Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.09.2023
Share:

By Village Missionary Movement

Monday, 11-Sep-2023

ಧೈನಂದಿನ ಧ್ಯಾನ(Kannada) – 11.09.2023

 

ತ್ಯಾಗದ ಕಾಣಿಕೆ

 

"...ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು" - 2 ಕೊರಿಂಥ. 9:7

 

ಕಾಡಿನಲ್ಲಿ ವಾಸಿಸುವ ದೇವರನ್ನು ಅರಿಯದ ಜನರಿಗೆ ಕ್ರಿಸ್ತನ ಸುವಾರ್ತೆಯನ್ನು ಸಾರಲು ಸಹಾಯ ಮಾಡುವವರು ತಮ್ಮ ಕಾಣಿಕೆಗಳನ್ನು ನೀಡಬಹುದು ಎಂದು ಒಂದು ಆಲಯದಲ್ಲಿ ಪ್ರಕಟಣೆ ಹೊರಡಿಸಲಾಯಿತು. ಸಭೆಯ ಜನರೆಲ್ಲರೂ ಮೌನವಾಗಿರುವಾಗ ಆಲಯದ ಒಂದು ಮೂಲೆಯಲ್ಲಿದ್ದ ಮಹಿ ಎಂಬ ಚಿಕ್ಕ ಹುಡುಗಿ ಮುಂದೆ ಬಂದು ತಾನು ನಡೆಯಲು ಇಟ್ಟುಕೊಂಡಿದ್ದ ಎರಡು ಊರುಗೋಲನ್ನು ತಟ್ಟೆಯಲ್ಲಿ ಇಟ್ಟಳು. ಇದನ್ನು 600 ರೂಪಾಯಿಗಳಿಗೆ ಹರಾಜಾಕಿ ಪುನಃ ಅವಳಿಗೇ ಕೊಟ್ಟರು. ಇದನ್ನು ಕಂಡ ಇತರರೂ ತ್ಯಾಗದಿಂದ ಸ್ವಯಂ ಪ್ರೇರಿತರಾಗಿ ದೇವರ ಸೇವೆಗೆ ಕಾಣಿಕೆ ಕೊಡಲು ಮುಂದೆ ಬಂದರು. ಇದರೊಂದಿಗೆ ವಿನ್ಸೆಂಟ್ ಫೆರಾ ಎಂಬ ಮಿಷನರಿ ಸ್ಪೇನ್, ಸ್ವಿಟ್ಜರ್ಲೆಂಡ್, ಫ್ರಾನ್ಸ್ ಮತ್ತು ಇಟಲಿಯಂತಹ ಅನೇಕ ದೇಶಗಳನ್ನು 21 ವರ್ಷಗಳ ಕಾಲ ರಕ್ಷಣೆಯ ಹಾದಿಯಲ್ಲಿ ಮುನ್ನಡೆಸಿದರು.

 

ಲೂಕ 21 ರಲ್ಲಿ ಬಡ ವಿಧವೆ ತನ್ನ ಬಳಿಯಿದ್ದ ಎರಡು ನಾಣ್ಯಗಳನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದಳು. ಅವಳು ತನ್ನಲ್ಲಿದ್ದದ್ದನ್ನು ತನಗಾಗಿ ಇಟ್ಟುಕೊಳ್ಳದೆ ದೇವರಿಗೆ ಕೊಟ್ಟಳು. ತನ್ನ ಜೀವನಕ್ಕಾಗಿ ತನ್ನಲ್ಲಿದ್ದ ಎಲ್ಲವನ್ನೂ ಕೊಟ್ಟುಬಿಟ್ಟಳು ಎಂದು ಯೇಸು ಕ್ರಿಸ್ತನು

ಹೇಳಿದರು. ದೇವರಿಂದ ಆಶೀರ್ವಾದ ಪಡೆದಳು.

 

ಕೊಡಿರಿ, ಆಗ ನಿಮಗೂ ಕೊಡುವರು. (ಲೂಕ 6:38) ನಾವು ಸುವಾರ್ತೆ ಸಾರುವ ಸೇವೆಗೆ ಕೊಡುವಂತಹ ಕಾಣಿಕೆಯಲ್ಲಿ ಸುವಾರ್ತೆಯು ವೇಗವಾಗಿ ಹರಡುತ್ತಿದೆ ಮತ್ತು ಕೆಟ್ಟ ಗುಣವುಳ್ಳವರು ಸುವಾರ್ತೆಯನ್ನು ಕೇಳಿ ರಕ್ಷಣೆಯನ್ನು ಹೊಂದುತ್ತಿದ್ದಾರೆ. ಹೌದು, ಒಬ್ಬ ಪಾಪಿಯು ಮಾನಸಾಂತರ ಹೊಂದುವುದರಿಂದ ಪರಲೋಕದಲ್ಲಿ ತುಂಬಾ ಸಂತೋಷ ಉಂಟಾಗುತ್ತದೆ. ಆ ಸಂತೋಷದಲ್ಲಿ ನೀವು ಸಹ ಪಾಲುದಾರರಾಗುವುದು ಬೇಡವೇ?

 

ಒಂದು ತಂಬಿಗೆ ನೀರು ಕೊಟ್ಟರೇನೆ ಅದರ ಪ್ರತಿಫಲವನ್ನು ಹೊಂದದೇ ಹೋಗುವುದಿಲ್ಲ ಎಂದು ಸತ್ಯವೇದವು ಹೇಳುತ್ತಿದೆ. ನಾವು ಅವರಿಗಾಗಿ ತ್ಯಾಗವಾಗಿ ಕೊಡುವಾಗ ದೇವರು ನಮ್ಮನ್ನು ಸುಮ್ಮನೆ ಬಿಟ್ಟು ಬಿಡುತ್ತಾರೋ?

 

ಪ್ರಿಯರೇ! ಕೊಡುವ ವಿಷಯದಲ್ಲಿ ನಮ್ಮ ಮನಸ್ಥಿತಿ ಹೇಗಿದೆ? ಕೊಡಲು ನನಗೆ ಆಸೆಯೇ. ಆದರೆ ನನಗೇನೂ ಹಣ ಉಳಿಯುವುದಿಲ್ಲವೇ ಎಂದು ಭಾವಿಸುವುದು ತಪ್ಪು. ದೇವರಿಗೆ ಅವಶ್ಯಕತೆ ಇದೆ ಎಂದು ಭಾವಿಸಿ ನಮ್ಮಲ್ಲಿರುವದನ್ನು ದೇವರಿಗೆ ತ್ಯಾಗವಾಗಿ ನೀಡೋಣ. ಪೂರ್ಣ ಆಶೀರ್ವಾದವನ್ನು ಪಡೆಯೋಣ.

- Mrs. ರೋಸ್ ಪಾಲ್ ಜೆಬಸ್ಟಿನ್ 

 

ಪ್ರಾರ್ಥನಾ ಅಂಶ:

ಪೂರ್ಣ ಸಮಯ ಸೇವೆಗೆಂದು ಸಮರ್ಪಿಸಲ್ಪಟ್ಟ ಸೇವಕರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al