Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.10.2023 (Kids Special)
Share:

By Village Missionary Movement

Sunday, 01-Oct-2023

ಧೈನಂದಿನ ಧ್ಯಾನ(Kannada) – 01.10.2023 (Kids Special)

 

ಬಿಂಗೊ

 

"ಒಳ್ಳೇದನ್ನು ಮಾಡುವವನು ದೇವರಿಂದ ಹುಟ್ಟಿದವನಾಗಿದ್ದಾನೆ. ಕೆಟ್ಟದ್ದನ್ನು ಮಾಡುವವನು ದೇವರನ್ನು ಕಂಡವನಲ್ಲ…" - 3 ಯೋಹಾನ 1:11

 

ಹಲೋ ಪುಟಾಣಿಗಳೇ How are you? School life ಹೇಗೆ ಹೋಗ್ತಿದೆ? Home work ಬರೆಯೋದು, ಜಾಲಿಯಾಗಿ ಆಟ ಆಡೋದು ಹೀಗೆ ಸೂಪರ್-ಆಗಿ ಇದೆಯಲ್ವಾ? ಸರಿ, ನಿಮಗೆ ಆನೆ ಎಂದರೆ ತುಂಬಾ ಇಷ್ಟತಾನೆ. ಸೊಂಡಿಲನ್ನು ಮೇಲಕ್ಕೆತ್ತಿ, ಕಿವಿ ಹಿಗ್ಗಿಸಿ, ತಲೆ ಅಲ್ಲಾಡಿಸಿ ನಡೆಯುವುದನ್ನು ನೋಡುವುದೇ ಸೊಗಸು! ಸರಿ ಇಂದು ನಾವು ಆನೆಯ ಕಥೆಯನ್ನು ಕೇಳೋಣ್ವಾ?

 

ಬಿಂಗೊ ಎಂಬ ಹೆಸರಿನ ಮರಿ ಆನೆ ಮತ್ತು ಅದರ ತಾಯಿ ಕಾಡಿನಲ್ಲಿ ಬಹಳ ಸಂತೋಷದಿಂದ ವಾಸಿಸುತ್ತಿದ್ದವು. ಆನೆಗಳಿಗೆ ಕಬ್ಬು ಅಂದ್ರೆ ಇಷ್ಟ ಅಲ್ವಾ. ಪುಟಾಣಿಗಳೇ, ನಿಮಗೂ ಇಷ್ಟವಾದ ಆಹಾರ ಇದೆ ಅಲ್ವಾ? ಆನೆಯ ತಾಯಿ, "ಬಿಂಗೊಮರಿ, ಕಬ್ಬು ಹೆಚ್ಚಾಗಿ ಜೋಡಿಸಿರುವ ಸ್ಥಳಕ್ಕೆ ನೀನು ಹೋಗಬಾರದು, ಕೆಳಗೆ ಗುಂಡಿ ತೋಡಿ, ಮೇಲೆ ಕಬ್ಬುಗಳನ್ನು ಜೋಡಿಸಿ ನಮ್ಮನ್ನು ಮೋಸಗೊಳಿಸಿ ಅಪಹರಿಸಿ ಬಿಡುತ್ತಾರೆ. ಆದ್ದರಿಂದ ನೀನು ಎಚ್ಚರವಾಗಿರಬೇಕು" ಎಂದು ಹೇಳಿದರು. ಒಂದು ದಿನ, ಬಿಂಗೊ ತನ್ನ ಸ್ನೇಹಿತರೊಂದಿಗೆ ಜಾಲಿಯಾಗಿ ಆಟವಾಡುತ್ತಿದ್ದಾಗ, ದೂರದ ಸ್ಥಳದಲ್ಲಿ ಬಹಳಷ್ಟು ಕಬ್ಬುಗಳನ್ನು ಪೇರಿಸಿಟ್ಟರುವುದನ್ನು ಆ ಬಿಂಗೊ ನೋಡಿದ ಕೂಡಲೇ ಕಬ್ಬು ತಿನ್ನಲು ಆಸೆಯಾಯಿತು. ಸ್ನೇಹಿತರಿಗೂ ಹೇಳದೆ ಒಂಟಿಯಾಗಿ ನಡೆಯಲು ಪ್ರಾರಂಭಿಸಿತು. ಏನು ಪುಟಾಣಿಗಳೇ, ನೀವು ಕೂಡ ಅಮ್ಮ ಅಪ್ಪನಿಗೆ ಹೇಳದೆ ಒಂಟಿಯಾಗಿ ಎಲ್ಲಿಗೂ ಹೋಗಬಾರದು. ಅಪಾಯ ಸಂಭವಿಸುತ್ತದೆ. ನಿಮಗೆ ಪರಿಚಯ ಇಲ್ಲದವರು ಚಾಕ್ಲೇಟ್‌ ಕೊಟ್ಟರೂ ತೆಗೆದುಕೊಳ್ಳಬಾರದು. ಒಬ್ಬರೇ ಕರೆದು ಮಾತನಾಡಿದರೂ ಹೋಗಬಾರದು. ಅಪಹರಿಸಿಕೊಂಡು ಹೋಗಿಬಿಡ್ತಾರೆ. ಏನು ಪುಟಾಣಿಗಳೇ ಅರ್ಥ ಆಯ್ತಾ?ಸರಿ ಈ ಬಿಂಗೋಗೆ ಏನಾಯ್ತು ಅಂತ ನೋಡೋಣ್ವಾ? ಕಬ್ಬಿನ ಬದಿಗೆ ಹೋದ ಬಿಂಗೋಗೆ ಬಹಳ ಸಂತೋಷ, ಇವತ್ತು ಆಸೆ ತೀರುವವರೆಗೂ ಕಬ್ಬು ತಿಂದುಬಿಡಬೇಕು ಎಂದು ಅಂದುಕೊಳ್ಳುತ್ತಲೇ ತಿನ್ನಲು ಪ್ರಾರಂಭಿಸಿತು. ಇದ್ದಕ್ಕಿದ್ದಂತೆ ದೊಪ್ಪನೆ ಬಿತ್ತು ನೋಡಿ. ಬಿಂಗೊ ತಾಯಿ ಹೇಳಿದ್ದಂತೆ ಗುಂಡಿ ತೋಡಿದ್ದದರಿಂದ ಮೋಸ ಹೋಯಿತು. ಸರ್ಕಸ್ ನವನು ಬಂದು ನಿಂತ. ಒಳ್ಳೆ ಬೇಟೆ ಸಿಕ್ಕಿತು ಎಂದು ತನ್ನ ಗಾಡಿಯಲ್ಲಿ ಅದನ್ನು ತೆಗೆದುಕೊಂಡು ಹೋದ. ಬಿಂಗೋಗೆ ತುಂಬಾ ಅಳು ಬಂತು. ನಮ್ಮನ್ನು ಎಲ್ಲಿ ಕರೆದುಕೊಂಡು ಹೋಗುತ್ತಿದ್ದಾರೋ ಎಂಬ ಭಯ. ತಾಯಿ ಹೇಳಿದ ಮಾತನ್ನು ಕೇಳಲಿಲ್ಲವೇ! Friends ಗೂ ಹೇಳದೆ ಒಂಟಿಯಾಗಿ ಬಂದುಬಿಟ್ಟೆನಲ್ಲಾ ಎಂದು ಯೋಚಿಸಿತು. ಸರ್ಕಸ್ ನವನು ಬಿಂಗೋವನ್ನು ಸರಪಳಿಯಿಂದ ಬಂಧಿಸಿ ಹಲವು ವಿಧವಾದ ವಿದ್ಯೆಗಳನ್ನು ಪ್ರದರ್ಶಿಸಲು ತರಬೇತಿ ಕೊಟ್ಟು ಅಭ್ಯಾಸ ಮಾಡಿಸಿದನು. ಕಾಡಿನಲ್ಲಿ ಸ್ವತಂತ್ರವಾಗಿ ಬದುಕುತ್ತಿದ್ದ ಬಿಂಗೊ, ಸರ್ಕಸ್‌ ನವನಿಗೆ ದಾಸನಾದದ್ದನ್ನು ನೆನೆಸಿ ತುಂಬಾ ವೇದನೆಪಟ್ಟಿತು.

 

ಏನು ಮುದ್ದು ಪುಟಾಣಿಯೇ! ಬಿಂಗೊ ಪರಿಸ್ಥಿತಿ ನೋಡಿದರೆ ತುಂಬಾ ದುಃಖ ಆಗ್ತಿದೆ ಅಲ್ವಾ! ತನ್ನ ತಾಯಿಗೆ ಅವಿಧೇಯನಾದ ಬಿಂಗೊ ಸರ್ಕಸ್ ನವನಿಗೆ ಗುಲಾಮನಾದಂತೆಯೇ ಯೇಸಪ್ಪನಿಗೆ ಅವಿಧೇಯರಾದ ಮಕ್ಕಳು ಸೈತಾನನಿಗೆ ಗುಲಾಮರಾಗುತ್ತಾರೆ. ಬಹಳ ಎಚ್ಚರವಾಗಿರಿ ಪುಟಾಣಿಗಳೇ. 

- Mrs. ಬ್ಯೂಲಾ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al