Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.09.2023
Share:

By Village Missionary Movement

Saturday, 23-Sep-2023

ಧೈನಂದಿನ ಧ್ಯಾನ(Kannada) – 23.09.2023

 

ಮರಣದಿಂದ ಬಿಡಿಸುತ್ತದಾ?

 

"ಕೆಟ್ಟತನದ ಸಂಪತ್ತುಗಳು ಪ್ರಯೋಜನವಿಲ್ಲ; ನೀತಿಯು ಮರಣದಿಂದ ಬಿಡಿಸುತ್ತದೆ" - ಜ್ಞಾನೋಕ್ತಿ. 10:2

 

ಹಲವು ವರ್ಷಗಳ ಹಿಂದೆ ಬ್ರಿಟನ್‌ನಲ್ಲಿ ರುಡ್‌ಶೆಲ್ಡ್ ಎಂಬ ಶ್ರೀಮಂತ ವ್ಯಕ್ತಿ ವಾಸಿಸುತ್ತಿದ್ದರು. ಅವರು ನಮ್ಮ ಊಹೆಗೂ ನಿಲುಕದಷ್ಟು ಸಂಪತ್ತನ್ನು ಗಳಿಸಿದ್ದರು. ಅವರು ಬ್ರಿಟಿಷ್ ರಾಷ್ಟ್ರದ ಸರ್ಕಾರಿ ನಿರ್ವಹಣಾ ಸಂಸ್ಥೆಗೇನೆ ಹಣ ಕೊಟ್ಟು ಸಹಾಯ ಮಾಡಿದ್ದಾರೆ ಅಂದರೆ ನೋಡಿ! ಒಂದು ದಿನ ಅವರು ಬಹಳಷ್ಟು ಒಡವೆಗಳು, ಬೆಲೆಬಾಳುವ ರತ್ನಗಳು ಮತ್ತು ಹಣವನ್ನು ಶೇಖರಿಸಿ ಇಟ್ಟಿದ್ದ ತನ್ನ ಖಜಾನೆಯ ಕೋಣೆಯೊಳಗೆ ಹೋದರು. ಹಣವನ್ನು ಮತ್ತು ಚಿನ್ನಾಭರಣವನ್ನು ಬೆಲೆಬಾಳುವ ವಸ್ತುಗಳನ್ನು ಲೆಕ್ಕ ಹಾಕುತ್ತಿದ್ದರು. ಆಗ ಆ ಖಜಾನೆಯ ಬಾಗಿಲು ತಾನಾಗಿಯೇ ಮುಚ್ಚಿಕೊಂಡಿತು. ಅದನ್ನು ಒಳಗಿನಿಂದ ತೆರೆಯಲಾಗುವುದಿಲ್ಲ. ಬಾಗಿಲು ತೆರೆಯಲು ಹರಸಾಹಸ ಪಟ್ಟರು. ಎಷ್ಟೇ ಪ್ರಯತ್ನಿಸಿದರೂ ಬಾಗಿಲು ತೆರೆಯಲಾಗಲಿಲ್ಲ. ಕಿರುಚಿ ನೋಡಿದರು. ಅವರ ಧ್ವನಿ ಹೊರಗೆ ಕೇಳಿಸಲಿಲ್ಲ ಮತ್ತು ಉಸಿರಾಡಲು ಸಾಕಷ್ಟು ಗಾಳಿ ಇರಲಿಲ್ಲ. ಅಂದು ಶೋಚನೀಯ! ಅವರು ಅಲ್ಲೇ ಸತ್ತು ಹೋದರು.

 

ಕೆಲವೊಮ್ಮೆ ಈ ಲೋಕದಲ್ಲಿ ನಾವು ಸೇರಿಸಿಟ್ಟಿರುವ ಆಸ್ತಿಗಳು ನಮ್ಮನ್ನು ಕಾಪಾಡುವುದಿಲ್ಲ. ಆ ಆಸ್ತಿಗಳು ನಮ್ಮನ್ನು ನಿತ್ಯತ್ವಕ್ಕೆ ಕರೆದುಕೊಂಡು ಹೋಗಿ ಸೇರಿಸುತ್ತದಾ? ಖಂಡಿತವಾಗಿಯೂ ಇಲ್ಲ. ನ್ಯಾಯ ತೀರ್ಪಿನ ದಿನ ಬರಲಿದೆ. ಆ ದಿನದಂದು ಮನುಷ್ಯನ ಸಂಪತ್ತು ಅವನನ್ನು ಕಾಪಾಡುವುದಿಲ್ಲ. ಶಾಸ್ತ್ರವು ಹೇಳುತ್ತಿದೆ, "ಐಶ್ವರ್ಯವಂತರೇ! ನಿಮ್ಮ ಮೇಲೆ ಬರುವ ನಿರ್ಬಂಧಗಳ ನಿಮಿತ್ತವಾಗಿ ಅತ್ತು ಗೋಳಾಡಿರಿ. ನಿಮ್ಮ ಐಶ್ವರ್ಯವು ನಾಶವಾಗಿ ನಿಮ್ಮ ವಸ್ತ್ರಗಳು ಹರಿದು ಹೋದವು."

 

ಸತ್ಯವೇದದಲ್ಲಿ, ಗೇಹಜಿಯ ಬಗ್ಗೆ ಓದುತ್ತೇವೆ. ಅವನು ಲೌಕಿಕ ವಸ್ತುಗಳ ಮೇಲೆ ಆಸೆಪಟ್ಟು, ನಾಮಾನನು ತಂದ ಉಡುಗೊರೆಗಳ ಮೇಲೆ ಆಸೆಪಟ್ಟನು. ದೇವರಿಗಿಂತಲೂ, ಆತನ ಶಕ್ತಿಗಿಂತಲೂ ಲೌಕಿಕ ಆಸ್ತಿಯನ್ನು ಹೆಚ್ಚಾಗಿ ಬಯಸಿದನು. ಇದರ ಅಂತ್ಯವು ಕುಷ್ಠರೋಗ.

 

ಪ್ರಿಯರೇ! ಆಸ್ತಿಯು ಅಗತ್ಯವೇ. ಆದರೆ ನಾವು ಸಾಯುವಾಗ ಯಾವುದೂ ನಮ್ಮೊಂದಿಗೆ ಬರುವುದಿಲ್ಲ. ದೇವರೇ ನಮ್ಮ ಬಯಕೆಯಾಗಿರುವಾಗ ಎಲ್ಲವನ್ನೂ ನಮಗೆ ನೀಡಲು ಶಕ್ತನಾಗಿದ್ದಾನೆ.

- Bro. ಕಾಮರಾಜ್

 

ಪ್ರಾರ್ಥನಾ ಅಂಶ:

ನಮ್ಮ ಸೇವೆಯನ್ನು ಪ್ರಾರ್ಥನೆಯಿಂದಲೂ ಮತ್ತು ಕಾಣಿಕೆಯಿಂದಲೂ ಬೆಂಬಲಿಸುತ್ತಿರುವ ಪ್ರತಿಯೊಬ್ಬರೂ ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş