By Village Missionary Movement
Sunday, 24-Sep-2023ಧೈನಂದಿನ ಧ್ಯಾನ(Kannada) – 24.09.2023 (Kids Special)
ಮೋಹನನ ಮನ ಪರಿವರ್ತನೆ
"ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ . . . ಅದು ದೇವರ ವರವೇ" - ಎಫೆಸ 2:8
ಪ್ರೀತಿಯ ಪುಟಾಣಿಗಳೇ, ಹೇಗಿದ್ದೀರಿ? ಪೂರ್ಣ ವರ್ಷದ ಪರೀಕ್ಷೆಗಳು ಹತ್ತಿರದಲ್ಲಿದೆಯಲ್ಲವೇ? ಚೆನ್ನಾಗಿ ಓದಿ. ಸರೀನ . . ವಿದ್ಯಾಭ್ಯಾಸ ಮಾಡುವುದರಲ್ಲಿ, ಶಿಕ್ಷಕರಿಗೆ ವಿಧೇಯರಾಗುವುದರಲ್ಲಿ, ಪರೀಕ್ಷೆ ಬರೆಯುವುದರಲ್ಲಿ ಹೀಗೆ ಎಲ್ಲಾ ವಿಷಯಗಳಲ್ಲಿ ಯಥಾರ್ಥವಾಗಿರಿ. ಸರೀನಾ? ನಿನ್ನ ಯಥಾರ್ಥತೆಯನ್ನು ನೋಡಿ ಯೇಸಪ್ಪ ನಿನ್ನನ್ನು ಆಶೀರ್ವದಿಸಿ ಅಭಿವೃದ್ಧಿಪಡಿಸುತ್ತಾರೆ. ಸರಿ, ಕಥೆ ಕೇಳೋಣ್ವಾ?
ಮೋಹನ್ ಅಮ್ಮನಿಗೆ ತುಂಬಾ ಮುದ್ದು ಮಗ. ಅವನು ಕೇಳೋದೆಲ್ಲಾ ತೆಗೆದು ಕೊಡುತ್ತಿದ್ದರು. ಆದ್ದರಿಂದ ಬಾಲ್ಯದಿಂದಲೇ ಅಮ್ಮನನ್ನು, ಯಾಮಾರಿಸಿ ಯಾಮಾರಿಸಿ ತನ್ನ ಕಾರ್ಯವನ್ನು ಸಾಧಿಸಿಕೊಳ್ಳುತ್ತಿದ್ದ. ಅವನು ಸ್ವಲ್ಪ ಬೆಳೆದು ಶಾಲೆಗೆ ಹೋಗಲು ಪ್ರಾರಂಭಿಸಿದನು. ಶಾಲೆಯಲ್ಲಿ ಪೆನ್ನು, ಪೆನ್ಸಿಲ್, ರಬ್ಬರ್ ಕದಿಯಲು ಆರಂಭಿಸಿದ. ಅವನು 5 ನೇ ತರಗತಿಗೆ ಬಂದನು. ಇತರರ ಬ್ಯಾಗ್ ನಲ್ಲಿದ್ದ 5 ಮತ್ತು 10 ರೂ.ಗಳನ್ನು ತೆಗೆದುಕೊಂಡು ತನಗೆ ಬೇಕಾದ ತಿಂಡಿಗಳನ್ನು ತೆಗೆದುಕೊಂಡು ತಿನ್ನುತ್ತಿದ್ದ. ತಾಯಿ ಕೇಳಿದರೆ ಕಳ್ಳತನ ಬಚ್ಚಿಡಲು ಸುಳ್ಳು ಹೇಳುತ್ತಿದ್ದ. 8ನೇ ತರಗತಿಗೆ ಬರುವಷ್ಟರಲ್ಲಿ ಅನೇಕ ಕೆಟ್ಟ ಸ್ನೇಹಿತರು ಸಿಕ್ಕಿದರು. ಅವರ ಮುಂದೆ ಕೊಚ್ಚಿಕೊಳ್ಳೋಕೆ ಮನೆಯಿಂದ 50, 100 ರೂಪಾಯಿ ಎತ್ತಿಕೊಳ್ಳಲು ಪ್ರಾರಂಭಿಸಿದ. ತಾಯಿಗೆ ತಿಳಿದು ಕೇಳಿದರೆ ಅಮ್ಮನನ್ನು ಗದರಿಸಿ ಜಗಳ ಮಾಡುತ್ತಿದ್ದ. ಇವನು ದಿನವೂ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಬೆಳೆಯುತ್ತಾ ಬೆಳೆಯುತ್ತಾ ಕೆಟ್ಟ ಚಟಗಳೂ ಬೆಳೆದವು. ಅಮ್ಮ ಎಷ್ಟೇ ತಿದ್ದಲು ಪ್ರಯತ್ನಿಸಿದರೂ ವಿಫಲರಾದರು.
11ನೇ ತರಗತಿಯಲ್ಲಿ ಓದುತ್ತಿದ್ದ ಮೋಹನ್ ಕಳ್ಳರ ತಂಡಕ್ಕೆ ಸೇರಿಕೊಂಡು ಸೆಲ್ ಫೋನ್ ಗಳನ್ನು ಕದ್ದು ಮಾರಾಟ ಮಾಡಲು ಆರಂಭಿಸಿದ್ದ. ಒಂದು ದಿನ ಗ್ಯಾಂಗ್ ಮೋಹನನನ್ನು ಪೊಲೀಸರಿಗೆ ಒಪ್ಪಿಸಿ ಪರಾರಿಯಾಯಿತು. ಮೋಹನ್ ಜೈಲಿಗೆ ಹೋದನು. ಅಲ್ಲಿ ಅವರಿಂದ ಹೊಡೆಸಿಕೊಳ್ಳುವುದು, ಒದೆಸಿಕೊಳ್ಳುವುದು, ಹಸಿವು ಮತ್ತು ದಾಹ ಇಂತಹ ಅನೇಕ ಸಂಕಟಗಳನ್ನು ಅನುಭವಿಸಿದನು. ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲವೇ, ಯೌವನದಲ್ಲಿ ನನ್ನ ಹೆಸರು ಹಾಳಾಯಿತೇ! ನನ್ನ ಭವಿಷ್ಯತ್ ಏನಾಗುತ್ತದೋ ಎಂದು ತುಂಬಾ ದುಃಖಿಸುತ್ತಿದ್ದನು. ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಏಕಾಂತದಲ್ಲಿ ಕಣ್ಣೀರು ಹಾಕುತ್ತಾ ಯಾರಾದರೂ ಬಂದು ನನ್ನನ್ನು ನೋಡುತ್ತಾರ ಎಂದು ಹಂಬಲಿಸುತ್ತಿದ್ದನು. ಆ ದಿನವೇ ಅವನ ತಾಯಿ ಒಂದು ಸೇವಕರೊಂದಿಗೆ ಬಂದರು. ಕಣ್ಣೀರಿನಿಂದ ತಾಯಿಯನ್ನು ನೋಡಿದನು. ವಿದ್ಯಾಭ್ಯಾಸವಿಲ್ಲದ ನನ್ನ ತಾಯಿಗೆ ಎಷ್ಟು ಬಾರಿ ಮೋಸ ಮಾಡಿದ್ದೇನೆ ಎಂದು ಮನದೊಳಗೆ ವೇದನೆಪಟ್ಟನು. ಬೋಧಕರು ದೇವರು ಕೊಡುವ ಪಾಪಕ್ಷಮಾಪಣೆಯ ಬಗ್ಗೆ ಮತ್ತು ರಕ್ಷಣೆಯ ಬಗ್ಗೆ ಮಾತನಾಡಿದರು. ದೇವರು ಅವನ ಹೃದಯವನ್ನು ತೆರೆದರು. ಕೆಲವೇ ದಿನಗಳಲ್ಲಿ ಬಿಡುಗಡೆ ಪಡೆದು ಒಳ್ಳೆಯ ಮನುಷ್ಯನಾಗಿ ಜೀವಿಸಿದನು.
ಪುಟ್ಟ ತಮ್ಮ ತಂಗಿ! ಮೋಹನ್ ಅಣ್ಣನ ಹಾಗೆ ನೀನು ಕೂಡ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಿದ್ದೀಯ? ನೀನು ಕದಿಯುವುದನ್ನು ಯಾರೂ ನೋಡಿಲ್ಲ ಎಂದು ಧೈರ್ಯವಾಗಿದ್ದೀಯ? ಒಂದು ದಿನ ನೀನು ಸಿಕ್ಕಿಬೀಳುತ್ತೀಯ. ಇಂದೇ ಮನತಿರುಗು. ಸುಳ್ಳು ಹೇಳುವುದು, ಕದಿಯುವುದು, ಕೆಟ್ಟ ಮಾತುಗಳನ್ನಾಡುವುದು ಮತ್ತು ಕಾಪಿ ಹೊಡಿಯುವುದು ಎಲ್ಲವೂ ಪಾಪವೇ. ಚಿಕ್ಕವಯಸ್ಸಿನಲ್ಲೇ ಇದನ್ನು ಬಿಟ್ಟು ಬಿಟ್ಟರೆ ನಿನ್ನ ಜೀವನ ಆಶೀರ್ವಾದವಾಗಿ ಮಾರ್ಪಡುತ್ತದೆ. ಇಲ್ಲದಿದ್ದರೆ ನಿನ್ನ ಒಳ್ಳೆಯ ಹೆಸರನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಇಂದೇ ಒಳ್ಳೆಯ ನಿರ್ಧಾರ ಮಾಡಿಬಿಡು, ಸರೀನಾ?
- Sis. ದೆಬೋರಾಳ್.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482