By Village Missionary Movement
Monday, 18-Sep-2023ಧೈನಂದಿನ ಧ್ಯಾನ(Kannada) – 18.09.2023
ಅರಿಕೆ ಮಾಡಿದರೆ ಅದ್ಭುತ
"ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷವಿುಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು" - 1 ಯೋಹಾನ 1:9
ಒಂದು ದೇಶದ ರಾಜಕುಮಾರ ಪ್ರತಿ ವರ್ಷ ತನ್ನ ಜನ್ಮದಿನದಂದು, ಜೈಲಿಗೆ ಹೋಗಿ ಯಾರಾದರೂ ಒಬ್ಬ ಖೈದಿಯನ್ನು ಬಿಡುಗಡೆ ಮಾಡುವುದು ಅವರ ಹವ್ಯಾಸವಾಗಿತ್ತು. ಒಮ್ಮೆ ಅವರು ಜೈಲಿಗೆ ಹೋಗಿ ಪ್ರತಿ ಖೈದಿಗಳೊಂದಿಗೆ ಮಾತನಾಡಿದರು. ಬಹುತೇಕ ಎಲ್ಲಾ ಖೈದಿಗಳು ತಾವು ನಿರಪರಾಧಿಗಳು ಮತ್ತು ತಮ್ಮನ್ನು ಅನ್ಯಾಯವಾಗಿ ಜೈಲಿನಲ್ಲಿಡಲಾಗಿದೆ ಎಂದು ರಾಜಕುಮಾರನಿಗೆ ಮನವಿ ಮಾಡಿದರು. ಆದರೆ ಒಬ್ಬ ಖೈದಿ ಮಾತ್ರ ತಾನೊಬ್ಬ ಅಪರಾಧಿ ಎಂದು ತನಗೆ ಕೊಟ್ಟಿರುವ ಶಿಕ್ಷೆಯು ನ್ಯಾಯಯುತವಾಗಿದೆ ಎಂದು ರಾಜಕುಮಾರನಿಗೆ ಹೇಳಿದನು. ಇದನ್ನು ಕೇಳಿದ ರಾಜಕುಮಾರನು ತನ್ನ ತಪ್ಪನ್ನು ಗ್ರಹಿಸಿದ ಈ ಖೈದಿಯನ್ನು ತಕ್ಷಣವೇ ಬಿಡುಗಡೆ ಮಾಡಲು ಆದೇಶಿಸಿದನು.
ನಾನು ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳಲ್ಲಿ ನಡೆದ ಒಂದು ಕೂಟದಲ್ಲಿ ನಾನು ದೇವಮನುಷ್ಯನ ಮೂಲಕ ಸ್ಪರ್ಶಿಸಲ್ಪಟ್ಟೆ. ನಂತರ ನಾನು ನನ್ನ ಹಾಸ್ಟೆಲ್ ಕೋಣೆಗೆ ಹೋಗಿ ನನ್ನ ಎಲ್ಲಾ ಪಾಪಗಳನ್ನು ದೇವರ ಬಳಿ ಒಪ್ಪಿಕೊಂಡು ಅರಿಕೆಮಾಡಿ, ಕ್ಷಮಾಪಣೆಯ ಭರವಸೆಯನ್ನು ಪಡೆದುಕೊಂಡೆ. ಮತ್ತು ಮೇಲಿನ ವಾಕ್ಯವು ನನಗೆ ಪರಲೋಕದ ಸಂತೋಷವನ್ನು ನೀಡಿತು. ಹೌದು, ನಮ್ಮ ಪರಲೋಕದ ನಿಶ್ಚಿತತೆಯು ನಮ್ಮ ಭಾವನೆಗಳ ಮೇಲೆ ಅವಲಂಬಿಸುವುದಕ್ಕಿಂತ ದೇವರ ವಾಕ್ಯದ ಮೇಲೆ ನೆಲೆಗೊಂಡಿರುವುದು ಉತ್ತಮ.
ಹೌದು, ಪ್ರಿಯರೇ! ನಮ್ಮ ಪಾಪಗಳನ್ನು ಮರೆಮಾಚದೆ ಒಪ್ಪಿಕೊಳ್ಳುವಲ್ಲಿ ನಾವು ನಂಬಿಗಸ್ತರಾಗಿರೋಣ. ತನ್ನ ಕೊರತೆಗಳನ್ನು ಮತ್ತು ಅಪರಾಧಗಳನ್ನು ಅರಿತು ಹಿಂತಿರುಗಿದ ಯಾರನ್ನೂ ದೇವರು ತಳ್ಳಿಬಿಡುವುದಿಲ್ಲ. ಕಿರಿಯಮಗನು, ತನ್ನ ತಂದೆಯ ಬಳಿಗೆ ಹಿಂತಿರುಗಿ ಬಂದು ತನ್ನ ಪಾಪಗಳನ್ನು ಒಪ್ಪಿಕೊಂಡಾಗ, ತಂದೆ ಹಳೆಯ ಸಂಗತಿಗಳನ್ನು ಎತ್ತಿ ತೋರಿಸದೆ ಅವನಿದ್ದ ಸ್ಥಿತಿಯಲ್ಲೇ ಅವನನ್ನು ಸ್ವೀಕರಿಸಿದರು. ನಾವು ಸಹ ದೇವರ ಸನ್ನಿಧಾನಕ್ಕೆ ಬೂಟಾಟಿಕೆಯಿಂದ ಬರದೆ ನಿಜವಾಗಿಯೂ ನಮ್ಮ ಅಪರಾಧಗಳನ್ನು ಒಪ್ಪಿಕೊಂಡು ಅರಿಕೆಮಾಡಿ ತಪ್ಪಿತಸ್ಥ ಭಾವನೆಯಿಲ್ಲದ ಅದ್ಭುತವಾದ ಜೀವನವನ್ನು ನಡೆಸೋಣ.
- Mrs. ಚಿತ್ರಾ ಜಾನ್
ಪ್ರಾರ್ಥನಾ ಅಂಶ:
ಕಾರ್ಯ ಸ್ಥಳಗಳಲ್ಲಿ ನಡೆಯುವಂತಹ ಟ್ಯೂಷನ್ ಸೆಂಟರ್ ಮೂಲಕ ಭೇಟಿಯಾಗುತ್ತಿರುವ ವಿದ್ಯಾರ್ಥಿಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482