Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.09.2023
Share:

By Village Missionary Movement

Wednesday, 06-Sep-2023

ಧೈನಂದಿನ ಧ್ಯಾನ(Kannada) – 07.09.2023

 

ಕಲ್ವಾರಿ ಪ್ರೀತಿ

 

"ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ; . . . ನಾನು ಜೀವಿಸುವದು ದೇವಕುಮಾರನ ಮೇಲಣ ನಂಬಿಕೆ ಯಲ್ಲಿಯೇ" - ಗಲಾತ್ಯ 2:20

 

ನಾವು ಕ್ರಿಸ್ತನ ರಕ್ತದಿಂದ ವಿಮೋಚಿಸಲ್ಪಟ್ಟು, ಆತನನ್ನು ನಮ್ಮ ಸ್ವಂತ ರಕ್ಷಕನಾಗಿ ಸ್ವೀಕರಿಸಿದ್ದರೆ, ಆತನ ಪ್ರೀತಿಯು ನಮ್ಮೊಳಗಿರಬೇಕು. ಇಂದಿನ ಧ್ಯಾನದಲ್ಲಿ, "ಕಲ್ವಾರಿ ಪ್ರೀತಿ" ಎಂಬ ಶೀರ್ಷಿಕೆಯಡಿಯಲ್ಲಿ ಏಮಿ ಕಾರ್ಮೈಕಲ್ ಅಮ್ಮನವರು ಬರೆದಿರುವ ಅನಿಸಿಕೆಗಳನ್ನು ಓದಿ ಅವುಗಳು ನಮ್ಮಲ್ಲಿ ಕಾಣಲ್ಪಡುತ್ತಿದೆಯೇ ಎಂದು ನಮ್ಮನ್ನು ಪರೀಕ್ಷಿಸಿಕೊಳ್ಳೋಣವಾ?

 

ಪ್ರೀತಿಯಿಲ್ಲದ ಮಾತನ್ನು ಮಾತನಾಡಿಬಿಟ್ಟು, ಪ್ರೀತಿಯಿಲ್ಲದ ಆಲೋಚನೆಯನ್ನಿಟ್ಟುಕೊಂಡು,ಅದರ ಬಗ್ಗೆ ಸ್ವಲ್ಪವೂ ಕೂಡ ಮನೋವೇದನೆ ಇಲ್ಲದಿದ್ದರೆ, ನಾನು ಕಲ್ವಾರಿ ಪ್ರೀತಿಯನ್ನು ಇನ್ನೂ ತಿಳಿಯದವನಾಗಿದ್ದೇನೆ.

 

ನಾನು ಕೆಲವರ ಸ್ನೇಹವನ್ನು ಕಳೆದುಕೊಳ್ಳಬಾರದು ಎಂಬುದಕ್ಕಾಗಿ ಸತ್ಯವನ್ನು ಮನದಾಳದಿಂದ ಮಾತನಾಡಲು ಹೆದರುತ್ತಿದ್ದರೆ ನಾನು ಇನ್ನೂ ಕಲ್ವಾರಿ ಪ್ರೀತಿಯನ್ನು ತಿಳಿಯದವನಾಗಿದ್ದೇನೆ.

 

ಸ್ವಾರ್ಥ ಅನುಕಂಪ ಎಂಬ ಮಾರಣಾಂತಿಕ ದುಷ್ಕೃತ್ಯದಲ್ಲಿ ಆರಾಮವಾಗಿ ಬಿದ್ದುಕೊಂಡು, ಯಾವಾಗಲೂ ನನ್ನ ಬಗ್ಗೆ ಚಿಂತಿಸುತ್ತಲೇ ಮುಳುಗಿಹೋಗಿ ಎಲ್ಲವನ್ನು ದೇವರ ಕೃಪೆಯ ಸಹಾಯದಿಂದ ಧೈರ್ಯವಾಗಿ ಎದುರಿಸಿ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರೆ, ನಾನು ಇನ್ನೂ ಕಲ್ವಾರಿ ಪ್ರೀತಿಯನ್ನು ತಿಳಿಯದವನಾಗಿದ್ದೇನೆ.

 

ಸಿಹಿಸಿಹಿಯಾದ ನೀರು ತುಂಬಿದ ಪಾತ್ರೆಯನ್ನು ನೀವು ಹೇಗೆ ಅಲ್ಲಾಡಿಸಿದರೂ, ಅದರಿಂದ ಚೆಲ್ಲುವ ನೀರಿನಲ್ಲಿ ಒಂದು ಹನಿಯೂ ಕೂಡ ಕಹಿಯಾಗಿ ಮಾರ್ಪಡುವುದಿಲ್ಲ. ಹಾಗಿರುವಾಗ ನನ್ನನ್ನು ದಿಢೀರೆಂದು ಅಲುಗಾಡಿಸುವ ಸಂದರ್ಭವು ನನ್ನನ್ನು ಅಸಹನೆಯ ಪ್ರೀತಿರಹಿತ ಮಾತುಗಳನ್ನು ಮಾತನಾಡುವಂತೆ ಮಾಡಿದರೆ, ನಾನು ಕಲ್ವಾರಿ ಪ್ರೀತಿಯನ್ನು ತಿಳಿಯದವನಾಗಿದ್ದೇನೆ.

 

ನನ್ನ ಮೇಲೆ ಯಾರೋ ಅನ್ಯಾಯವಾಗಿ ಆರೋಪ ಹೊರಿಸಿದಾಗ ನನ್ನನ್ನು ನಾನು ತಿಳಿದಿರುವಂತೆ, ಅವರು ನನ್ನನ್ನು ತಿಳಿದಿದ್ದರೆ ಅವರು ಈಗ ನನ್ನ ಮೇಲೆ ಮಾಡಿದ ಅಪರಾಧಕ್ಕಿಂತ ಹೆಚ್ಚಾಗಿ ನನ್ನ ಮೇಲೆ ಆರೋಪ ಹೊರಿಸಬಹುದು ಎಂಬ ಸತ್ಯವನ್ನು ಮರೆತು ಅವರ ಬಳಿ ಕಹಿಯುಳ್ಳವನಾಗಿರುತ್ತೇನೆ ಎಂಬುದಾದರೆ ನಾನು ಕಲ್ವಾರಿ ಪ್ರೀತಿಯನ್ನು ಇನ್ನೂ ತಿಳಿಯದವನಾಗಿದ್ದೇನೆ.

 

ಇತರರಿಂದ ಕ್ರೂರವಾಗಿ ನಡೆಸಲ್ಪಡುವುದು, ಬಯಸದ ಪರಿಸ್ಥಿತಿಯಲ್ಲಿ ತಳ್ಳಲ್ಪಡುವುದು ಇಂತಹ ಕಠಿಣ ವಿಷಯಗಳಿಗೆ ಒಳಗಾಗಬೇಕಾದದ್ದು ದೇವರ ಸೇವೆಗೆ (ಅಥವಾ) ದೇವರು ನನ್ನನ್ನು ರೂಪಿಸಲು ಅಗತ್ಯವಿರುವಾಗ, ನಾನು ಅದನ್ನು ತಪ್ಪಿಸಲು ಪ್ರಯತ್ನಿಸಿದರೆ, ಕಲ್ವಾರಿ ಪ್ರೀತಿಯನ್ನು ಇನ್ನೂ ತಿಳಿಯದವನಾಗಿದ್ದೇನೆ. ಯೋಚಿಸೋಣ! ಮಾಡೋಣ!

- Mrs. ಜಯಂತಿ ಬಾಕ್ಯನಾಥನ್.

 

ಪ್ರಾರ್ಥನಾ ಅಂಶ:

ಈ ತಿಂಗಳು ನಡೆಯುವಂತೆ ಯೋಜಿಸಲಾದ ಸುವಾರ್ತಾ ಶಿಬಿರ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al