Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.10.2023
Share:

By Village Missionary Movement

Monday, 02-Oct-2023

ಧೈನಂದಿನ ಧ್ಯಾನ(Kannada) – 02.10.2023

 

ಉಪ್ಪಾಗಿ, ಬೆಳಕಾಗಿ 

 

"ನೀವು ಭೂವಿುಗೆ ಉಪ್ಪಾಗಿದ್ದೀರಿ…" - ಮತ್ತಾಯ 5:13

 

ಪರ್ವತದ ಮೇಲಿನ ಪ್ರಸಂಗ ಎಂಬುದು 111 ವಾಕ್ಯಗಳನ್ನು ಒಳಗೊಂಡಿರುವ ಮೂರು ಅಧ್ಯಾಯಗಳಾಗಿವೆ. ಪರ್ವತ ಪ್ರಸಂಗದ ಸಂದೇಶದ ಮೂಲಕ ಯೇಸುವನ್ನು ಅಂಗೀಕರಿಸಿದವರು ಅನೇಕರು ಇದ್ದಾರೆ. ಇಂದು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣಾರ್ಥ ದಿನ. ಕರ್ತನಾದ ಯೇಸುಕ್ರಿಸ್ತನ ಪರ್ವತ ಪ್ರಸಂಗದ ಸಂದೇಶದಲ್ಲಿ ಗಾಂಧೀಜಿಯವರು ಸಹ ಬಹಳ ಆಕರ್ಷಿಸಲ್ಪಟ್ಟಿದ್ದರು.

 

ಪರಿಶುದ್ಧ ಗ್ರಂಥವನ್ನು ಅಧಿಕವಾಗಿ ಪ್ರೀತಿಸಲು ಮತ್ತು ಅದನ್ನು ಓದಲು ಗಾಂಧೀಜಿಯವರು ಇಷ್ಟಪಡುತ್ತಿದ್ದರು. ಆದರೆ ಗಾಂಧೀಜಿಯವರು ರಕ್ಷಣೆಯನ್ನು ಮತ್ತು ಮಾನಸಾಂತರವನ್ನು ಬಯಸದೇ ಇದ್ದರು. ಇದನ್ನು ನೋಡಿದ ಅವರ ಸ್ನೇಹಿತ ಮತ್ತು ಭಾರತದಲ್ಲಿ ಸೇವೆ ಸಲ್ಲಿಸಿದ ಹಿರಿಯ ಮಿಷನರಿ ನುಸಾ. ಸ್ಟಾನ್ಲಿ ಜೋನ್ಸ್ ಗಾಂಧಿಯವರನ್ನು ನೋಡಿ ಈ ರೀತಿಯಾಗಿ ಕೇಳಿದರು. "ನೀವು ಕ್ರಿಸ್ತನನ್ನು ಏಕೆ ತಿರಸ್ಕರಿಸುತ್ತೀರಿ?" ಎಂದು ಕೇಳಿದರು.

 

"ನಾನು ಯೇಸುವನ್ನು ತಿರಸ್ಕರಿಸುವುದಿಲ್ಲ. ನಾನು ಯೇಸುವನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಆತನನ್ನು ಅನುಸರಿಸುವ ಕ್ರೈಸ್ತರು ಅವರ ಬೋಧನೆಗಳ ಪ್ರಕಾರ ಬದುಕುತ್ತಿಲ್ಲವೇ? ಹಾಗಾಗಿ ನಾನು ಏಕೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಬೇಕು?" ಎಂದು ಉತ್ತರಿಸಿದರು. ಸ್ಟಾನ್ಲಿ ಜೋನ್ಸ್ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕ್ರೈಸ್ತರ ನಡುವೆ ತನಗೆ ಸಂಭವಿಸಿದ ಕಹಿ ಅನುಭವಗಳನ್ನು ಅವರೊಂದಿಗೆ ಹಂಚಿಕೊಂಡರು. ಯೇಸು ಒಳ್ಳೆಯವರೇ. ಆದರೆ ಅವರ ಅನುಯಾಯಿಗಳು ವಿರೋಧಾತ್ಮಕರಾಗಿದ್ದಾರೆ ಎಂದು ಅವರು ಸ್ಪಷ್ಟವಾಗಿ ಉತ್ತರಿಸಿದರು.

 

ಮತ್ತಾಯ 5 ನೇ ಅಧ್ಯಾಯದಲ್ಲಿ 13 ಮತ್ತು 14 ನೇ ವಚನಗಳಲ್ಲಿ ಈ ರೀತಿಯಾಗಿ ಓದುತ್ತೇವೆ. ನೀವು ಭೂಮಿಗೆ ಉಪ್ಪಾಗಿದ್ದೀರಿ. ನೀವು ಲೋಕಕ್ಕೆ ಬೆಳಕಾಗಿದ್ದೀರಿ ಎಂದು ಓದುತ್ತೇವೆ. ಉಪ್ಪಾಗಿ ಬೆಳಕಾಗಿ ಸಾಕ್ಷಿ ಜೀವನ ನಡೆಸಬೇಕಾದ ಕ್ರೈಸ್ತರ ತಪ್ಪು ನಡುವಳಿಕೆಯಿಂದ ಯೇಸುವನ್ನು ಬಿಟ್ಟು ಹೋಗುವವರು ಅನೇಕರಿದ್ದಾರೆ. ಅವುಗಳಲ್ಲಿ ಇಂದು ಓದಿದ ಗಾಂಧೀಜಿಯವರು ಕೂಡ ಒಬ್ಬರು. ಈ ಸಂದೇಶವನ್ನು ಓದುತ್ತಿರುವ ಆತ್ಮೀಯ ಕ್ರೈಸ್ತರೇ! ನಮ್ಮ ಪ್ರತಿಯೊಂದು ನಡತೆಯು ಒಬ್ಬರನ್ನು ಕ್ರಿಸ್ತನ ಕಡೆಗೆ ಕರೆದೊಯ್ಯಲು ಅಥವಾ ಅವರನ್ನು ಕ್ರಿಸ್ತನಿಂದ ದೂರ ಕೊಂಡೊಯ್ಯಲು ಕಾರಣವಾಗಿದೆ. ಆದುದರಿಂದ ನಾವು ವಾಕ್ಯವನ್ನು ಕೇಳುವವರಾಗಿ ಮಾತ್ರವಲ್ಲದೆ ಅದರಂತೆ ಮಾಡುವವರಾಗಿಯೂ ಇರೋಣ. ದೇವರು ಕೃಪೆ ತೋರಿಸಲಿ. 

- Bro. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ 

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆ ಇದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş