Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.09.2023
Share:

By Village Missionary Movement

Friday, 29-Sep-2023

ಧೈನಂದಿನ ಧ್ಯಾನ(Kannada) – 29.09.2023

 

ಸತ್ಯವೇದವು ಜೀವಂತವಾಗಿದೆ

 

"ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ” – ಲೂಕ 21:33

 

1. ತಲೆ ತಲೆಮಾರುಗಳಾಗಿ ಜನರು ಬದುಕುತ್ತಿದ್ದಾರೆ ಮತ್ತು ಸಾಯುತ್ತಿದ್ದಾರೆ, ಆದರೆ ಸತ್ಯವೇದವು ಸದಾ ಜೀವಂತವಾಗಿದೆ.

 

2. ರಾಜ್ಯಗಳು ಎದ್ದಿವೆ ಮತ್ತು ರಾಜ್ಯಗಳು ಕುಸಿದಿವೆ, ಆದರೆ ಸತ್ಯವೇದವು ಜೀವಂತವಾಗಿದೆ. 

 

3. ಸತ್ಯವೇದವನ್ನು ಹರಿದು ಹಾಕಿದರು, ಸುಟ್ಟುಹಾಕಿದರು, ಅವಮಾನಿಸಿದರು, ಆದರೂ ಸತ್ಯವೇದವು ಜೀವಂತವಾಗಿದೆ.

 

4. ಅರ್ಹತೆ ಇಲ್ಲದ್ದು ಎಂದು ಅಪಹಾಸ್ಯಕಾರರಿಂದ ತಿರಸ್ಕಾರ ಹೊಂದಿದೆ, ಆದರೂ ಸತ್ಯವೇದವು ಜೀವಂತವಾಗಿದೆ.

 

5. ಎಷ್ಟೋ ಆಧ್ಯಾತ್ಮಿಕ ವಾದಿಗಳು ಕಾಣಲ್ಪಟ್ಟರೂ ಮರೆಯಾದರು, ಆದರೂ ಸತ್ಯವೇದವು ಜೀವಂತವಾಗಿದೆ.

 

6. ಸತ್ಯವೇದವು ನಮ್ಮ ಕಾಲಿಗೆ ದೀಪವಾಗಿಯೂ, ದಾರಿಗೆ ಬೆಳಕಾಗಿಯು ಇಂದಿಗೂ ಜೀವಂತವಾಗಿದೆ.

 

7. ಯೌವನಸ್ಥರಿಗೆ ಮಾರ್ಗದರ್ಶಕವಾಗಿ ಮತ್ತು ಹಿರಿಯರಿಗೆ ಆದರಣೆಯಾಗಿ ಇಂದಿಗೂ ಸತ್ಯವೇದವು ಜೀವಂತವಾಗಿದೆ. 

 

8. ಆಧ್ಯಾತ್ಮಿಕವಾಗಿ ಹಸಿದವರಿಗೆ ಆಹಾರವಾಗಿ ಮತ್ತು ಬಾಯಾರಿದವರಿಗೆ ಜೀವಜಲವಾಗಿ ಇಂದಿಗೂ ಸತ್ಯವೇದವು ಜೀವಿಸುತ್ತಿದೆ. 

 

9. ಕತ್ತಲೆಯಲ್ಲಿರುವವರಿಗೆ ಬೆಳಕಾಗಿ ಮತ್ತು ಪಾಪಿಗಳಿಗೆ ರಕ್ಷಣೆಯನ್ನು ಕೊಡುವಂಥದ್ದಾಗಿ ಇಂದಿಗೂ ಸತ್ಯವೇದವು ಜೀವಿಸುತ್ತಿದೆ. 

 

10. ವಿಶ್ವಾಸಿಗಳಿಗೆ ಕೃಪೆಯನ್ನು ಕೊಡುವಂಥದ್ದಾಗಿ, ನಾವು ಪರಲೋಕಕ್ಕೆ ಹೋಗಲು ಮಾರ್ಗವಾಗಿ ಇಂದಿಗೂ ಸತ್ಯವೇದವು ಜೀವಿಸುತ್ತಿದೆ. 

 

ಹೌದು, ಕಾಲಗಳು ಬದಲಾಗಬಹುದು, ಪರಿಸ್ಥಿತಿಗಳು ಬದಲಾಗಬಹುದು, ಆದರೆ ಸತ್ಯವೇದವು ಬದಲಾಗುವುದಿಲ್ಲ ಅಳಿದುಹೋಗುವುದಿಲ್ಲ; ಸದಾಕಾಲವೂ ಜೀವಂತವಾಗಿರುತ್ತದೆ. ಆದರೆ ಕಡೇ ದಿವಸಗಳಲ್ಲಿ ದೇವರ ವಾಕ್ಯವು ಸಿಗದ ಕ್ಷಾಮಕಾಲವು ಬರಲಿದೆ. ಆದ್ದರಿಂದ ಎಲ್ಲಾ ತರದ ನಿಂದೆಯನ್ನೂ ವಿಸರ್ಜಿಸಿ ಹಸುಮಕ್ಕಳಂತೆ ಪಾರಮಾರ್ಥಿಕವಾದ ಶುದ್ಧ ಹಾಲೆಂಬ ವಾಕ್ಯವನ್ನು ಆಸೆಯಿಂದ ಓದೋಣ. ಸಾಕು ಎಂದೆಣಿಸದ ಈ ರುಚಿಕರವಾದ ದೇವರ ವಾಕ್ಯವೆಂಬ ಆಹಾರವನ್ನು ತಿನ್ನೋಣ, ಸವಿಯೋಣ; ದಿನವಿಡೀ ಧ್ಯಾನಿಸಿ ಕರ್ತನಲ್ಲಿ ಬೆಳೆಯೋಣ. ಪರಲೋಕದಲ್ಲಿ ವಾಕ್ಯವಾಗಿರುವ ಯೇಸು ಕ್ರಿಸ್ತನೊಂದಿಗೆ ಶಾಶ್ವತವಾಗಿ ಜೀವಿಸೋಣ. ಹಲ್ಲೇಲೂಯ!

- Mr. ಭಾಕ್ಯನಾಥನ್

 

ಪ್ರಾರ್ಥನಾ ಅಂಶ:

ಕಾರ್ಯಸ್ಥಳಗಳಲ್ಲಿ ಕಾಣಿಕೆಯನ್ನು ಸಂಗ್ರಹಿಸಿ ಕಳುಹಿಸುವ ಅನೇಕ ಸ್ವಯಂಸೇವಕರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş holiganbet casibom bets10 extrabet royalbet süperbetin casibom giriş betcio jojobet giriş casibom milanobet piabellacasino betpas bahiscasino atlasbet betpas casinoroyal bahiscasino ngsbahis betplay holiganbet jojobet casibom holiganbet jojobet casibom vaycasino romabet