By Village Missionary Movement
Friday, 22-Sep-2023ಧೈನಂದಿನ ಧ್ಯಾನ(Kannada) – 22.09.2023
ತಪ್ಪಿಸಿಕೊಳ್ಳಲು ತೀವ್ರವಾಗಿರು
"ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ" - ಯೆಶಾಯ 55:6
ಒಂದು ಕೋಳಿ ಅಂಗಡಿಯಲ್ಲಿ, ಅನೇಕ ಕೋಳಿಗಳನ್ನು ಕಬ್ಬಿಣದ ಪಂಜರದಲ್ಲಿ ಇರಿಸಲಾಗಿತ್ತು. ಕೋಳಿ ಮತ್ತು ಹುಂಜ ಎರಡೂ ಪಂಜರದೊಳಗೆ ಸಂತೋಷದಿಂದ ಕೂಗುತ್ತಿದ್ದವು. ತನ್ನ ಮಾಲೀಕನಾದ ಅಂಗಡಿಯವನು ತನ್ನ ಕಣ್ಣೆದುರೇ ತಾನು ಸಾಕಿದ ಕೋಳಿಗಳನ್ನು ಕೊಂದು ಗ್ರಾಹಕರಿಗೆ ಮಾಂಸವಾಗಿ ಕೊಡುವುದನ್ನು ಅವು ತಮ್ಮ ಕಣ್ಣಾರೆ ನೋಡುತ್ತಿದ್ದವು. ಮತ್ತೊಂದು ಕೋಳಿಯನ್ನು ಕುದಿಯುವ ನೀರಿನಲ್ಲಿ ಹಾಕಿ, ಅದರ ಕೂದಲನ್ನೆಲ್ಲಾ ಕಿತ್ತು ಅದನ್ನು ಕತ್ತರಿಸಿ ಕೊಡುತ್ತಿದ್ದ. ತಮಗೂ ಇಂತಹ ಘಟನೆಗಳೆಲ್ಲವೂ ನಡೆಯುತ್ತವೆ ಎಂದು ಕೋಳಿ ಮತ್ತು ಹುಂಜ ತಿಳಿದೂ ಕೂಡ ಸ್ವಲ್ಪವೂ ಚಿಂತಿಸದೆ ಸಂತೋಷದಿಂದ ಕೂಗುತ್ತಲೇ ಇದ್ದವು.
ಈ ಕೋಳಿಗಳು ನಮಗೆ ಆಳವಾದ ಸತ್ಯವನ್ನು ಬಹಿರಂಗಪಡಿಸುತ್ತಿವೆ. ಈ ಪ್ರಪಂಚದಲ್ಲಿ ಬದುಕುತ್ತಿರುವ ಜನರು ತಮ್ಮ ಕಣ್ಣೆದುರೇ ಹಲವಾರು ಸಾವುಗಳಿಂದ ತಮ್ಮ ಪ್ರೀತಿಪಾತ್ರರು ಸತ್ತು ಹೋಗುತ್ತಿರುವುದನ್ನು ಕಂಡರೂ ಅದರ ಬಗ್ಗೆ ಸ್ವಲ್ಪವೂ ಚಿಂತಿಸದೆ ತಾವು ಮಾತ್ರ ಸಾವನ್ನು ನೋಡುವುದೇ ಇಲ್ಲ ಎಂಬ ಆಲೋಚನೆಯಲ್ಲಿ ಬದುಕುತ್ತಿದ್ದಾರೆ.
ಸೈತಾನನು ತನ್ನ ಆತ್ಮವನ್ನು ಸಂಹರಿಸುವುದಕ್ಕಾಗಿ ಮಸೆಯುತ್ತಿರುವ ಸಾವಿನ ಶಬ್ದವನ್ನು ಕೇಳದವರಾಗಿ ಕೋಳಿಯ ಅಂಗಡಿಯಲ್ಲಿ ಕೂಗುವ ಕೋಳಿಯಂತೆ, ಪ್ರಪಂಚದ ಭ್ರಮೆಯಲ್ಲಿ ಕಳೆದುಹೋಗಿ ಆ ಸಂತೋಷದಲ್ಲಿ ತಲೆ ಒರಗಿಸಿ ಕೂಗುತ್ತಿದ್ದಾನೆ ಮನುಷ್ಯ!
ಇದನ್ನು ಓದುತ್ತಿರುವ ಪ್ರಿಯರೇ! ಸೃಷ್ಟಿಕರ್ತನಾದ ದೇವರನ್ನು ಭೇಟಿಯಾಗಲು, ನಾವು ನಮ್ಮ ಕಣ್ಣುಗಳನ್ನು ಮುಚ್ಚಿದಾಗ ಅವರೊಂದಿಗೆ ಪರಲೋಕದಲ್ಲಿ ಶಾಶ್ವತವಾಗಿ ಸಂತೋಷಪಡಲು, ದೇವರ ವಾಕ್ಯದಂತೆ ಎಚ್ಚರಿಕೆಯಿಂದ ನಮ್ಮ ಜೀವನವನ್ನು ಕಟ್ಟಿಕೊಳ್ಳಲು ನಮ್ಮನ್ನು ಒಂದು ಕ್ಷಣ ಸಮರ್ಪಿಸಿಕೊಳ್ಳೋಣ! ಸತ್ಯವೇದದಲ್ಲಿ "ನಿನಗೆ ದೊರೆತಿರುವ ಈ ದಿನದಲ್ಲಿಯಾದರೂ ನಿನ್ನ ಸಮಾಧಾನಕ್ಕೆ ತಕ್ಕವುಗಳನ್ನು ಅರಿತುಕೊಂಡರೆ ಒಳ್ಳೇದು" ಎಂದು ಕರ್ತನಾದ ಯೇಸು ಕ್ರಿಸ್ತನು ಹೇಳಿದ್ದಾರಲ್ಲವೇ? ಆದ್ದರಿಂದ ಈ ವಾಕ್ಯವನ್ನು ನೆನಪಿಸಿಕೊಳ್ಳೋಣ. ಬರಲಿರುವ ವಿನಾಶದಿಂದ ಪಾರಾಗಲು ಜಾಗರೂಕರಾಗಿರೋಣ!
- Mrs. ಸೆಲ್ವಾ ಬೆಂಜಮಿನ್
ಪ್ರಾರ್ಥನಾ ಅಂಶ:
ಹಳ್ಳಿಗಳಲ್ಲಿ ಆಲಯಗಳನ್ನು ನಿರ್ಮಿಸಲು ಮುಂದೆ ಬಂದಿರುವ ಪ್ರತಿಯೊಂದು ಕುಟುಂಬಗಳಿಗಾಗಿಯೂ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482