Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.09.2023
Share:

By Village Missionary Movement

Friday, 08-Sep-2023

ಧೈನಂದಿನ ಧ್ಯಾನ(Kannada) – 09.09.2023

 

ವಿಜಯ ಧ್ವಜ

 

"...ಕಲ್ಲುಗಳನ್ನು ತೆಗೆದುಹಾಕಿರಿ, ಜನಾಂಗಗಳಿಗೆ ಧ್ವಜವನ್ನೆತ್ತಿರಿ" - ಯೆಶಾಯ 62:10

 

ಹಿಂದಿನ ಕಾಲದಲ್ಲಿ, ಒಂದು ದೇಶವು ಮತ್ತೊಂದು ದೇಶವನ್ನು ಆಕ್ರಮಿಸಿ ವಶಪಡಿಸಿಕೊಂಡು ಬರುವಾಗ, ತಮ್ಮ ದೇಶದ ಧ್ವಜವನ್ನು ಆ ಪ್ರದೇಶದಲ್ಲಿ ಹಾರಿಸಿ ಬರುತ್ತಿದ್ದರು. ಅದೇ ರೀತಿಯಲ್ಲಿ, ಕರ್ತನು ತಮ್ಮ ಮಕ್ಕಳ ಮೇಲೆ ಮುದ್ರೆ ಹಾಕಿ ತಮ್ಮ ಧ್ವಜವನ್ನು ನೆಡುತ್ತಾರೆ.

 

ಬೇರೆ ದೇಶದೊಂದಿಗೆ ಯುದ್ಧ ಮಾಡಿ ಗೆದ್ದ ನಂತರ ಮೊದಲು ಅಲ್ಲಿನ ಧ್ವಜಗಳನ್ನು ತೆಗೆದು ತಮ್ಮ ದೇಶದ ಧ್ವಜವನ್ನು ಹಾರಿಸುತ್ತಾರೆ. ಅದೇ ರೀತಿಯಲ್ಲಿ, ನಮ್ಮಲ್ಲಿ ದೇವರು ಮುದ್ರೆಯೊತ್ತಲು, ಧ್ವಜ ಹಾರಿಸಲು ನಾವು ನಮ್ಮಲ್ಲಿರುವ ಕಲ್ಲುಗಳಂತೆ ಬಲವಾಗಿರುವ, ಇತರರನ್ನು ನೋಯಿಸುವ ನಮ್ಮ ಪಾಪಗಳನ್ನು ನಮ್ಮಿಂದ ತೆಗೆದುಹಾಕಬೇಕು. ಕೋಪ, ಹೊಟ್ಟೆಕಿಚ್ಚು, ದ್ವೇಷ ಮತ್ತು ಕಾಮ ಇವೇ ಆ ಕಲ್ಲುಗಳು. ಇವುಗಳನ್ನು ಆರಿಸಿ ಬಿಸಾಡಿದಾಗ, ಆತ್ಮನ ಧ್ವಜವು ನಮ್ಮಲ್ಲಿ ಹಾರಿಸಲ್ಪಡುತ್ತದೆ. ನೀವು ಪಾಪಗಳನ್ನು ಬಿಟ್ಟು ದೇವರ ಆಳ್ವಿಕೆಗೆ ನಿಮ್ಮನ್ನು ಒಪ್ಪಿಸಿದಾಗ ಅವರ ಧ್ವಜವು ನಿಮ್ಮಲ್ಲಿ ಹಾರಿಸಲ್ಪತ್ತದೆ. ನಮ್ಮ ಸಂಪೂರ್ಣ ಹೃದಯ ಮತ್ತು ಇಡೀ ಜೀವನ ಅವರ ಆಳ್ವಿಕೆಗೆ ಶರಣಾಗಬೇಕು. ನಮ್ಮ ಸ್ವಭಾವ ಬದಲಾಗುತ್ತದೆ. ನಮ್ಮನ್ನು ನೋಡಿದವರು ದೇವರ ಮಕ್ಕಳೆಂದು ಗುರುತಿಸುತ್ತಾರೆ. ಏಕೆಂದರೆ ಅವರ ಧ್ವಜವು ನಮ್ಮಲ್ಲಿ ಉನ್ನತವಾಗಿ ಹಾರಿಸಲ್ಪಟ್ಟಿದೆ. ನಾವು ಪಾಪಕ್ಕೆ ಹೊಂದಿಕೊಂಡಿರುವಾಗ, ದೇವರ ಆಳ್ವಿಕೆಗೆ ಬಿಟ್ಟು ಕೊಡದಿರುವಾಗ, ದೇವರ ಧ್ವಜವನ್ನು ನಮ್ಮಲ್ಲಿ ಹಾರಿಸಲಾಗುವುದಿಲ್ಲ. ದೇವರ ಧ್ವಜವು ನಮ್ಮಲ್ಲಿ ಹಾರಿದರೆ, ನಾವು ಮಾಡುವ ಎಲ್ಲದರಲ್ಲೂ, ಆತ್ಮನು ಸ್ವತಃ ಹೋರಾಡುತ್ತಾರೆ, ಜಯಿಸುತ್ತಾರೆ ಮತ್ತು ನಮಗಾಗಿ ಅವರೇ ಧ್ವಜವನ್ನು ಹಾರಿಸುತ್ತಾರೆ. "ವೈರಿಯು ಪ್ರಳಯದಂತೆ ಬರುವಾಗ ಕರ್ತನ ಆತ್ಮನು ಅವನಿಗೆ ವಿರೋಧವಾಗಿ ಧ್ವಜವನ್ನೆತ್ತುವನು" (ಯೆಶಾಯ 59:19)

 

ಪ್ರಿಯರೇ, ನೀವು ಯಾರ ಆಳ್ವಿಕೆಯಲ್ಲಿ ಇದ್ದೀರಿ? ನಿಮ್ಮಲ್ಲಿ ಯಾರ ಧ್ವಜವನ್ನು ಹಾರಿಸಲಾಗಿದೆ? ಮಾಡುವ ಎಲ್ಲಾ ಕೆಲಸಗಳಲ್ಲೂ ವೈಫಲ್ಯವೇ? ಯೋಚಿಸಿ ಇಂದೇ ಶೋಧಿಸಿ ನೋಡಿ ನಿಮ್ಮನ್ನು ಆತನ ಆಳ್ವಿಕೆಗೆ ಒಪ್ಪಿಸಿಕೊಡಿ. ಕಳ್ಳನಿಗೆ ಪರದೈಸಿನಲ್ಲಿ ಸ್ಥಳ ಸಿಗಲು ಕಾರಣ, “ನಿನ್ನ ರಾಜ್ಯದಲ್ಲಿ ಬರುವಾಗ ನನ್ನನ್ನು ನೆನಪು ಮಾಡಿಕೋ" ಎಂದು ಒಪ್ಪಿಸಿಕೊಟ್ಟದ್ದೇ. ನೀವೂ ಸಹ ಒಪ್ಪಿಸಿಕೊಡಿ ಈ ಲೋಕದಲ್ಲೇ ಪರಲೋಕವನ್ನು ಕಾಣಬಹುದು. ಲೋಕದ ಶ್ರಮೆ, ಉಪದ್ರವಗಳು ನಮ್ಮನ್ನು ಜಯಿಸದಂತೆ ಲೋಕವನ್ನು ಜಯಿಸಿದಾತನು ಜೊತೆಯಿದ್ದು ಜಯಿಸಿ ನಡೆಸುತ್ತಾರೆ. ಅವು ನಮ್ಮನ್ನು ಜಯಿಸದಿದ್ದರೆ ಲೌಕಿಕ ಜೀವನವು ಸಹ ಪರಲೋಕ ಜೀವನವಲ್ಲವೇ.

- Mr. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ನಮ್ಮ ಪೂರ್ಣ ಸಮಯದ ಸೇವಕರುಗಳ ಕುಟುಂಬಗಳಲ್ಲಿ ರಕ್ಷಣೆ ಹೊಂದದಿರುವ ವ್ಯಕ್ತಿಗಳು ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al