By Village Missionary Movement
Sunday, 17-Sep-2023ಧೈನಂದಿನ ಧ್ಯಾನ(Kannada) – 17.09.2023 (Kids Special)
ಸೌಂದರ್ಯವತಿ ಆಶಾ
"ಯಾರು ಧರ್ಮವನ್ನು ತಿರಸ್ಕರಿಸುವರೋ ಅವರನ್ನು ಆತನು ತಿರಸ್ಕರಿಸುವನು. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುವನು." - ಜ್ಞಾನೋಕ್ತಿ 3:34
ಆಶಾ 12ನೇ ತರಗತಿಯಲ್ಲಿ ಓದುತ್ತಿದ್ದಳು. ಅವಳು ಹೊರನೋಟಕ್ಕೆ ತುಂಬಾ ಸುಂದರವಾಗಿದ್ದಳು; ಹಣವಂತಳು ಕೂಡ. ಕ್ರೈಸ್ತ ಕುಟುಂಬದಲ್ಲಿ ಜನಿಸಿದರೂ, ಹೆಸರಿಗೆ ಮಾತ್ರ ಕ್ರೈಸ್ತಳಾಗಿ ಜೀವಿಸುತ್ತಿದ್ದಳು. ಆಶಾ ಬೆಳೆಯುತ್ತಾ ಬೆಳೆಯುತ್ತಾ ಅವಳ ಸೌಂದರ್ಯವೂ ಹೆಚ್ಚಾಯಿತು. ಜೊತೆಗೆ ತಾನು ಸುಂದರಿ ಎಂಬ ಹೆಮ್ಮೆಯೂ ಬೆಳೆಯುತ್ತಿತ್ತು. ನಾನು ಎಲ್ಲರಿಗಿಂತಲೂ ಸುಂದರವಾಗಿದ್ದೇನಾ ಎಂದು ತನ್ನೊಂದಿಗೆ ಓದುವ ಇತರ ವಿದ್ಯಾರ್ಥಿಗಳನ್ನು ಆಗಾಗ್ಗೆ ಕೇಳುತ್ತಿದ್ದಳು. ಅವರು ಸಹ ಅವಳಿಗೆ ತಕ್ಕಂತೆ ಮಾತನಾಡುತ್ತಿದ್ದರು. ಏಕೆಂದರೆ ಅವಳು ಅವರಿಗೆ ಆಗಾಗ ಚಾಕಲೇಟ್, ಪೆನ್ನು, ಪೆನ್ಸಿಲ್ ಇತ್ಯಾದಿಗಳನ್ನು ಕೊಡುತ್ತಿದ್ದಳು. ಈ ಆಶಾಗೆ ಕಪ್ಪಾಗಿರುವವರನ್ನು ಮತ್ತು ಬಡವರನ್ನು ಕಂಡರೆ ಇಷ್ಟ ಆಗುತ್ತಿರಲಿಲ್ಲ. ಅವರನ್ನು ಕಂಡರೆ ಹೀನಾಯವಾಗಿ ಮಾತನಾಡುತ್ತಿದ್ದಳು. ಇವಳ ಹೆತ್ತವರು ಎಷ್ಟೇ ಬುದ್ಧಿ ಹೇಳಿದರೂ ಕೇಳುತ್ತಿರಲಿಲ್ಲ.
ಒಂದು ದಿನ ಆಶಾ ತರಗತಿಯಲ್ಲಿದ್ದವರೆಲ್ಲಾ ಸೈನ್ಸ್ ಲ್ಯಾಬ್ ಕ್ಲಾಸಿಗೆ ಹೋದರು. ಅಲ್ಲಿಗೆ ಹೋಗಿ ಪರಿಶೋಧನೆ ಮಾಡುತ್ತಿದ್ದಾಗ ಆಶಾಳ ಪರೀಕ್ಷಾ ಕೊಳವೆ ಅನಿರೀಕ್ಷಿತವಾಗಿ ಸ್ಫೋಟಗೊಂಡಿತು. ಎಷ್ಟು ಶೋಚನೀಯ! ಅದರಲ್ಲಿದ್ದ ಆಸಿಡ್ ಅವಳ ಮುಖದ ಮೇಲೆ ಬಿದ್ದು, ಮುಖದ ಮೇಲೆಲ್ಲಾ ಬೊಬ್ಬೆಗಳು ಎದ್ದವು. ಆಶಾ ಕಿರುಚಾಡಿದಳು, ಒದ್ದಾಡಿದಳು. ತಕ್ಷಣ ಚಿಕಿತ್ಸೆ ನೀಡಲಾಯಿತು. ನಂತರ ಒಂದೆರಡು ದಿನ ಆಸ್ಪತ್ರೆಯಲ್ಲಿದ್ದಳು. ಆಶಾ ಮನೆಗೆ ಬಂದು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿದಳು. ಸುಂದರಿಯಾಗಿದ್ದ ಆಶಾ ಈಗ ಶೋಚನೀಯವಾಗಿ ಕಾಣುತ್ತಿದ್ದಾಳೆ. ಅವಳಿಗೆ ನೋವು ಸಹಿಸಲಾಗಲಿಲ್ಲ. ನಂತರ ಅವಳು ಶಾಲೆಗೆ ಹೋದಳು. ಅವರು ಮೊದಲ ದಿನ ಪಶ್ಚಾತ್ತಾಪಪಟ್ಟರು, ನಂತರ ಕ್ರಮೇಣ ಹಿಂದೆ ಸರಿದರು. ಅವಳನ್ನು ಸುಂದರಿ ಎಂದು ಕರೆದವರೂ ಸಹ ಅವಳನ್ನು ಒಂದು ಸ್ನೇಹಿತೆಯಾಗಿಯೂ ಪರಿಗಣಿಸಲಿಲ್ಲ. ಆಶಾ ಎದೆಗುಂದಿದಳು. ಆಗ ಆಶಾ, "ತಾನು ಅಣಕಿಸಿದ ಮಾತುಗಳನ್ನು ಕೇಳಿದ ಬಡ ವಿದ್ಯಾರ್ಥಿಗಳು ಸಹ ದಿನವೂ ಹೀಗೆ ವೇದನೆಪಟ್ಟಿರಬಹುದು" ಎಂದುಕೊಂಡಳು. ತನ್ನ ತಪ್ಪಿನ ಅರಿವಾಗಿ, ಅವಳು ಕ್ಷಮೆಯಾಚಿಸಿ ಯೇಸುವನ್ನು ಪ್ರಾರ್ಥಿಸಲು ಪ್ರಾರಂಭಿಸಿದಳು. ಆ ದಿನದಿಂದ ಅವಳಲ್ಲಿ ಒಂದು ಬದಲಾವಣೆ ಉಂಟಾಗಿ ಒಳ್ಳೆಯ ಮಗುವಾಗಿ ಬಾಳತೊಡಗಿದಳು.
ಪ್ರೀತಿಯ ಸಹೋದರ, ಸಹೋದರಿ, ನೀನು ಕೂಡ ಈ ಆಶಾಳಂತೆ ಹೆಮ್ಮೆಯುಳ್ಳವಳಾಗಿ(ನಾಗಿ) ಇದ್ದೀಯ? ಹಾಗಿದ್ದಲ್ಲಿ, ಇಂದೇ ಅದನ್ನು ಬಿಟ್ಟುಬಿಡು, ಯೇಸುವಿನ ಬಳಿ ತಾಳ್ಮೆಯುಳ್ಳ ಗುಣವನ್ನು ಕೇಳಿ ಪಡೆದುಕೋ. Ok ನಾ, ಪುಟಾಣಿಗಳೇ. Bye!
- Mrs. ಸಾರಾ ಸುಭಾಷ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482