗಿ ಜೀವಿಸಿ ದೇವರ ಆಜ್ಞೆಗಳಿಗೆ ವಿಧೇಯರಾಗಿ ಜೀವಿಸುವಾಗ, ದೇವರು ಅದ್ಭುತವಾದ ಮಕ್ಕಳ ಭಾಗ್ಯವನ್ನು ನೀಡಿ ಕುಟುಂಬ ಎಂಬ ಉದ್ಯಾನವನವನ್ನು ರಚಿಸುತ್ತಾರೆ. ದೇವರು ಆದಾಮನನ್ನು ಸೃಷ್ಟಿಸಿ ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ ಎಂದು ಅವನಿಗೆ ಜೊತೆಯಾಗಿರುವಂತೆ ಪಕ್ಕೆಲುಬಿನಿಂದ ಹವ್ವಳನ್ನು ಅವನಿಗೆ ಸರಿಬೀಳುವ ಸಹಕಾರಿಯಾಗಿ ಏರ್ಪಡಿಸಿ ಕೊಟ್ಟರು. ಅಬ್ರಹಾಮನಿಗೆ ಸೂಕ್ತವಾದ ಹೆಂಡತಿಯಾಗಿ ಸಾರಳನ್ನು ಮತ್ತು ಇಸಾಕನಿಗೆ ಜೊತೆಯಾಗಿ ರೆಬೆಕ್ಕಳನ್ನು ಸರಿಯಾದ ಸಮಯದಲ್ಲಿ ಇಬ್ಬರನ್ನೂ ಜೊತೆಮಾಡಿದರು.
ಒಬ್ಬನಿಗೆ ಒಬ್ಬಳನ್ನು, ಗಂಡು ಮತ್ತು ಹೆಣ್ಣಾಗಿ ಸೃಷ್ಟಿಸಿ ದೈವಭಕ್ತಿಯುಳ್ಳ ಸಂತತಿಗಳನ್ನು ಪಡೆದು ಭೂಮಿಯನ್ನು ತುಂಬುವುದೇ ದೇವರ ಯೋಜನೆಯಾಗಿದೆ. ಆದರೆ ಇಂದಿನ ದಿನಗಳಲ್ಲಿ ಹದಿಹರೆಯದವರಲ್ಲಿ “ಮದುವೆ” ಎಂಬ ಪವಿತ್ರ ಜೀವನದ ಒಪ್ಪಂದದ ಅಗತ್ಯವಿಲ್ಲ ಮತ್ತು ನಮ್ಮ ಕಣ್ಣು ಮತ್ತು ಮನಸ್ಸು ಬಯಸಿದ ಜೀವನವನ್ನು ನಾವು ನಡೆಸಬಹುದು ಎಂಬ ಕಲ್ಪನೆಯು ಬೆಳೆಯುತ್ತಿದೆ. ಇದು ಸಾವಿನ ಕೂಪ, ಮೋಸಗಾರ ಸೈತಾನನ ವಿಷಯಲೋಲುಪತೆಯ ಮನಸ್ಸು. "ವಿವಾಹವು ಎಲ್ಲಾದರಲ್ಲಿ ಗೌರವವಾದದ್ದು" (ಇಬ್ರಿಯ 13:4) ಹೌದು, ವಿವಾಹ ಬಂಧವನ್ನು ಮೀರಿದ ಹೊರಗಿನ ಎಲ್ಲಾ ಸಂಬಂಧಗಳು ದೇವರ ದೃಷ್ಟಿಯಲ್ಲಿ ವ್ಯಭಿಚಾರ ಮತ್ತು ವೇಶ್ಯಾವಾಟಿಕೆಯಾಗಿದೆ. "Living together" ಎಂಬ ವಂಚನೆಯ ಬಲೆಯಲ್ಲಿ ಸಿಕ್ಕಿಕೊಳ್ಳದೆ ತಪ್ಪಿಸಿಕೋ ಕಣ್ಮಣಿ ಮಗುವೇ!
ಆದ್ದರಿಂದ ಪ್ರಿಯ ಹದಿಹರೆಯದ ಮಕ್ಕಳೇ! ನಿಮ್ಮ ವೈವಾಹಿಕ ಜೀವನದ ಬಗ್ಗೆ ಯೋಚಿಸಿ, ಸರಿಯಾದ ಸಮಯದಲ್ಲಿ ನಿಮಗೆ ಸೂಕ್ತವಾದ ಜೀವನ ಸಂಗಾತಿಯನ್ನು ದೇವರು ನೀಡುವಂತೆ ದೇವರನ್ನು ಕೇಳಿಕೊಳ್ಳಿ ಮತ್ತು ಅವರಿಗೆ ಒಪ್ಪಿಸಿಬಿಡಿ. "ಹೊಳೆಯುವುದೆಲ್ಲ ಚಿನ್ನವಲ್ಲ" ಎಂಬಂತೆ ಕಣ್ಣಿಗೆ ಹಿತವೆನಿಸುವದೆಲ್ಲ ನಿಮ್ಮ ಬದುಕಿಗೆ ಸೂಕ್ತವಲ್ಲ. ವಿವಾಹ ಬಂಧವಿಲ್ಲದೆ ಜೀವಿಸಲು ನಿಮ್ಮನ್ನು ಯಾರಿಗೂ ಒಪ್ಪಿಸಬೇಡಿ. ಇದರಿಂದಾಗಿ ನೀವು ನಿತ್ಯಜೀವನವನ್ನು ಕಳೆದುಕೊಳ್ಳುತ್ತೀರಿ. ದೇವರು ತಾನೇ ನಿಮಗೆ ತನ್ನ ಒಳ್ಳೆಯ ವರವಾಗಿರುವ ಸೂಕ್ತವಾದ ಸಂಗಾತಿಯನ್ನು ಕೊಟ್ಟು ನಿಮ್ಮನ್ನು ಆಶೀರ್ವದಿಸಲಿ.
- Mrs. ಭುವನಾ ಧನಪಾಲನ್
ಪ್ರಾರ್ಥನಾ ಅಂಶ:
ಆಮೆನ್ ವಿಲೇಜ್ ಟಿವಿ ಸ್ಯಾಟಲೈಟ್ ಚಾನೆಲ್ ಆಗಿ ಮಾರ್ಪಡಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482