Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.03.2021
Share:

By Village Missionary Movement

Tuesday, 23-Mar-2021

ಧೈನಂದಿನ ಧ್ಯಾನ(Kannada) – 23.03.2021

ಬೆಳಕಾಗಿರೋಣ

"ನೀವು ಲೋಕಕ್ಕೆ ಬೆಳಕಾಗಿದ್ದೀರಿ..." - ಮತ್ತಾಯ 5:14

ವೈದ್ಯರ ತಪ್ಪಾದ ಚಿಕಿತ್ಸೆಯಿಂದ ಹುಟ್ಟಿ ಆರು ವಾರಗಳು ಮಾತ್ರವೇ ಆಗಿದ್ದ ಫ್ಯಾನ್ನಿ ಕ್ರೋಸ್ಬಿ (Fanny Crosby) ತನ್ನ ಎರಡೂ ಕಣ್ಣುಗಳಲ್ಲೂ ದೃಷ್ಟಿ ಕಳೆದುಕೊಳ್ಳಬೇಕಾದ ನಿರ್ಭಾಗ್ಯ ಪರಿಸ್ಥಿತಿ ಉಂಟಾಯಿತು. ಹೂವುಗಳನ್ನು ಅವುಗಳ ವಾಸನೆಯಿಂದಲೇ ಯಾವ ಹೂವು ಎಂದು ಹೇಳುವ ಬುದ್ಧಿಶಾಲಿಯಾಗಿದ್ದಳು. ಸತ್ಯವೇದದಲ್ಲಿ ಹಲವು ಭಾಗಗಳನ್ನು ಅವರ ಅಜ್ಜಿಯ ಸಹಾಯದಿಂದ ಬಾಯಿಪಾಠ ಮಾಡಿ ಕೊಂಡಿದ್ದಳು, ಅದು ಆತ್ಮೀಕ ಜೀವನದಲ್ಲಿ ಅಭಿವೃದ್ಧಿಯಾಗಲು ತುಂಬಾ ದೊಡ್ಡ ಸಹಾಯ ಮಾಡಿತು. ಇವರು ತನ್ನ 15ನೇ ವಯಸ್ಸಿನಲ್ಲಿ ಕಣ್ಣಿಲ್ಲದವರಿಗಾಗಿ ಇದ್ದ ಶಾಲೆಯಲ್ಲಿ ಸೇರಿ, ಸುಂದರವಾಗಿ ಶಾಲೆಯ ವಿದ್ಯಾಭ್ಯಾಸವನ್ನು ಮುಗಿಸಿ, ಅಲ್ಲೇ ಒಂದು ಸಮರ್ಪಣೆಯ ಶಿಕ್ಷಕಿಯಾಗಿ ಕೆಲಸ ಮಾಡಿದರು. ತನ್ನ ಜೀವನದ ಮೂಲಕ ದೇವರನಾಮವನ್ನು ಮಹಿಮೆ ಪಡಿಸಲು ಸಮರ್ಪಿಸಿಕೊಂಡ ಇವರು 8000-ಕ್ಕೂ ಹೆಚ್ಚು ಕ್ರಿಸ್ತನ ಹಾಡುಗಳನ್ನು ರಚಿಸಿ ಸಂಗೀತವನ್ನು ಹೊಂದಿಸಿ ಮೇಧಾವಿಯಾದರು. ಇವರು ಬರೆದ ಹಾಡುಗಳು ತಮಿಳಿನಲ್ಲಿ ಭಾಷಾಂತರ ಮಾಡಿ ಸಭೆಗಳಲ್ಲಿ ಇಂದಿನವರೆಗೂ ಹಾಡುತ್ತಾ ಬರುತ್ತಿದ್ದಾರೆ.ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡ ಇವರು  ಅನೇಕರಿಗೆ ಹಲವು ಸಹಾಯಗಳನ್ನು ಮಾಡಿ ಬೆಳಕಿನ ಮಗಳಾಗಿ ಜೀವಿಸಿದರು. ಇವರ ಹಾಡುಗಳ ಮೂಲಕ ಅನೇಕರು ಯೇಸುವಿನ ಬೆಳಕಿನ ಕಡೆಗೆ ಸೇರಿಸಲ್ಪಟ್ಟರು.

ಪರಿಶುದ್ಧ ಗ್ರಂಥದಲ್ಲಿ ಯೇಸುಕ್ರಿಸ್ತನು ಯೆರಿಕೋವಿಗೆ ಸಮೀಪವಾಗಿ ಬರುವಾಗ ಒಂದು ಕುರುಡನಿಗೆ ದೃಷ್ಟಿಯನ್ನು ಕೊಡುತ್ತಾರೆ.ಈ ಕುರುಡನು ದೇವರಿಂದ ದೃಷ್ಟಿಯನ್ನು ಹೊಂದಿಕೊಂಡ ಕೂಡಲೇ ತನ್ನ ಮನೆಗೆ ಕೂಡ ಹೋಗದೆ, ತನಗೆಂದು ಜೀವಿಸದೆ ಯೇಸುವಿನ ಹಿಂದೆ ಹೋಗಿ ಅವರಿಗಾಗಿ ಬೆಳಕಿನ ಮಗನಾಗಿ ಜೀವಿಸಲು ಪ್ರಾರಂಭಿಸಿದನು. ಇದನ್ನು ಕಂಡ ಜನರು ದೇವರನ್ನು ಹೊಗಳಿದರು.

ಹೌದು ಪ್ರಿಯರೇ! ಲೋಕವನ್ನು ತನ್ನ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲದ ಫ್ಯಾನ್ನಿ ಕ್ರೋಸ್ಬಿಯನ್ನು ಯೇಸು ಬೆಳಕಾಗಿ ಮಾರ್ಪಡಿಸಿದರು. ದಾರಿ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದ ಕುರುಡನ ಜೀವನವನ್ನು ಕಂಡು ಅನೇಕರು ಅವನೊಳಗಿದ್ದ ಬೆಳಕನ್ನು ನೋಡಿ ದೇವರನ್ನು ಮಹಿಮೆ ಪಡಿಸಿದರು. ಈ ಲೋಕದಲ್ಲಿ ಅನೇಕರು ಎಷ್ಟು ಮಾತ್ರವೂ ಯೇಸು ಎಂಬ ಬೆಳಕೇ ಇಲ್ಲದೆ ಜೀವಿಸುತ್ತಿದ್ದಾರೆ. ಪಾಪ, ಶಾಪ, ವ್ಯಾಧಿ, ಕಣ್ಣೀರು, ಹೋರಾಟಗಳು ಎಂಬ ಕತ್ತಲೆಯಲ್ಲಿ ದಿನದಿನವೂ ಸತ್ತು ಬದುಕುತ್ತಿದ್ದಾರೆ. ನಮ್ಮನ್ನು ಕತ್ತಲೆಯಿಂದ  ಬಿಡಿಸಿ ರಕ್ಷಣೆ ಎಂಬ ಬೆಳಕಿನ ಕಡೆಗೆ ತಿರುಗಿಸಿದ ಹಾಗೆ, ನಾವು ಅನೇಕರನ್ನು ಬೆಳಕಿನ ಕಡೆಗೆ ಕರೆತರೋಣ. ಅವರನ್ನು ಬೆಳಕಿನ ಮಕ್ಕಳಾಗಿ ಮಾರ್ಪಡಿಸೋಣ.ಹಲ್ಲೇಲೂಯ!
-    Mrs.ಶಕ್ತಿ ಶಂಕರ್ ರಾಜ್

ಪ್ರಾರ್ಥನಾ ಅಂಶ:-
ಒರಿಸ್ಸಾ ನಾರಾಯಣ ಪಟ್ಟಣದ ಭಾಗದ ಜವಾಬ್ದಾರಿಯನ್ನು ತೆಗೆದುಕೊಂಡು ಮುನ್ನಡೆಸುವ ಆತ್ಮೀಯ ನಾಯಕರುಗಳು ಎದ್ದೇಳಲು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al