Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.09.2023
Share:

By Village Missionary Movement

Friday, 08-Sep-2023

ಧೈನಂದಿನ ಧ್ಯಾನ(Kannada) – 08.09.2023

 

ಇಲ್ಲ ಆದರೆ ಇದೆ

 

"…ದೇವರು... ಇಲ್ಲದ್ದನ್ನು ಇರುವುದಾಗಿ ಕರೆಯುವವನಾಗಿಯೂ ಆಗಿದ್ದಾ ನೆಂದು…" - ರೋಮಾ 4:17

 

ಜಾರ್ಜ್ ಮುಲ್ಲರ್ ಎಂಬ ದೇವರ ಸೇವಕ ಅನೇಕ ನಿರ್ಗತಿಕ ಮಕ್ಕಳಿಗೆ ಒಂದು ಹಾಸ್ಟೆಲ್ ಅನ್ನು ನಡೆಸಿದವರು. ಅವರ ದೈನಂದಿನ ಅಗತ್ಯಗಳಿಗಾಗಿ ದೇವರ ಮೇಲಿರುವ ನಂಬಿಕೆಯ ಮೂಲಕವೇ ಅವರನ್ನು ಪೋಷಿಸುತ್ತಿದ್ದರು.

 

ಒಂದು ದಿನ ಬೆಳಿಗ್ಗೆ ತಿಂಡಿಯ ಸಮಯ ಬಂದಾಗ, ಆಹಾರವೇನೂ ಇರಲಿಲ್ಲ. ಏನಾದರೂ ತೆಗೆದುಕೊಳ್ಳಬೇಕೆಂದರೂ ಕೈಯಲ್ಲಿ ಯಾವ ಹಣವೂ ಇಲ್ಲ. ಅಲ್ಲಿ ಎಲ್ಲಾ ಪ್ಲೇಟ್‌ಗಳು ಮತ್ತು ಎಲ್ಲಾ ಲೋಟಗಳು ಖಾಲಿಯಾಗಿದ್ದವು. ಆದರೂ ಮಕ್ಕಳೆಲ್ಲರೂ ಕುಳಿತುಕೊಂಡು ತಲೆಬಾಗಿ "ನಮ್ಮ ತಂದೆಯೇ, ನೀವು ನಮಗೆ ನೀಡುವ ಆಹಾರಕ್ಕಾಗಿ ಧನ್ಯವಾದಗಳು" ಎಂದು ಹೇಳಿ ಪ್ರಾರ್ಥಿಸಿ ಎಂದರು. ನಾವು ಆಮೆನ್ ಎಂದು ಹೇಳುವ ಮೊದಲು, ಬಾಗಿಲು ತಟ್ಟುವ ಶಬ್ದ ಕೇಳಿಸಿತು. ಅಲ್ಲಿ ಬ್ರೆಡ್ ಮಾಡುವವರು ನಿಂತಿದ್ದರು. ಅವರು "ನನಗೆ ರಾತ್ರಿಯೆಲ್ಲಾ ನಿದ್ದೆಯಿಲ್ಲ, ನಿಮಗೆ ತಿನ್ನಲು ಏನೂ ಇಲ್ಲ ಎಂದು ನನಗೆ ತೋಚಿತು. ಹಾಗಾಗಿ ನಾನು ಬೆಳಿಗ್ಗೆ 2 ಗಂಟೆಗೆ ಎದ್ದು ಈ ರೊಟ್ಟಿಗಳನ್ನು ನಿಮಗಾಗಿ ಹೊಸದಾಗಿ ಮಾಡಿದ್ದೇನೆ” ಎಂದು ಹೇಳಿ ರೊಟ್ಟಿಗಳನ್ನು ಕೊಟ್ಟರು.

 

ಅವರು ಹೋದ ತಕ್ಷಣವೇ ಮತ್ತೆ ಬಾಗಿಲು ತಟ್ಟುವ ಸದ್ದು ಕೇಳಿಸಿತು. ತೆರೆದು ನೋಡಿದರೆ ಹಾಲು ಕೊಡುವವರು, ಈ ಅನಾಥಾಶ್ರಮದ ಮುಂದೆ ನನ್ನ ಗಾಡಿ ರಿಪೇರಿಯಾಗಿ ನಿಂತು ಹೋಯಿತು‌. ಅದನ್ನು ರಿಪೇರಿ ಮಾಡಬೇಕಾದರೆ, ಅದರಲ್ಲಿರುವ ಎಲ್ಲಾ ಹಾಲನ್ನು ಹೊರತೆಗೆಯಬೇಕು. ಅದಕ್ಕೆ ಈ ಹಾಲನ್ನು ತೆಗೆದುಕೊಳ್ಳುತ್ತೀರಾ? ಎಂದು ಕೇಳಿದರಂತೆ. ದೇವರು ಎಷ್ಟು ಚೆನ್ನಾಗಿ ಬೆಳಗಿನ ಉಪಹಾರವನ್ನು ಕೊಟ್ಟರು" ಎಂದು ಭಾವಿಸಿ ಎಲ್ಲರೂ ಆಶ್ಚರ್ಯಪಟ್ಟರು.

 

ಕ್ರಿಸ್ತನಲ್ಲಿ ಪ್ರಿಯರೇ, ನೀವೂ ಸಹ ಅನುಪಸ್ಥಿತಿಯಲ್ಲಿ ಹೋಗುತ್ತಿರಬಹುದು. ಕಳವಳಗೊಳ್ಳಬೇಡಿರಿ. ದೇವರು ಬರೀ ಮಾತಿನಿಂದ ಭೂಮಿಯ ಮೇಲಿರುವ ಎಲ್ಲವನ್ನೂ ಸೃಷ್ಟಿಸಿದರು. ಅದರಂತೆಯೇ, ಮಕ್ಕಳಿಲ್ಲದ ಅಬ್ರಹಾಂ-ಸಾರಳನ್ನು ಜನಾಂಗಗಳಿಗೆ ತಂದೆ ಮತ್ತು ತಾಯಿ ಎಂದು ಕರೆದರು. ಮೋಸಗಾರನಾಗಿದ್ದ ಯಾಕೋಬನನ್ನು ಆಶೀರ್ವದಿಸಿದರು ಮತ್ತು ಗೋತ್ರಗಳಿಗೆ ತಂದೆಯನ್ನಾಗಿ ಮಾರ್ಪಡಿಸಿದರು.

 

ನಾವು ಸಹ ಸಂತೋಷವಿಲ್ಲ, ಸುಖವಿಲ್ಲ, ಹಣವಿಲ್ಲ, ನೆಮ್ಮದಿ ಇಲ್ಲ ಎಂದೆಲ್ಲಾ ಚಿಂತಿಸುತ್ತಿದ್ದರೆ ಇಂದೇ ಒಂದು ದೃಢವಾದ ನಿರ್ಧಾರ ತೆಗೆದುಕೊಳ್ಳೋಣ. ದೇವರು ಎಲ್ಲವನ್ನು ಕೊಡಬಲ್ಲನೆಂದು ನಂಬೋಣ. ದೇವರು ಖಂಡಿತವಾಗಿಯೂ ನಮ್ಮ ನಂಬಿಕೆಯನ್ನು ಗೌರವಿಸುತ್ತಾರೆ ಮತ್ತು ನಮಗೆ ಬೇಕಾದ ಎಲ್ಲವನ್ನೂ ಕೊಡುತ್ತಾರೆ. ಆದ್ದರಿಂದ ಚಿಂತೆ ಬೇಡ. ದೇವರ ಹೆಸರಿನಲ್ಲಿ ನಂಬಿಕೆ ಇಡೋಣ. ಗೆಲ್ಲೋಣ. ಆಮೆನ್!

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ದೆಬೋರಾಳ್ ಗುಂಪುಗಳ ಮೂಲಕ ನಡೆಯುವಂತಹ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş