Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.09.2023
Share:

By Village Missionary Movement

Tuesday, 19-Sep-2023

ಧೈನಂದಿನ ಧ್ಯಾನ(Kannada) – 20.09.2023

 

ಶ್ರಮಜೀವಿಯಾದ ರೂಪವತಿ

 

"ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು;…" - ಪ್ರಸಂಗಿ 9:10

 

ಐಶ್ವರ್ಯ, ಭೋಗ, ಕೀರ್ತಿ, ಅಹಂಕಾರ ಮತ್ತು ಭೌತಿಕತೆಗಳಿಂದ ಕೂಡಿದ ಈ ಜಗತ್ತು ಬಹಳ ದೊಡ್ಡದು. ಇದನ್ನು ನೋಡಿ ಬಿದ್ದುಹೋದವರು ಲೆಕ್ಕವಿಲ್ಲದಷ್ಟು ಜನ. ಇದರ ನಡುವೆ ಹೋರಾಟ, ಆರೋಪ, ನಿಂದೆಗಳಿಂದ ಬೇಸತ್ತು ಯಾವತ್ತ ಸಾಗುತ್ತಿದ್ದೇವೆ ಎಂಬುದೇ ತಿಳಿಯದೆ ದುರ್ಬಲರಾಗಿ ಹಿಂದುಳಿದಿರುವ ಮಹಿಳೆಯರು ಹೇರಳ! ಹೇರಳ! ಅವರ ಮಧ್ಯದಲ್ಲಿ ನೀವೊಂದು ಪೂರ್ಣರೂಪವತಿಯಾಗಿರಲು ಬಯಸುವಿರಾ? ಮುಂದೆ ಓದಿ.

 

ಆದಿಕಾಂಡ 24 ನೇ ಅಧ್ಯಾಯದಲ್ಲಿ ರೆಬೆಕ್ಕಾ ಎಂಬ ಮಹಿಳೆಯ ಬಗ್ಗೆ ಬರೆಯಲ್ಪಟ್ಟಿದೆ. ಆ ಹುಡುಗಿ ಬಹು ಸುಂದರಿಯಾಗಿಯೂ ಇನ್ನೂ ಮದುವೆಯಿಲ್ಲದ ಕನ್ನಿಕೆಯಾಗಿಯೂ ಇದ್ದಳು. ಆಕೆ ಬುಗ್ಗೆಯ ಬಳಿಗೆ ಇಳಿದು ಕೊಡದಲ್ಲಿ ನೀರು ತುಂಬಿಕೊಂಡು ಮೇಲಕ್ಕೆ ಬಂದಳು. ಈ ರೆಬೆಕ್ಕಳು ಅಬ್ರಹಾಮನ ಸೇವಕನಿಗೆ ಹಿಂತಿರುಗಿ ಮಾತನಾಡದೆ ತನ್ನ ಕೊಡವನ್ನು ಕೆಳಗಿಟ್ಟು ಸೇವಕನಿಗೆ ಮತ್ತು ಅವನ ಒಂಟೆಗಳಿಗೆ ನೀರನ್ನು ತಂದು ಕೊಟ್ಟಳು. ರೆಬೆಕ್ಕಳು ಈ ಜಾಗದಲ್ಲಿ ತುಂಬಾ ಚುರು ಚುರುಕಾಗಿ ಕಾರ್ಯ ನಿರ್ವಹಿಸಿದಳು. ಸೇವಕನೆಂದು ತನ್ನ ಮನಸ್ಸಿನಲ್ಲಿ ಅಲ್ಪವಾಗಿ ಪರಿಗಣಿಸದೇ ಗೌರವವಾಗಿ ವಿಚಾರಿಸಿ, ಉಪಚರಿಸಿದಳು ಈ ವಿಷಯಗಳಿಂದ ನಾವು ರೆಬೆಕ್ಕಳ ಸದ್ಗುಣಗಳನ್ನು ತಿಳಿಯಬಹುದು, ಸೇವಕನ ಪ್ರಶ್ನೆಗಳಿಗೆ ರೆಬೆಕ್ಕಳ ಉತ್ತರವೂ ತುಂಬಾ ವಿನಮ್ರವಾಗಿತ್ತು.

 

ಈಗಿರುವ ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರಿಗೆ ಬಹು ಉತ್ಸುಕದಿಂದ ಸವಾಲು ಹಾಕುವ ಮಹಿಳೆ ರೆಬೆಕ್ಕಳು. ಇದನ್ನು ಓದುತ್ತಿರುವ ನೀವು ಹದಿಹರೆಯದ ಸಹೋದರಿಯಾಗಿರಬಹುದು. ನಾನು ತುಂಬಾ ಓದಿದ್ದೇನೆ. ನನ್ನ ಓದಿಗೆ ತಕ್ಕ ಕೆಲಸ ಇನ್ನೂ ಸಿಕ್ಕಿಲ್ಲ. ಅದಕ್ಕೇ ನಾನು ಮನೆಯಲ್ಲಿ ಸುಮ್ಮನಿದ್ದೇನೆ ಎಂದು ಹೇಳುತ್ತೀರಾ? ಚಿಂತಿಸಬೇಡಿ. ನಿಮ್ಮ ವಿದ್ಯಾಭ್ಯಾಸಕ್ಕಿಂತಲೂ ಕಡಿಮೆಯಾದ ಯಾವ ಸಣ್ಣ ಕೆಲಸವೇ ಆಗಿರಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಸಮಯ ಬರುವವರೆಗೂ ದೇವರ ಚಿತ್ತಕ್ಕೆ ಸಮರ್ಪಿಸಿ ಕಾದಿರಿ. ನಮ್ಮ ಜೀವನದಲ್ಲಿ ದೇವರಿಗೆ ವಿಧೇಯತೆ ತೋರುವುದೇ ಆದರೆ, ರೆಬೆಕ್ಕಳ ಜೀವನವನ್ನು ಆಶೀರ್ವಾದವಾಗಿ ಮಾರ್ಪಡಿಸಿದವರು ಖಂಡಿತವಾಗಿಯೂ ನಿಮ್ಮ ಜೀವನವನ್ನೂ ಮಾರ್ಪಡಿಸುತ್ತಾರೆ.

- Mrs. ಗ್ರೇಸ್ ಜೀವಮಣಿ

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿಯಲ್ಲಿ ವಾಕ್ಯ ಹೇಳುವ ಚಿಕ್ಕ ಮಕ್ಕಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al