Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.09.2023
Share:

By Village Missionary Movement

Saturday, 16-Sep-2023

ಧೈನಂದಿನ ಧ್ಯಾನ(Kannada) – 16.09.2023

 

BATTERY LOW 

 

"ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ” - ಕೀರ್ತನೆ 94:19

 

ಈಗ ಪ್ರತಿಯೊಬ್ಬರಿಗೂ ಹತ್ತಿರದ, ರಹಸ್ಯ ಸಂಬಂಧಿಯಾಗಿದ್ದು ಸಹಕರಿಸುವುದು ಸೆಲ್ ಫೋನ್. ಮನೆಯಲ್ಲಿ ಎಲ್ಲರಿಗೂ ಪ್ರತ್ಯೇಕ ಪ್ಲೇಟ್, ಗ್ಲಾಸ್ ಇರುವಂತೆ ಪ್ರತಿಯೊಬ್ಬರಿಗೂ ಸೆಲ್ ಫೋನ್ ಪ್ರತ್ಯೇಕವಾಗಿದೆ. ಇದರಲ್ಲಿ ಬ್ಯಾಟರಿ ಕಡಿಮೆ ಆಗದಂತೆ ನೋಡಿಕೊಳ್ಳಲು ಪ್ರತಿದಿನವೂ ಚಾರ್ಜ್ ಮಾಡುತ್ತೇವೆ. ಯಾತಕ್ಕೆ, ಬ್ಯಾಟರಿ ಕಡಿಮೆಯಾದರೆ, ಅದು ಶೀಘ್ರದಲ್ಲೇ ಸ್ವಿಚ್ ಆಫ್ ಆಗುತ್ತದೆ. ಅದನ್ನು ಬಳಸಲಾಗುವುದಿಲ್ಲ. ಆಗಾಗ್ಗೆ ಬ್ಯಾಟರಿ ಕಡಿಮೆಯಾಗಿ ಸ್ವಿಚ್ ಆಫ್ ಆಗಿ charger ಹಾಕಿದರೆ ಬ್ಯಾಟರಿ ಬೇಗನೆ ಹಾಳಾಗುತ್ತದೆ.

 

ಹೀಗೆ ಕೆಲವು ಸಾವಿರಗಳಿಗೆ ಅಂಗಡಿಗಳಲ್ಲಿ ತೆಗೆದುಕೊಳ್ಳುವಂತಹ ಈ ಫೋನ್ ಅಥವಾ ಬ್ಯಾಟರಿ ಬಗ್ಗೆ ನಾವು ತುಂಬಾ ಗಮನ ಹರಿಸುತ್ತೇವೆ. ಆದರೆ ಅಂಗಡಿಗಳಲ್ಲಿ ಸಿಗದ ಮತ್ತು ದುಬಾರಿಯಾದ ಒಂದಕ್ಕೆ ಚಾರ್ಜರ್ ಹಾಕಲು ಮರೆಯುತ್ತೇವೆ. ಇದು ಎಲ್ಲರಿಗೂ ಕೊಡಲ್ಪಟ್ಟಿರುವ ಒಂದು. ಅದು ಏನು ಅನ್ನುತ್ತೀರಾ? ಅದುವೇ ಆತ್ಮ! ಇದನ್ನು ಸಹ ಪ್ರತಿದಿನ ಚಾರ್ಜ್ ಮಾಡಬೇಕು. ಇಲ್ಲವಾದರೆ ಆತ್ಮವು ದುರ್ಬಲವಾಗುತ್ತದೆ ಮತ್ತು ಸಣ್ಣ ವಿಷಯಗಳಿಗೂ ಆಯಾಸಗೊಳ್ಳುತ್ತದೆ. ಬದುಕು ಕತ್ತಲಾಗುತ್ತದೆ. ಅದನ್ನು ಚಾರ್ಜ್ ಮಾಡಲು ನೀವು ಪ್ರತಿದಿನ ಸತ್ತವೇದವನ್ನು ಓದಬೇಕು. ಪ್ರಾರ್ಥಿಸಬೇಕು‌. ಫೋನ್ ಅನ್ನು ಚಾರ್ಜ್ ಮಾಡಲು ಕರೆಂಟ್ ಮತ್ತು ಚಾರ್ಜರ್‌ನಂತಹ ಸತ್ಯವೇದ ಧ್ಯಾನ, ಪ್ರಾರ್ಥನೆ ಇಲ್ಲದಿದ್ದರೆ, ಚಿಕ್ಕ, ಚಿಕ್ಕ ಚಿಂತೆಗಳು ಮತ್ತು ಕಷ್ಟಗಳು ಸಹ ನಮ್ಮನ್ನು ದುರ್ಬಲಗೊಳಿಸಿ ಕೆಳಕ್ಕೆ ತಳ್ಳಿ ಬಿಡುತ್ತದೆ. ಪ್ರಾರ್ಥಿಸುವಾಗ, ನಾವು ಆತನ ಸಹಾಯವನ್ನು ಕೇಳುತ್ತೇವೆ. ನಾವು ಆತನಿಗೆ ನಮ್ಮನ್ನು ಒಪ್ಪಿಸಿಕೊಡುತ್ತೇವೆ, ನಾವು ಆತನಿಗೆ ಹತ್ತಿರವಾಗುತ್ತೇವೆ ಮತ್ತು ಆತ್ಮವು ಬಲಗೊಳ್ಳುತ್ತದೆ. ಚಿಂತೆ ಮತ್ತು ಆಯಾಸ ಬಂದಾಗ ಮಾತ್ರವಲ್ಲ, ನಾವು ಪ್ರಾರ್ಥನೆಯನ್ನು ದಿನಚರಿಯಾಗಿ ಮಾಡುತ್ತಾ ಬಂದರೆ, ನಮ್ಮ ಆಧ್ಯಾತ್ಮಿಕ ಶಕ್ತಿಯು ನಮ್ಮ ಜೀವನವನ್ನು ದೇವರಿಗೆ ಮತ್ತು ಆತನ ಸಲುವಾಗಿ ಇತರರಿಗೆ ಉಪಯುಕ್ತವಾಗಿಸುತ್ತದೆ. ಬ್ಯಾಟರಿ ಕಡಿಮೆಯಾದಾಗಲೆಲ್ಲ ಫೋನ್‌ಗೆ ಚಾರ್ಜರ್‌ನ ಅವಶ್ಯಕತೆಯಿರುವಂತೆ, ಆತ್ಮಕ್ಕೂ ಚಾರ್ಜ್ ಅಗತ್ಯವಿದೆ. ಇಸ್ರಾಯೇಲ್ಯರ ಆತ್ಮ ಚಿಕ್ಕ ಚಿಕ್ಕ ಕಾರ್ಯಗಳಿಂದ ಸೋತುಹೋಗಿ ಗುಣುಗುಟ್ಟಿ ಕಾನಾನ್ ಅನ್ನು ಕಳೆದುಕೊಂಡಿತು. ಆದರೆ ಕಾಲೇಬನು ಮತ್ತು ಯೆಹೋಶುವನು ದೇವರು ಇಲ್ಲಿಯವರೆಗೆ ಮಾಡಿದ ಕಾರ್ಯಗಳನ್ನು ನೆನಪಿಸಿಕೊಂಡು ತಮ್ಮನ್ನು ಚಾರ್ಜ್ ಮಾಡಿಕೊಂಡದ್ದರಿಂದ ತಾವು ನಂಬಿಕೆಯ ಘೋಷಣೆಯನ್ನು ಮಾಡಿ ಕಾನಾನ್ ಅನ್ನು ಸ್ವತಂತ್ರಿಸಿಕೊಂಡರು.

 

ಇದನ್ನು ಓದುತ್ತಿರುವ ಪ್ರಿಯರೇ! ಆತ್ಮವು ತುಂಬಾ ದುಬಾರಿಯಾಗಿದೆ. ಇದನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಆತಂಕ ಮತ್ತು ಆಯಾಸದ ಸಣ್ಣದೊಂದು ಸುಳಿವು ಸಿಕ್ಕಾಗಲೇ ಗಮನಿಸಿ. ಇಲ್ಲದಿದ್ದರೆ ಬ್ಯಾಟರಿ ಕಡಿಮೆಯಾಗಿ ಜೀವನ ಕತ್ತಲೆಯಾಗುತ್ತದೆ. ನಂತರ ಕಣ್ಣೀರು ಮತ್ತು ಆತಂಕ ಜಯಹೊಂದುತ್ತದೆ. ಇದಕ್ಕೆ ಸುಲಭವಾದ ಮಾರ್ಗವೆಂದರೆ ನಾವು ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಪ್ರಾರ್ಥನೆ ಮಾಡಿ, ಸತ್ಯವೇದವನ್ನು ಓದಿ ಚಾರ್ಜ್ ಹಾಕಿಬಿಡೋಣ. ಚಾರ್ಜ್ ಮಾಡುವ ನಡುವೆ ಚಿಂತೆ ಮತ್ತು ಆಯಾಸ ಬಂದರೆ, ಮತ್ತೊಮ್ಮೆ ಪ್ರಾರ್ಥಿಸಿ ಅವರ ಕೈಯಲ್ಲಿ ಇಟ್ಟು ಚಾರ್ಜ್ ಮಾಡಿಕೊಳ್ಳೋಣ. ಆಗ ನಮ್ಮ ಜೀವನದಲ್ಲಿ ಒಂದು ಬೆಳಕು ಸಿಗುತ್ತದೆ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

"ಕಣ್ಮಣಿಯೆ ಕೇಳ್" ಕಾರ್ಯಕ್ರಮದ ಮೂಲಕ ಭೇಟಿಯಾಗುವಂತಹ ಯೌವನಸ್ಥರು ಕರ್ತನಲ್ಲಿ ನೆಲೆಗೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet güncel giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet jojobet jojobet giriş