By Village Missionary Movement
Wednesday, 27-Sep-2023ಧೈನಂದಿನ ಧ್ಯಾನ(Kannada) – 27.09.2023
ಯಾರು ಉಜ್ಜೀವನದ ವೀರ?
"ಆತನ ನಿಮಿತ್ತ ಎಲ್ಲವನ್ನು ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ" - ಫಿಲಿಪ್ಪಿ. 3:8
ಭಾರತ ದೇಶದ ಉಜ್ಜೀವನಕ್ಕಾಗಿ ದೇವರು ಯಾವ ರೀತಿಯ ಜನರನ್ನು ಹುಡುಕುತ್ತಿದ್ದಾರೆ ಎಂಬುದನ್ನು ನೋಡೋಣವಾ?
* ಪ್ರಾರ್ಥನೆಯೇ ಅವರ ಮುಖ್ಯ ಕರ್ತವ್ಯವಾಗಿರಬೇಕು.
* ಆತ್ಮಗಳ ಸಂಪಾದನೆಯೇ ಅವರ ಗುರಿಯಾಗಿರಬೇಕು.
* ದೇವರ ಸನ್ನಿಧಾನವೇ ಅವರ ಆನಂದವಾಗಿರಬೇಕು.
* ದೇವರ ಸೇವೆಯೇ ಅವರ ಹೊರೆಯಾಗಿರಬೇಕು.
* ಕಠಿಣ ಪರಿಶ್ರಮವೇ ಅವರ ಇಷ್ಟವಾಗಿರಬೇಕು.
* ಕರ್ತನಿಗಾಗಿ ಪಡುವ ಪಾಡುಗಳು ಅವರಿಗೆ ಸಂತೋಷವಾಗಿರಬೇಕು.
* ಲೋಕವು ಅವರಿಗೆ ಅರಣ್ಯವಾಗಿರಬೇಕು.
* ಸುಖಭೋಗಗಳು ಅವರಿಗೆ ಕಸವಾಗಿರಬೇಕು.
* ಪ್ರಾಮಾಣಿಕತೆ ಅವರೊಂದಿಗೇ ಹುಟ್ಟಿದಂತಿರಬೇಕು.
* ಬೂಟಾಟಿಕೆ ಅವರಿಗೆ ಅಸಹ್ಯವಾಗಿರಬೇಕು.
* ಪಾಪ ಅವರಿಗೆ ಕಹಿಯಾಗಿರಬೇಕು.
* ಕ್ಷಮಿಸುವ ಗುಣ ಅವರ ಸ್ನೇಹಿತನಾಗಿರಬೇಕು.
* ಸತ್ಯವೇದ ವಾಕ್ಯಗಳು ಅವರ ಆಹಾರವಾಗಿರಬೇಕು.
* ಹಣದ ಆಸೆ ಅವರ ಶತ್ರುವಾಗಿರಬೇಕು.
* ಜಾತಿ ಭೇದಗಳು ಅವರಿಗೆ ವಾಂತಿಯಾಗಿರಬೇಕು.
* ಪ್ರೀತಿ ಅವರ ಜೀವನದಲ್ಲಿ ಜೀವಬುಗ್ಗೆಯಾಗಿರಬೇಕು.
* ಆತ್ಮದ ಅಭಿಷೇಕ ಅವರ ಬಯಕೆಯಾಗಿರಬೇಕು.
* ಉಪದೇಶದಲ್ಲಿ, ಅವರು ವಂಚನೆಯಿಲ್ಲದ ಪೌಲನಂತೆ ಇರಬೇಕು.
* ಉಪವಾಸ ಅವರ ಪ್ರಾಣಸ್ನೇಹಿತನಾಗಿರಬೇಕು.
* ದೇವರ ಚಿತ್ತವನ್ನು ಮಾಡುವುದು ಔತಣವಾಗಿರಬೇಕು.
* ಪರಿಶುದ್ಧತೆಯೇ ಅವರ ಅಲಂಕಾರವಾಗಿರಬೇಕು.
* ಪರಲೋಕವೇ ಅವರ ಆಸ್ತಿಯಾಗಿರಬೇಕು.
ಅಂತಿಮವಾಗಿ, ನರಕವನ್ನು ಅಲುಗಾಡಿಸಿ, ಪಾತಾಳವನ್ನು ನಡುಗಿಸಿ, ಪರಲೋಕವನ್ನು ಉಲ್ಲಾಸಗೊಳಿಸಿ, ಪರಮತಂದೆಯನ್ನು ಹೊಗಳುವಂತೆ ಮಾಡಿ, ದೇಶವನ್ನೇ ದೇವರ ಕಡೆಗೆ ತಿರುಗಿಸುವವನೇ ಉಜ್ಜೀವನದ ವೀರ! ಉಜ್ಜೀವನದ ವೀರನ ಬಳಿ ಮಾತಿಗಿಂತ ಪ್ರಾರ್ಥನೆಯೇ ಹೆಚ್ಚಾಗಿರುತ್ತದೆ. ತರ್ಕಗಳಿಗಿಂತ ಪರಿಣಾಮವೇ ಹೆಚ್ಚಾಗಿರುತ್ತದೆ. ಯೋಜನೆಗಳಿಗಿಂತ ಕ್ರಿಯೆಯೇ ಹೆಚ್ಚಾಗಿರುತ್ತದೆ. ಉಜ್ಜೀವನದ ವೀರನು ಬೆಂಕಿಕಡ್ಡಿಯೇ . . . ಆದರೆ ಅವನು ಹಚ್ಚುವುದು ಒಲೆಯಲ್ಲ . . . ಬಾಂಬ್!
- ಆರಿಸಲ್ಪಟ್ಟದ್ದು
ಪ್ರಾರ್ಥನಾ ಅಂಶ:
ನಮ್ಮ ಪ್ರತಿಯೊಂದು ಪತ್ರಿಕೆ ಸೇವೆಗಳಲ್ಲೂ ದೇವರ ನಡೆಸುವಿಕೆಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482