By Village Missionary Movement
Monday, 22-Mar-2021ಧೈನಂದಿನ ಧ್ಯಾನ(Kannada) – 22.03.2021
ನೀವೇ ಪರಿಮಳ (ಸುವಾಸನೆ)
"...ನಾವು ದೇವರ ಮುಂದೆ ಕ್ರಿಸ್ತನ ಪರಿಮಳವಾಗಿದ್ದೇವೆ." - 2 ಕೊರಿಂಥ 2:15
ಅಮೆರಿಕದ 35 ನೇ ಅಧ್ಯಕ್ಷರಾಗಿದ್ದ ಜಾನ್ F. ಕೆನಡಿ ತನ್ನ ಯೌವನದಲ್ಲಿ ಒಂದು ವಾಸನೆಯಾದ ದ್ರವ್ಯವನ್ನು ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡಿದರು. ಅವರು ತನ್ನ ಕೆಲಸವನ್ನು ಮುಗಿಸಿ ಮನೆಗೆ ಹಿಂದಿರುಗುವಾಗ ಆ ಬೀದಿಯ ಮೂಲೆಯಲ್ಲಿ ಬರುವಾಗ ದಾರಿಯಲ್ಲಿ ಇರುವವರು ಕೆನಡಿ ಬರುತ್ತಿದ್ದಾರೆ ಎಂದು ಹೇಳಿಬಿಡುತ್ತಿದ್ದರು. ಅಷ್ಟರಮಟ್ಟಿಗೆ ಆ ಬೀದಿಯೆಲ್ಲಾ ವಾಸನೆ ಬೀರುತ್ತಿತ್ತು. ನಾವು ಹೀಗೆ ಲೋಕಕ್ಕೆ ಪರಿಮಳವಾಗಿ ಜೀವಿಸಲು ಕರೆಯಲ್ಪಟ್ಟಿದ್ದೇವೆ. ಇದನ್ನೇ ಅಪೊಸ್ತಲನಾದ ಪೌಲನು ಹೇಳುವಾಗ ರಕ್ಷಣೆ ಹೊಂದುವವರೊಳಗೂ ಕೆಟ್ಟುಹೋಗುವವರೊಳಗೂ ನಾವು ಕ್ರಿಸ್ತನ ಪರಿಮಳವಾಗಿದ್ದೇವೆ ಎಂದಿದ್ದಾರೆ.
ಕರ್ತನಾದ ಯೇಸು ಕ್ರಿಸ್ತನನ್ನು ನಮ್ಮ ಜೀವನದ ಮೂಲಕ ಅಂದರೆ ನಮ್ಮ ಕ್ರಿಯೆಗಳ ಮೂಲಕ ಹೊರ ಪಡಿಸುವುದೇ ಸಾಕ್ಷಿ. ನಮ್ಮ ಕ್ರಿಯೆಗಳ ಮೂಲಕ ಯೇಸುವನ್ನು ಹೇಗೆ ಪ್ರಕಟ ಪಡಿಸಲು ಸಾಧ್ಯ? ತಂದೆಯ ಸ್ವರೂಪವು ಮಗುವಿನ ಬಳಿ ಕಂಡರೆ ನಿನ್ನ ತಂದೆ ಇವರಾ ಎಂದು ಕೇಳುತ್ತೇವಲ್ಲಾ? ಅದರಂತೆಯೇ ನಮ್ಮ ಪರಮ ತಂದೆಯ ಸ್ವರೂಪವು ನಮ್ಮಲ್ಲಿ ಕೆನಡಿ ಉಪಯೋಗಿಸಿದ ವಾಸನೆ ದ್ರವ್ಯದ ಪರಿಮಳದಂತೆ ಹೊರಗೆ ಕಾಣಬೇಕು. ಆಗಲೇ ನಾವು ಸಾಕ್ಷಿಗಳು. ನಂತರ ಪರಿಶುದ್ಧಾತ್ಮನ ಅಭಿಷೇಕವನ್ನು ಹೊಂದಿಕೊಂಡು ದೇವರ ಸಾಕ್ಷಿಗಳಾಗಿ ಜೀವಿಸಬೇಕು. ಅಪೊಸ್ತಲ.1:8- ರಲ್ಲಿ "ಪರಿಶುದ್ಧಾತ್ಮನು ನಿಮ್ಮ ಬಳಿ ಬರುವಾಗ ನೀವು ಬಲ ಹೊಂದಿ... ಭೂಮಿಯ ಕಟ್ಟ ಕಡೆಯವರೆಗೂ, ನನಗೆ ಸಾಕ್ಷಿಗಳಾಗಿರುತ್ತೀರ."
ಸ್ನೇಹಿತರೇ! ಇಂದಿನ ಪ್ರಪಂಚದಲ್ಲಿ ನಾವೇ ನಮ್ಮ ಸಾಕ್ಷಿಯ ಮೂಲಕ ಕ್ರಿಸ್ತನನ್ನು ಲೋಕಕ್ಕೆ ತೋರಿಸಬೇಕು. ಹೇಗೆ ಆ ವಾಸನೆ ದ್ರವ್ಯವು ಜನರನ್ನು ಆಕರ್ಷಿಸುತ್ತದೋ, ಅದರಂತೆ ನಮ್ಮ ಶುದ್ಧವಾದ, ಒಳ್ಳೆಯ ಮಾತು, ಉತ್ತಮವಾದ ನಡತೆ, ಮತ್ತೊಬ್ಬರನ್ನು ಸಂತೋಷಪಡಿಸುವಂತಹ ಗುಣಗಳಿಂದ ಮತ್ತೊಬ್ಬರ ಹೃದಯಗಳಲ್ಲಿ ಯೇಸುಕ್ರಿಸ್ತನನ್ನು ತಂದು ಬಿಡಬೇಕು. ಪರಿಮಳವಾಗಿ ಜೀವಿಸೋಣ! ಯೇಸುಕ್ರಿಸ್ತನನ್ನು ಪ್ರಕಟಿಸೋಣ!
- Mrs. ಜಾಸ್ಮಿನ್ ಸಾಮುವೇಲ್
ಪ್ರಾರ್ಥನಾ ಅಂಶ:-
ಆಂಧ್ರ ಕುಮ್ಮಾ ಪ್ಲಾಕ್ (ಮಂಡಲಂ) ಭಾಗದಲ್ಲಿ ಹೊಸ ಕಾರ್ಯಕ್ಷೇತ್ರವನ್ನು ಆರಂಭಿಸುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482